
ಮದುವೆಯಾಗುವುದು ಎಂದರೆ ನಿಜಕ್ಕೂ ಅದು ಜೀವನದ ಅತ್ಯಂತ ಮುಖ್ಯ ಘಟ್ಟ. ಮದುವೆಯ ನಂತರ ದಾಂಪತ್ಯ ಜೀವನ ಸುಖಮಯವಾಗಿರಬೇಕು ಎಂದರೆ ಮದುವೆಗೂ ಮುನ್ನ ಸಂಗಾತಿ ಜೊತೆ ಕೆಲವೊಂದು ವಿಷಯಗಳ ಕುರಿತು ಚರ್ಚಿಸಬೇಕು.
ಮಕ್ಕಳು: ಮದುವೆಗೂ ಮುನ್ನ ಫ್ಯಾಮಿಲಿ ಪ್ಲಾನ್ನಿಂಗ್ ಬಗ್ಗೆ ಮಾತನಾಡಲೇಬೇಕು. ಮದುವೆಯಾದ ಕೂಡಲೇ ಮಗು ಬೇಕೇ? ಅದಕ್ಕೆ ಇಬ್ಬರೂ ಆರ್ಥಿಕವಾಗಿ, ಮಾನಸಿಕವಾಗಿ ತಯಾರಿದ್ದಾರೆಯೇ? ಎಂಬುದನ್ನು ಮೊದಲು ಮಾತನಾಡಬೇಕು.
ಆರ್ಥಿಕ ಪರಿಸ್ಥಿತಿ: ಮದುವೆಯಾದ ಮೇಲೆ ಹಣಕಾಸಿನ ಬಗ್ಗೆ ಹೆಚ್ಚಿನ ಜೋಡಿಗಳಲ್ಲಿ ಭಿನ್ನಾಭಿಪ್ರಾಯವಿರುತ್ತದೆ. ಆದುದರಿಂದ ಆ ಬಗ್ಗೆ ಮೊದಲೇ ಇಬ್ಬರಿಗೂ ಸ್ಪಷ್ಟ ಚಿತ್ರಣವಿದ್ದರೆ ಬೆಸ್ಟ್. ಜಾಯಿಂಟ್ ಅಕೌಂಟ್ ಬೇಕೆ ? ಅಥವಾ ಬೇರೆ ಬೇರೆ ಅಕೌಂಟ್ ಒಳ್ಳೆಯದಾ? ಸೇವಿಂಗ್ಸ್ ಹೇಗಿದ್ದರೆ ಉತ್ತಮ? ಹೀಗೆ ಎಲ್ಲಾ ವಿಷಯಗಳ ಬಗ್ಗೆ ಡಿಸ್ಕಸ್ ಮಾಡಬೇಕು
.
ಫ್ಯಾಮಿಲಿ: ನಿಮ್ಮಮ್ಮ ಫ್ಯಾಮಿಲಿ ಬಗ್ಗೆ ಒಬ್ಬರಿಗೊಬ್ಬರು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರಬೇಕು. ಮದುವೆಯಾದ ಮೇಲೆ ಪೋಷಕರ ಜೊತೆ ಇರುವ ಬಗ್ಗೆ, ಕುಟುಂಬದ ಇತರ ಸದಸ್ಯರ ಬಗ್ಗೆ ಮಾತುಕತೆ ನಡೆಸುವುದು ಮುಖ್ಯ.
ಕೆಲಸ ಬಗ್ಗೆ: ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವುದೆಂದರೆ ಸಾಕಷ್ಟು ಕಾಂಪ್ರೋಮೈಸ್‌ಗಳು ಅತ್ಯಗತ್ಯ. ಒಬ್ಬರ ಕೆಲಸದ ಬಗ್ಗೆ ಮತ್ತೊಬ್ಬರಿಗೆ ಸ್ಪಷ್ಟ ಅರಿವು ಇರಬೇಕು. ಒಬ್ಬರಿಗೊಬ್ಬರು ಸಹಕರಿಸದೇ ಹೋದರೆ, ಸಂಸಾರದ ಬಂಡಿ ಎಳೆಯುವುದು ಕಷ್ಟ.
ಎಕ್ಸ್ ಲವ್: ತುಂಬಾ ಜನ ತಮ್ಮ ಈಗಿನ ಪ್ರೀತಿ ಚೆನ್ನಾಗಿರಬೇಕೆಂದು ಹಳೆ ಪ್ರೀತಿಯ ವಿಷಯ ಮುಚ್ಚಿಡುತ್ತಾರೆ. ಆದರೆ ಹೀಗೆ ಮಾಡಿದರೆ ಮುಂದೊಂದು ದಿನ ಅವರಿಗೆ ತಿಳಿದರೆ ಕಷ್ಟವಾಗುತ್ತದೆ. ಆದುದರಿಂದ ಮದುವೆಗೆ ಮೊದಲು ಈ ಬಗ್ಗೆ, ಮತ್ತೊಬ್ಬರ ಭಾವನೆಗೆ ಧಕ್ಕೆಯಾಗದಂತೆ ಎಕ್ಸ್‌ಪ್ರೆಸ್ ಮಾಡಿಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.