
ಬೇಕಾಗುವ ಸಾಮಾಗ್ರಿಗಳು
-1 ಚಮಚ ಎಣ್ಣೆ
-2 ಬ್ಯಾಡಗಿ ಮೆಣಸು
-1 ಹಸಿ ಮೆಣಸಿನಕಾಯಿ
-2 ಟೊಮ್ಯಾಟೊ
- ರುಚಿಗೆ ತಕ್ಕಷ್ಟು ಉಪ್ಪು
- ಕಾಲು ಕಪ್ ಕಡ್ಲೆಕಾಯಿ ಬೀಜ
- ಹುಣಸೆ ಹಣ್ಣು
- ಸ್ವಲ್ಪ ನೀರು
- ಚಿಟಿಕೆ ಸಾಸಿವೆ
- ಸ್ವಲ್ಪ ಉದ್ದಿನಬೇಳೆ
- ಕರಿಬೇವು
ಮಾಡುವ ವಿಧಾನ:
ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದಕ್ಕೆ ಬ್ಯಾಡಗಿ ಮೆಣಸು, ಹಸಿ ಮೆಣಸಿನಕಾಯಿ ಹಾಕಿ ಹುರಿದು, ಅದಕ್ಕೆ ಹೆಚ್ಚಿದ ಎರಡು ಟೊಮ್ಯಾಟೊ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅದು ಮೆತ್ತಗಾಗುವವರೆಗೂ ಬೇಯಿಸಿ. 1/4 ಕಪ್ ಹುರಿದ ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜ, ಹುಣಸೆ ಹಣ್ಣು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಶೇಂಗಾ-ಟೊಮ್ಯಾಟೊ ಚಟ್ನಿ ಸವಿಯಲು ಸಿದ್ಧ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.