
ತುಂಬಾ ದಪ್ಪಗಿರುವವರು ಸಂತೋಷಪಡುವ ವಿಚಾರವೊಂದಿದೆ. ಅದೇನೆಂದರೆ ತುಂಬಾ ದಪ್ಪಗಿರುವವರಲ್ಲಿ ಶೇಖರಣೆಯಾಗಿರುವ ಕೊಬ್ಬು ಅಂಥವರನ್ನು ಸೋಕಿನಿಂದ ದೂರವಿಡುತ್ತದೆಯಂತೆ. ಹೌದು ಎನ್‌ಐಎಚ್ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ, ಕೊಬ್ಬು ವಿಶೇಷ ರೀತಿಯ ಸೋಂಕಿನ ವಿರುದ್ಧ ಹೋರಾಡುವ ಟಿ- ಕೋಶಗಳನ್ನು ಹೊಂದಿರುತ್ತದೆ ಎಂದು ಕಂಡುಕೊಂಡಿದ್ದಾರೆ.
ಈ ಟಿ-ಕೋಶಗಳು ದೇಹದಾದ್ಯಂತ ಹರಡಿರುತ್ತವೆ ಅದರಲ್ಲೂ ಕೊಬ್ಬಿನಲ್ಲಿ ಹೆಚ್ಚಾಗಿ ಶೇಖರಣೆಯಾಗಿರುತ್ತದೆ. ಇದು ಬ್ಯಾಕ್ಟ್ರೀರಿಯಾ ಹರಡುವ ಸೋಂಕಿನ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುತ್ತದೆ. ಈ ಕೊಬ್ಬಿಗೆ ಮಾರಣಾಂತಿಕ ರೋಗಗಳ ವಿರುದ್ಧವೂ ಹೋರಾಡುವ ಶಕ್ತಿ ಇದೆ. ಕೊಬ್ಬು ಕೇವಲ ಸೋಂಕುಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ದೇಹದ ಉಷ್ಣತೆ ಮತ್ತು ಇಡೀ ದೇಹದ ವ್ಯವಸ್ಥೆಯ ನಿರ್ವಹಣೆಗೆ ಅಗತ್ಯವಾಗಿದೆ. ಆದರೆ ಹೆಚ್ಚು ಕೊಬ್ಬು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದೆಂದು ಸಂಶೋಧಕರು ಹೇಳುತ್ತಾರೆ.
ಈ ಟಿ-ಸೆಲ್ಸ್ ಮಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುವ ಬಿಳಿರಕ್ತಕಣಗಳ ಒಂದು ವಿಧ. ದೇಹದಲ್ಲಿ ಕಡಿಮೆ ಪ್ರಮಾಣದ ಟಿ-ಕೋಶಗಳಿದ್ದರೆ ಅದು ದೇಹಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಹೀಗಾಗಿ ಹೊಟ್ಟೆ ದಪ್ಪಗಿದೆ, ಕೊಬ್ಬು ಶೇಖರಣೆಯಾಗಿದೆ ಎಂದು ಕೊರಗುವ ಅಗತ್ಯವಿಲ್ಲ. ಆದರೆ ಅತಿಯಾದ ಕೊಬ್ಬು ಶೇಖರಣೆಯಾಗದಂತೆ ಎಚ್ಚರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.