ಆಲೂ, ಗೋಬಿ ಪರೋಟಾ ಗೊತ್ತು, ಬಟಾಣಿ ಪರೋಟಾ?

First Published Jul 26, 2018, 9:54 AM IST
Highlights

ಗೋಬಿ ಪರೋಟಾ ಗೊತ್ತು ಆಲೂ ಪರೋಟಾ ಗೊತ್ತು. ಆದರೆ, ಬಟಾಣಿ ಪರೋಟಾವೂ ಮಾಡಬಹುದು ಗೊತ್ತಾ? ತುಸು ವಿಭಿನ್ನ ತಿಂಡಿ ಬೇಕೆನ್ನಿಸಿದರೆ ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

ಮಾಮೂಲಿ ಚಪಾತಿಗಿಂತ ಪರೋಟಾ ಮಾಡಿದ್ರೆ ವಿಭಿನ್ನ ರುಚಿ ಎನಿಸುತ್ತದೆ. ಸಾಮಾನ್ಯವಾಗಿ ಆಲೂ ಪಲ್ಯ ಮಾಡಿ, ಸ್ಟಫ್ ಇಟ್ಟು ಮಾಡುವ ಪರೋಟಾ ಎಂದರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಆದರೆ, ಬಟಾಣಿ ಪರೋಟಾವು ಮಾಡಬಹುದು. ಇಲ್ಲಿದೆ ರೆಸಿಪಿ....

ಬೇಕಾಗುವ ಸಾಮಾಗ್ರಿಗಳು:

  • ಅರ್ಥ ಕಪ್ ಬೇಯಿಸಿದ ಬಟಾಣಿ
  • ಕೊತ್ತಂಬರಿ ಸೊಪ್ಪು
  • ಶುಂಠಿ
  • ಮೆಣಸಿನಕಾಯಿ
  • ಮೈದಾ ಹಿಟ್ಟು
  • ಜೀರಿಗೆ
  • ಗರಂ ಮಸಾಲ
  • ಆಮ್‌ಚೂರ್
  • ಉಪ್ಪು
  • ಎಣ್ಣೆ 

ಮಾಡುವ ವಿಧಾನ:

ಮಿಕ್ಸಿಯಲ್ಲಿ ಬಟಾಣಿ, ಕೊತ್ತಂಬರಿ ಸೊಪ್ಪು,  ಶುಂಠಿ, ಮೆಣಸಿನಕಾಯಿ ಮತ್ತು ಸ್ವಲ್ಪವೇ ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಜೀರಿಗೆ, ಗರಂ ಮಸಾಲ, ಆಮ್‌ಚೂರ್ ಮತ್ತು ಉಪ್ಪು ಜೊತೆಗೆ ಬಟಾಣಿ ಪೇಸ್ಟ್ ಸೇರಿಸಿ. ಚಪಾತಿ ಹಿಟ್ಟಿನಂತೆ ಆಗುವ ಹಾಗೆ ಕಲಿಸಿ. ಲಟ್ಟಿಸಿ, ಬೇಯಿಸಿದರೆ ಬಟಾಣಿ ಪರೋಟಾ ರೆಡಿ. ಮೊಸರು, ಸಾಸ್‌ನೊಟ್ಟಿಗೂ ಇದನ್ನು ಸೇವಿಸಬಹುದು.

click me!