ವಿಶ್ವದ ಮೊದಲ SMS ಯಾವ್ದು? ಅದ್ರ ಇತಿಹಾಸ ಏನು?

By Suvarna News  |  First Published Dec 16, 2022, 12:46 PM IST

ಅಗತ್ಯವಿದೆ ಎಂದಾಗೆಲ್ಲ ಟಪ್ ಟಪ್ ಅಂತಾ ಮೆಸ್ಸೇಜ್ ಟೈಪ್ ಮಾಡಿ ನಾವು ರವಾನೆ ಮಾಡ್ತಿರುತ್ತೇವೆ. ದಿನಕ್ಕೆ 10 – 15 ಕಂಪನಿ ಮೆಸ್ಸೇಜ್ ನಮಗೆ ಬರುತ್ತದೆ. ನಮ್ಮ ಕೆಲಸವನ್ನು ಇಷ್ಟೊಂದು ಸುಲಭಗೊಳಿಸಿರುವ ಈ ಎಸ್ ಎಂಎಸ್ ಎಲ್ಲಿಂದ ಶುರುವಾಯ್ತು ಎಂಬುದನ್ನು ನೀವು ತಿಳಿದಿರಬೇಕು. 
 


ಇದು ಸ್ಮಾರ್ಟ್ಫೋನ್ ಯುಗ. ಮೊಬೈಲ್ ಇದ್ರೆ ಇಡೀ ಜಗತ್ತೇ ನಮ್ಮ ಕೈನಲ್ಲಿದ್ದಂತೆ. ನಾವು ನಮ್ಮ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಅಥವಾ ಕಚೇರಿ ಕೆಲಸಕ್ಕೆ ಟೆಕ್ಸ್ಟ್ ಮೆಸೇಜ್ ಕಳಿಸ್ತೇವೆ. ಅರೇ ಕ್ಷಣದಲ್ಲಿ ನಮ್ಮ ಮೆಸ್ಸೇಜ್ ವಿದೇಶವನ್ನು ತಲುಪುತ್ತದೆ. ನಮ್ಮ ಕೆಲಸವನ್ನು ಅತಿ ಸುಲಭಗೊಳಿಸಿರುವ ಈ ಟೆಕ್ಸ್ಟ್ ಮೆಸೇಜ್ ಹಾಗೂ ಕ್ರಿಸ್ಮಸ್ ಗೆ ಸಂಬಂಧವಿದೆ. ಕ್ರಿಸ್ಮಸ್ ಸಂಭ್ರಮಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ನಾವು ನಮಗೆ ಹೆಚ್ಚು ಹತ್ತಿರವಾಗಿರುವ, ಪ್ರತಿನಿತ್ಯ ಬಳಕೆ ಮಾಡುವ ಈ ಟೆಕ್ಸ್ಟ್ ಮೆಸೇಜ್ ಹಾಗೂ ಕ್ರಿಸ್ಮಸ್ ಸಂಬಂಧ ಹಾಗೂ ಟೆಕ್ಸ್ಟ್ ಮೆಸೇಜ್ ಇತಿಹಾಸವನ್ನು ತಿಳಿದುಕೊಳ್ಳೋಣ. 

ಎಸ್ ಎಂಎಸ್ (SMS) ಇತಿಹಾಸ : ಸುಮಾರು 30 ವರ್ಷಗಳ ಹಿಂದೆ ಮೊದಲ ಬಾರಿ ಪಠ್ಯ ಸಂದೇಶವನ್ನು ಕಳುಹಿಸಲಾಗಿತ್ತು. 1992ರಲ್ಲಿ ಮೊದಲ ಬಾರಿ ವಿಶ್ವ (World) ದ ಮೊದಲ ಪಠ್ಯ ಎಸ್ ಎಂಎಸ್  ಅನ್ನು ವೊಡಾಫೋನ್ (Vodafone) ಉದ್ಯೋಗಿಯೊಬ್ಬರು ಇನ್ನೊಬ್ಬ ಉದ್ಯೋಗಿಗೆ ಕಳುಹಿಸಿದ್ದರು. 1992ರ ಡಿಸೆಂಬರ್ 3ರಂದು ಅವರು ಎಸ್ ಎಂಎಸ್ ಕಳುಹಿಸಿದ್ದರು.  

Tap to resize

Latest Videos

undefined

General Knowledge: ವಕೀಲರು ಕಪ್ಪು ಕೋಟ್ ಧರಿಸೋದು ಏಕೆ?

