ಪಿರಿಯಡ್ಸ್ ರಕ್ತ ನೋಡಿ ರೋಗ ಕಂಡು ಕೊಳ್ಳಿ..

By Vaishnavi Chandrashekar  |  First Published Jun 28, 2018, 4:46 PM IST

ಮುಟ್ಟು, ರಕ್ತಸ್ರಾವ, ಗರ್ಭ ಧಾರಣೆ...ಹೀಗೆ ಎಲ್ಲವೂ ಒಂದಕ್ಕೊಂದು ಆವಿನಾಭಾವ ಸಂಬಂಧ ಹೊಂದಿದ್ದು, ಸೃಷ್ಟಿಸುವ ಹೆಣ್ಣಿಗಿರುವ ದೊಡ್ಡ ವರಗಳಿವು. ಆದರೆ, ಕೆಲವೊಮ್ಮೆ ಈ ವರವೇ ಶಾಪವಾಗಿಯೂ ಪರಿಣಮಿಸುವ ಸಾಧ್ಯತೆ ಇದೆ. ಮೊದಲಿಂದಲೇ ತಾನು, ತನ್ನ ದೇಹದ ಆರೋಗ್ಯದ ಬಗ್ಗೆ ಹೆಣ್ಣು ಗಮನ ಕೊಟ್ಟರೆ, ಆರೋಗ್ಯವಾಗಿರಬಹುದು.


ಪಿರಿಯಡ್ಸ್‌ ಟೈಮಲ್ಲಿ ನಮ್ಮ ದೇಹದಿಂದ ತ್ಯಾಜ್ಯದ ಮೂಲಕ ಹೊರ ಹೋಗುವ ರಕ್ತದಿಂದಲೇ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಅಲ್ಲದೇ ಮುಟ್ಟಾಗುವ ದಿನ, ರಕ್ತಸ್ರಾವವಾಗುವ ಪ್ರಮಾಣ, ಬಣ್ಣ, ವಾಸನೆ ಮೂಲಕವೇ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬಹುದು. ಅಷ್ಟಕ್ಕೂ ಸ್ರವಿಸುವ ರಕ್ತ ಯಾವ ಬಣ್ಣವಿದ್ದರೆ  ಏನು ಸಮಸ್ಯೆ?

ಕೆಂಪು ಬಣ್ಣ

Tap to resize

Latest Videos

ಆರೋಗ್ಯವಾಗಿದ್ದರೆ ದೇಹದಿಂದ ಹೊರ ಬರುವ ರಕ್ತ ಕೆಂಪಾಗಿರುತ್ತದೆ. ಗರ್ಭಕೋಶ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರ್ಥ. ಸಾಮಾನ್ಯವಾಗಿ ಮೊದಲೆರಡು ದಿನ ತುಸು ಹೆಚ್ಚಿಗೆ ಎನ್ನುವಷ್ಟು ರಕ್ತಸ್ರಾವವಿರುತ್ತದೆ. ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.

ಗುಲಾಬಿ ಬಣ್ಣ

ಈಸ್ಟ್ರೋಜನ್ (ಸೆಕ್ಸ್ ಹಾರ್ಮೋನ್) ಪ್ರಮಾಣ ಕಡಿಮೆ ಇರುವುದರಿಂದ ರಕ್ತ ಪಿಂಕ್ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡು, ವೈದ್ಯರ ಸಲಹೆ ಪಡೆಯುವ ಅಗತ್ಯವಿರುತ್ತದೆ. ಇಲ್ಲದಿದ್ದರೆ ಮೂಳೆಯ ಶಕ್ತಿ ಕುಂದಿಸುವಂಥ ಆಸ್ಟಿಯೊಪೊರೋಸಿನ್ ಎಂಬ ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ. 

ರಕ್ತ ನೀರಾಗಿದ್ದರೆ..?

ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ಸಿಗದಿದ್ದಲ್ಲಿ ನೀರು ಮಿಶ್ರಿತ ರಕ್ತ ಸ್ರಾವವಾಗುತ್ತದೆ. ಪ್ರತಿ ಬಾರಿಯೂ ರಕ್ತಿ ತಿಳಿಯಾದಲ್ಲಿ, ರಕ್ತಹೀನತೆ ಇದೆ ಎಂದರ್ಥ. ಕಂದು ಅಥವಾ ಕೆಂಪು  ಕಂದು ಬಣ್ಣ ಮುಟ್ಟು ವಿಳಂಬವಾದರೆ ಕಂದು ಬಣ್ಣದ ಸ್ರಾವವಾಗುವುದು ಸಹಜ. ಈ ಬಗ್ಗೆ ಭಯ ಬೀಳುವ ಅಗತ್ಯವಿಲ್ಲ. ಹಳೆ ರಕ್ತ ಹೆಪ್ಪುಗಟ್ಟಿದಾಗ ಕೆಂಪು ರಕ್ತ ಕಂದು  ಬಣ್ಣಕ್ಕೆ ತಿರುಗುವುದು ಸಹಜ.  ಹೆಪ್ಪುಗಟ್ಟಿದ ರಕ್ತಸ್ರಾವ ಚೂರುಪಾರು ಹೆಪ್ಪುಗಟ್ಟಿದ ರಕ್ತ ಸ್ರಾವವಾದರೆ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಆದರೆ, ಪೀಸ್ ಪೀಸ್ ಹೊರ ಹೋಗುತ್ತಿದೆ ಎಂದರೆ ವೈದ್ಯರನ್ನು ಭೇಟಿಯಾಗುವುದು ಒಳಿತು. ಇದು ಹಾರ್ಮೋನ್‌ಗಳ ಅಸಮತೋಲನದಿಂದ ಸಂಭವಿಸೋ ಪ್ರಾಬ್ಲಂ. ಆಗ ಹಾಲು, ಸಕ್ಕರೆ, ಸೋಯಾದಿಂದ ದೂರವಿರಿ. 

ಕೆಂಪು ಮತ್ತು ಬೂದು ಬಣ್ಣ

ಇನ್‌ಫೆಕ್ಷನ್‌ನಿಂದ ರಕ್ತ ಬೂದು ಬಣ್ಣವಾಗುತ್ತದೆ.  ಗರ್ಭವತಿ ಅಥವಾ ಗರ್ಭಪಾತವಾದರೆ ಇಂಥ ರಕ್ತ ಹೊರ ಹೋಗುತ್ತದೆ. ಆಗ ತಕ್ಷಣವೇ ವೈದ್ಯರನ್ನು ಕಾಣುವುದು ಒಳಿತು.

click me!