
ನಿಮ್ಮ ಜೀವನ ಸಂಗಾತಿಯ ಖುಷಿ ನಿಮ್ಮ ಆರೋಗ್ಯವಂತನನ್ನಾಗಿಸುತ್ತದೆ. ಇದೇ ನಿಮ್ಮನ್ನು ಉಜ್ವಲ ಭವಿಷ್ಯವನ್ನು ರೂಪಿಸಲು ಪ್ರೇರೇಪಿಸುತ್ತದೆ. ಹೇಗೆ ಅಂತೀರಾ? ಹಾಗಾದ್ರೆ ಇದನ್ನು ಓದಿ
ಅಧ್ಯಯನವೊಂದರಿಂದ ಖುಷಿಯಾಗಿ, ನಗುತ್ತಿರುವ ಸಂಗಾತಿಯೊಡನೆ ಸಮಯ ಕಳೆಯುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಎಂದು ತಿಳಿದುಬಂದಿದೆ. ಮಿಶಿಗನ್'ನ ವಿಶ್ವವಿದ್ಯಾನಿಲಯ ನಡೆಸಿದ ಈ ಅಧ್ಯಯನವನ್ನು 1981 ಮಧ್ಯಮ ವಯಸ್ಕ ಜೋಡಿಗಳ ಮೇಲೆ ನಡೆಸಲಾಗಿತ್ತು.
ಅಧ್ಯಯನದ ಸಮಯದಲ್ಲಿ ಖುಷಿಯಾಗಿರುವ ಜೀವನ ಸಂಗಾತಿಗಳ ಆರೋಗ್ಯದಲ್ಲಿ ಅಭಿವೃದ್ಧಿ ಕಂಡುಬಂದಿದೆ. ಈ ಮೊದಲು ಖುಷಿಯಾಗಿದ್ದ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ನಿಟ್ಟಿನಲ್ಲಿ ಖುಷಿಯಾಗಿರುವ ವ್ಯಕ್ತಿಯೊಡನೆ ಸಮಯ ಕಳೆಯುವ ವ್ಯಕ್ತಿಯ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುವುದನ್ನು ತಿಳಿಯುವ ಸಲುವಾಗಿ ಇಂತಹ ಅಧ್ಯಯನವನ್ನು ನಡೆಸಿದ್ದಾಗೆ ವಿಶ್ವವಿದ್ಯಾನಿಲಯ ತಿಳಿಸಿದೆ.
ಅಧ್ಯಯನಕ್ಕೊಳಪಡಿಸಿದ ಜೋಡಿಗಳನ್ನು ಪರಿಶೀಲಿಸಿದಾಗ ಖುಷಿಯಾಗಿರುವ ಸಂಗಾತಿ ಇರುವವರು ಸಧೃಡರಾಗಿರುವುದರೊಂದಿಗೆ ಸಮಾಜದಲ್ಲಿ ಹೆಚ್ಚು ಬೆರೆತುಕೊಳ್ಳುತ್ತಾರೆ. ಇನ್ನು ಬೇಜಾರಾಗಿರುವ ಸಂಗಾತಿಯನ್ನು ಹೊಂದಿರುವವರು ಅಸಮಾಧಾನ ಹಾಗೂ ತನ್ನದೇ ಸಮಸ್ಯೆಗಳಲ್ಲಿ ಮುಳುಗಿರುತ್ತಾರೆ ಎಂಬುವುದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.