ಕ್ರಿಸ್ಮಸ್ (Christmas) ಜೊತೆ ಎಸ್ ಎಂಎಸ್ ನಂಟು : ಪಠ್ಯ ಎಸ್ ಎಂಎಸ್ ಗೂ ಕ್ರಿಸ್ಮಸ್ ಗೂ ಏನು ನಂಟು ಅಂದ್ರೆ, ವೋಡಾಫೋನ್ ಉದ್ಯೋಗಿ ಕ್ರಿಸ್ಮಸ್ ಸಂದರ್ಭದಲ್ಲಿಯೇ ಈ ಸಂದೇಶ ರವಾನೆ ಮಾಡಿದ್ದರು. ಕ್ರಿಸ್ಮಸ್ ಶುಭಕೋರಿ ಸಂದೇಶ ಕಳುಹಿಸಿದ್ದರು. ಮೆರ್ರಿ ಕ್ರಿಸ್ಮಸ್ ಎಂದು ಅವರು ಸಂದೇಶ ಕಳುಹಿಸಿದ್ದರು. ವಿಶ್ವದ ಮೊದಲ ಪಠ್ಯ ಸಂದೇಶವನ್ನು ಬ್ರಿಟಿಷ್ ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ತ್ (Neil Papworth) ಮಾಡಿದ್ದರು. ನೀಲ್ ಗೆ ಆಗ 22 ವರ್ಷ ವಯಸ್ಸಾಗಿತ್ತು. ಲಂಡನ್ ನಿವಾಸಿಯಾಗಿದ್ದ ನೀಲ್ ಆಗ ವೊಡಾಫೋನ್ ನಲ್ಲಿ ಟೆಸ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಈ ಪಠ್ಯ ಎಸ್ ಎಂಎಸ್ ಅನ್ನು ತಮ್ಮ ಇನ್ನೊಬ್ಬ ಪಾಲುದಾರ ರಿಚರ್ಡ್ ಜಾರ್ವಿಸ್‌ಗೆ ಕಳುಹಿಸಿದ್ದರು. 

ಎಷ್ಟು ಅಕ್ಷರದಿಂದ ಕೂಡಿತ್ತು ಎಸ್ ಎಂಎಸ್ ? : ಮೊದಲ ಬಾರಿ ನೀಲ್ ಪ್ಯಾಪ್‌ವರ್ತ್, ಕೇವಲ 15 ಅಕ್ಷರಗಳ ಎಸ್ ಎಂಎಸ್ ಕಳುಹಿಸಿದ್ದರು. ಅದರಲ್ಲಿ ಮೆರ್ರಿ ಕ್ರಿಸ್ಮಸ್ ಎಂದು ಬರೆಯಲಾಗಿತ್ತು. ಅದರ ನಂತರ ಕ್ರಮೇಣ ಸಂದೇಶಗಳ ಸೇವೆ ಹೆಚ್ಚಾಯಿತು. ಇಂದು ಪ್ರಪಂಚದಾದ್ಯಂತದ ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಎಸ್ ಎಂಎಸ್ ಮೂಲಕ ಸಂವಹನ ನಡೆಸುತ್ತಾರೆ. 

ಎಸ್ ಎಂಎಸ್ ಅಭಿವೃದ್ಧಿ ಮಾಡಿದ ಕಂಪನಿ : ಮೊಬೈಲ್ ಕಂಪನಿ ನೋಕಿಯಾ (Nokia), ಎಸ್ ಎಂಎಸ್  ಸೇವೆ ಪ್ರತಿಯೊಬ್ಬರಿಗೆ ಸಿಗುವಂತೆ ಮಾಡಿತು. ನೋಕಿಯಾ ಜಿಎಸ್ ಎಂ ಹ್ಯಾಂಡ್‌ಸೆಟ್ ಪ್ರಾರಂಭಿಸುವ ಮೂಲಕ ಎಸ್ ಎಂಎಸ್ ರವಾನೆ ಮಾಡುವ ಸೇವೆ ಶುರು ಮಾಡಿತು. ಇದಾದ ನಂತರ ಎಸ್‌ಎಂಎಸ್‌ ಜಗತ್ತಿನಲ್ಲಿ ಕ್ರಾಂತಿಯೇ ಉಂಟಾಯಿತು. 1998 ರ ಸಮಯದಲ್ಲಿ ಒಂದು ತಿಂಗಳಲ್ಲಿ ನಾಲ್ಕು ಸಂದೇಶಗಳನ್ನು ಕಳುಹಿಸಲಾಗ್ತಿತ್ತು. 2010 ರಲ್ಲಿ  ಪ್ರಪಂಚದಾದ್ಯಂತ 6.1 ಟ್ರಿಲಿಯನ್ ಸಂದೇಶಗಳನ್ನು ಕಳುಹಿಸಲಾಗಿದೆ. ಅಂದರೆ, ಒಂದು ಸೆಕೆಂಡಿನಲ್ಲಿ ಸರಾಸರಿ 1,93,000 ಸಂದೇಶಗಳನ್ನು ಕಳುಹಿಸಲಾಗಿದೆ. ಈ ವರ್ಷ ಅಂದ್ರೆ 2022ರಲ್ಲಿ ಪ್ರತಿ ದಿನ ಸುಮಾರು 23 ಬಿಲಿಯನ್ ಪಠ್ಯ ಸಂದೇಶಗಳನ್ನು ಕಳುಹಿಸಲಾಗುತ್ತದೆ.  

ವೈನ್ ಬಾಟಲಿ 750 ಎಂಎಲ್ ಇರೋದ್ಯಾಕೆ?

ಮೊದಲ ಪಠ್ಯ ಸಂದೇಶ ಮಾರಾಟ (Sale) :  ಹಿಂದಿನ ವರ್ಷ ಡಿಸೆಂಬರ್ 2021ರಲ್ಲಿ ಇತಿಹಾಸದ ಮೊದಲ ಪಠ್ಯ ಸಂದೇಶವನ್ನು ಬ್ರಿಟಿಷ್ ಆಪರೇಟರ್ ವೊಡಾಫೋನ್ (Vodaphone) ಹರಾಜು ಮಾಡಿದೆ. ಈ ಹರಾಜು  €107,000 (ಸುಮಾರು 91 ಲಕ್ಷ) ಗೆ ಮಾರಾಟವಾಗಿದೆ.  

click me!