
ಲೈಂಗಿಕತೆ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಇತಿಹಾಸದಲ್ಲಿ ಇದಕ್ಕಾಗಿಯೇ ಅದೆಷ್ಟೋ ಯುದ್ಧಗಳು ನಡೆದಿವೆ, ಆದರೆ ತಂತ್ರಜ್ಞಾನವೂ ಲೈಂಗಿಕತೆಯ ಸ್ವರೂಪನ್ನು ಸಹ ಬದಲಾಯಿಸುತ್ತದೆಯಂತೆ.
ಸಂಶೋಧಕರು ನಡೆಸಿದ ಒಂದು ಸಮೀಕ್ಷೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ತಾವು 18ವರ್ಷಕ್ಕಿಂತ ಮುಂಚೆಯೇ ಪೋರ್ನೋಗ್ರಫಿ ವೆಬ್‌ಸೈಟ್ ಗಳಿಗೆ ಭೇಟಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಫೋರ್ನೋಗ್ರಫಿಯಿಂದ ತಮ್ಮ ವಯಸ್ಸಿನ ಭಾಷೆ, ಲೈಂಗಿಕತೆಯ ಸ್ವರೂಪ ಮತ್ತು ಸಂಗಾತಿಗಳು ಏನನ್ನು ಬಯಸುತ್ತಾರೆಂಬುದನ್ನು ತಿಳಿದು ಕೊಂಡಿದ್ದೇವೆ, ಅದು ಹೆಚ್ಚು ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಇಂದು ಲೈಂಗಿಕತೆ ಎಂಬುದು ಡಿಜಿಟಲೀಕರಣಗೊಂಡಿದೆ. ಆನ್‌ಲೈನ್‌ನಲ್ಲಿ ಪೋರ್ನೋಗ್ರಫಿ ರೂಪದಲ್ಲಿ ಎಲ್ಲರಿಗೂ ಕೈಗೆಟುಕುತ್ತಿದೆ. ಇದೀಗ ಅಮೆರಿಕದ ಶೇ.40ರಷ್ಟು ಜನರು ಆನ್‌ಲೈನ್ ಡೇಟಿಂಗ್ ಸರ್ವೀಸ್‌ನ್ನು ಬಳಸುತ್ತಿದ್ದಾರೆ. ಹಾಗಾಗಿ ಮುಂದಿನ ಜನಾಂಗದ ಲೈಂಗಿಕತೆಯು ತಂತ್ರಜ್ಞಾನದ ಮೂಲಕವೇ ನಡೆಯಬಹುದೆಂದು ಸಂಶೋಧಕರು ಊಹಿಸಿದ್ದಾರೆ.
ಆದರೆ ತಂತ್ರಜ್ಞಾನಾಧಾರಿತ ಡೇಟಿಂಗ್‌ನಿಂದ ಅರ್ಥಪೂರ್ಣ ಸಂಬಂಧಗಳ ಸಂಖ್ಯೆ ಹೆಚ್ಚಾಗಬಹುದು.ಡೇಟಿಂಗ್ ಮತ್ತು ಲೈಂಗಿಕತೆ ಎಂಬುದು ಇದಕ್ಕಿಂತ ಭಿನ್ನವಾದಂತಹವು. ಇದೂ ಕೂಡಾ ಆನ್‌ಲೈನ್’ನಲ್ಲಿ ಸಾಧ್ಯವಾಗುತ್ತದೆಂಬುದು ಆಘಾತಕಾರಿ ಬೆಳವಣಿಗೆ ಎನ್ನುತ್ತಾರೆ ಸಂಶೋಧಕರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.