ಬಾಯಲ್ಲಿ ನೀರೂರಿಸುವ ದೊಣ್ಣೆ ಮೆಣಸಿನಕಾಯಿ ಬೋಂಡಾ..!

By Suvarna Web DeskFirst Published Feb 23, 2018, 3:51 PM IST
Highlights

ಬಾಯಲ್ಲಿ ನೀರೂರಿಸುವ ದೊಣ್ಣೆ ಮೆಣಸಿನಕಾಯಿ ಬೋಂಡಾ..!  ದೊಣ್ಣೆ ಮೆಣಸಿನಕಾಯಿ ಬೋಂಡಾ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ದೊಣ್ಣೆ ಮೆಣಸಿನಕಾಯಿ ಬೋಂಡಾ..!

ದೊಣ್ಣೆ ಮೆಣಸಿನಕಾಯಿ ಬೋಂಡಾ ಮಾಡುವ ವಿಧಾನ

ಬೇಕಾಗುವ ಸಮಯ – 15 ನಿಮಿಷ

ಕ್ಯಾಲೊರಿ – 310

ಬೇಕಾಗುವ ಸಾಮಾಗ್ರಿ

6ರಿಂದ  8 ದೊಣ್ಣೆ ಮೆಣಸಿನ ಕಾಯಿ

ಎಣ್ಣೆ

ಸ್ಟಫ್ ಮಾಡಲು ಬೇಕಾಗುವ ಸಾಮಾಗ್ರಿ

4 ಮಧ್ಯಮಗಾತ್ರದ ಆಲೂಗಡ್ಡೆ – ಬೇಯಿಸಿ ಸ್ಮ್ಯಾಶ್ ಮಾಡಿಕೊಂಡಿದ್ದು

1 ಹಸಿರು ಮೆಣಸಿನ ಕಾಯಿ – ಹೆಚ್ಚಿಕೊಳ್ಳಬೇಕು

10 ಗ್ರಾಂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಂಡಿದ್ದು

5 ಗ್ರಾಂ ಸೋಂಪು ಕಾಳು

10 ಗ್ರಾಂ ಕೊತ್ತಂಬರಿ ಕಾಳಿನ ಪುಡಿ

10 ಗ್ರಾಂ ಒಣ ಮಾವಿನ ಪುಡಿ

5 ಗ್ರಾಂ ಜೀರಿಗೆ ಪುಡಿ

2 ಗ್ರಾಂ ಕೆಂಪು ಮೆಣಸಿನ ಪುಡಿ

2 ಗ್ರಾಂ ಇಂಗು

ರುಚಿಗೆ ತಕ್ಕಷ್ಟು ಉಪ್ಪು

30 ಗ್ರಾಂ ಚೀಸ್

ಒಂದು ಬೌಲ್  ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಹಿಂಗನ್ನು ಹಾಕಿ ನೀರನ್ನು ಹಾಕಿ 1 ಟೇಬಲ್ ಚಮಚ ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ  ಉಪ್ಪು ಹಾಕಿ ಕಲಸಿಕೊಳ್ಳಿ.

 ಮಾಡುವ ವಿಧಾನ

ಮೆಣಸನ್ನು ಚನ್ನಾಗಿ ತೊಳೆದು ಒರೆಸಿಕೊಳ್ಳಿ

ಮೆಣಸಿನ ಒಂದು ಭಾಗವನ್ನು ಕತ್ತರಿಸಿಕೊಂಡು ಬೀಜವನ್ನು ತೆಗೆಯಿರಿ

ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸ್ ಮಾಡಿ

ಮಿಕ್ಸ್ ಮಾಡಿದ ಮಿಶ್ರಣವನ್ನು  ಅದರಲ್ಲಿ ತುಂಬಿ

ನಂತರ ಅದನ್ನು ಕಲಸಿದ ಕಡಲೆಹಿಟ್ಟಿನಲ್ಲಿ ಅದ್ದಿ ಸುತ್ತಲೂ ಕೋಟ್ ಆಗುವಂತೆ ನೋಡಿಕೊಳ್ಳಿ.

ನಂತರ ಮಧ್ಯಮ ಬಿಸಿ ಆದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ

ನಂತರ ನ್ಯಾಪ್ಕಿನ್ ಪೇಪರ್’ನಲ್ಲಿ ಹಾಕಿ ಇದರಿಂದ ಹೆಚ್ಚುವರಿ ಎಣ್ಣೆ  ಪೇಪರ್ ಹೀರಿಕೊಳ್ಳುತ್ತದೆ.

ಬಳಿಕ ನಿಮ್ಮಿಷ್ಟದ ಚಟ್ನಿಯೊಂದಿಗೆ ಸರ್ವ್ ಮಾಡಿ.

click me!