ಹಸಿಮೆಣಸಿನ ಸ್ವೀಟ್​ ಹಲ್ವಾ ತಿಂದಿದ್ದೀರಾ? ಒಮ್ಮೆ ತಿಂದ್ರೆ ಬಾಯಿ ಚಪ್ಪರಿಸ್ತೀರಾ- ಇಲ್ಲಿದೆ ನೋಡಿ ರೆಸಿಪಿ

Published : Aug 30, 2026, 08:01 PM IST
Chilly Halwa

ಸಾರಾಂಶ

ಹಸಿಮೆಣಸಿನ ಕಾಯಿಯಿಂದ ಸ್ವೀಟ್ ತಯಾರಿಸುವ ವಿಶಿಷ್ಟ ರೆಸಿಪಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮೆಣಸಿನಕಾಯಿಯ ಖಾರವನ್ನು ತೆಗೆದು, ಖೋಯಾ, ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಬಳಸಿ ಬಾಯಿ ಚಪ್ಪರಿಸುವಂತಹ ಸಿಹಿ ಖಾದ್ಯವನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದು ಹೇಗೆಂದು ತಿಳಿಸಲಾಗಿದೆ.

ಹಸಿಮೆಣಸಿನ ಕಾಯಿ (Green Chilly) ಹೆಸರು ಕೇಳಿದರೆ ಹಲವರು ಅಯ್ಯಬ್ಬಾ ಎನ್ನುವುದು ಇದೆ. ಇದನ್ನು ಬಾಯಲ್ಲಿ ಇಟ್ಟರೆ ನಖಶಿಖಾಂತ ಉರಿ ಹತ್ತಿಕೊಳ್ಳುತ್ತದೆ. ಇದರ ಹೊರತಾಗಿಯೂ ಕೆಲವು ಕಡೆಗಳಲ್ಲಿ ಹಸಿಮೆಣಸಿನ ಕಾಯಿಯನ್ನು ಬಾಡಿಸಿ ತಿನ್ನುವವರು ಇದ್ದಾರೆ. ಆದರೆ ಇಲ್ಲಿ ಹೇಳ್ತಿರೋದು ಮಾತ್ರ, ಹಸಿಮೆಣಸಿನ ಕಾಯಿಯ ಸ್ವೀಟ್​! ಸ್ವೀಟಾ? ಅದೂ ಹಸಿಮೆಣಸಿನ ಕಾಯಿಯದ್ದಾ? ಎಲ್ಲಿಯ ಖಾರ, ಎಲ್ಲಿಯ ಸ್ವೀಟ್​ ಅಂತೀರಿ ಅಲ್ವಾ? ಆದರೆ ಈ ರೆಸಿಪಿ ಒಮ್ಮೆ ಮನೆಯಲ್ಲಿ ಮಾಡಿ ನೋಡಿ, ಒಮ್ಮೆ ತಿಂದ್ರೆ ಬಾಯಿ ಚಪ್ಪರಿಸ್ತೀರಾ.ಮತ್ತೆ ಮತ್ತೆ ತಿಂತೀರಾ ನೋಡಿ.

ಇದಕ್ಕೆ ಏನೆಲ್ಲಾ ಬೇಕು ಎನ್ನೋದನ್ನು ಮೊದಲು ನೋಡೋಣ

ಬೇಕಾಗುವ ಪದಾರ್ಥಗಳು:

150-200 ಗ್ರಾಂ ಕಡಿಮೆ ಖಾರವಿರುವ ದೊಡ್ಡ ಹಸಿರು ಮೆಣಸಿನಕಾಯಿಗಳು (ಇವುಗಳನ್ನು ಎರಡು ಸೀಳಿ ಬೀಜ ತೆಗೆಯಬೇಕು)

3 ರಿಂದ 4 ಚಮಚ ತುಪ್ಪ

100 ಗ್ರಾಂ ಮಾವಾ (ಖೋಯಾ)

1/4 ಕಪ್ ಸಕ್ಕರೆ

2 ಚಮಚ ರವೆ (ರವೆ - ಐಚ್ಛಿಕ)

ಅರ್ಧ ಚಮಚ ಏಲಕ್ಕಿ ಪುಡಿ

ಪೀಸ್​ ಮಾಡಿಟ್ಟ ಒಣ ಹಣ್ಣುಗಳು (ಒಣದ್ರಾಕ್ಷಿ, ಬಾದಾಮಿ, ಗೋಡಂಬಿ ಇತ್ಯಾದಿ)

ತಯಾರಿಸುವ ವಿಧಾನ:

- ಮೊದಲಿಗೆ ದೊಡ್ಡ ಹಸಿರು ಮೆಣಸಿನಕಾಯಿಗಳನ್ನು ಮಧ್ಯದಿಂದ ಸೀಳಿ ಅದರ ಎಲ್ಲಾ ಬೀಜಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ.

- ಮೆಣಸಿನಕಾಯಿ ತುಂಡುಗಳು ಅಥವಾ ಕತ್ತರಿಸಿದ ಮೆಣಸಿನಕಾಯಿಗಳನ್ನು 3 ರಿಂದ 4 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಇದರಿಂದ ಮೆಣಸಿನಲ್ಲಿ ಇರುವ ಖಾರ ಮತ್ತು ಕಹಿ ಸಂಪೂರ್ಣವಾಗಿ ಹೋಗುತ್ತದೆ.

- ಈ ನೀರನ್ನು ಎಸೆದು ಪ್ರಕ್ರಿಯೆಯನ್ನು 2-3 ಬಾರಿ ಪುನರಾವರ್ತಿಸಿ.

- ಬಳಿಕ ಕುದಿಸಿದ ಮೆಣಸಿನಕಾಯಿಗಳನ್ನು ಮಿಕ್ಸರ್‌ನಲ್ಲಿ ಪುಡಿಮಾಡಿ ಪೇಸ್ಟ್ ಮಾಡಿ.

- ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಮತ್ತು ತುಪ್ಪ ಬೇರ್ಪಡಲು ಪ್ರಾರಂಭವಾಗುವವರೆಗೆ 5-6 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.

- ಈಗ ಅದಕ್ಕೆ ಮಾವಾ, ರವೆ ಮತ್ತು ಸಕ್ಕರೆ ಸೇರಿಸಿ ನಿರಂತರವಾಗಿ ಕೈಯಾಡಿಸುತ್ತಿರಿ.

- ಕೊನೆಗೆ ಏಲಕ್ಕಿ ಪುಡಿ ಮತ್ತು ಒಣದ್ರಾಕ್ಷಿ/ಬಾದಾಮಿ, ಗೋಡಂಬಿ ಸೇರಿಸಿ ಮಿಶ್ರಣ ಮಾಡಿ.

- ಅವೆಲ್ಲವೂ ಪ್ಯಾನ್ ಬಿಟ್ಟ ನಂತರ ಬಿಸಿಯಾಗಿ ಅಥವಾ ತಣ್ಣಗೆ ಬಡಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಮಲದ ಬಳಿಕ ಮತ್ತೊಂದು ಕುತೂಹಲದ ಟ್ಯಾಟೂ ಹಾಕಿಸಿಕೊಂಡ ವಿರಾಟ್​ ಕೊಹ್ಲಿ: ಏನಿದರ ಗುಟ್ಟು
ಅಡುಗೆ ಗೊತ್ತಿಲ್ಲದವರೂ ಕೇವಲ 15 ನಿಮಿಷದಲ್ಲಿ ಮಾಡಬಹುದು​ ಬೇಕರಿ ಶೈಲಿಯ ಕ್ರಂಚಿ ಮಿನಿ ಕೋಡುಬಳೆ