
ಫ್ಲಾರಿಡಾ(ನ.05): ನಾವು ದಿನನಿತ್ಯ ಹಲವು ರೀತಿಯ ಹಣ್ಣುಗಳನ್ನ ತಿನ್ನುತ್ತೀವಿ. ಆದರೆ, ಅವುಗಳ ಮಹತ್ವ ಮಾತ್ರ ನಮಗೆ ಗೊತ್ತೇ ಇರುವುದಿಲ್ಲ. ಆಗಿಂದಾಗ್ಗೆ ನಡೆಯುವ ಅಧ್ಯಯನಗಳು ಆ ಹಣ್ಣುಗಳ ಮಹತ್ವದ ಬಗ್ಗೆ ನಮಗೆ ಕಣ್ಣು ತೆರೆಸುತ್ತವೆ. ಅಂತಹ ಮಹತ್ವಪೂರ್ಣ ಹಣ್ಣುಗಳ ಸಾಲಿಗೆ ಈಗ ದ್ರಾಕ್ಷಿ ಕೂಡ ಸೇರಿದೆ.
CLICK HERE.. 25 ವರ್ಷ ಆ ಗುಹೆಯಲ್ಲಿ ಕಳೆದ ಆ ವ್ಯಕ್ತಿ ಏನು ಮಾಡಿದ್ದ ಗೊತ್ತಾ..?
ಆರೋಗ್ಯದ ವಿಚಾರದಲ್ಲಿ ದ್ರಾಕ್ಷಿ ನಿಜವಾಗಿಯೂ ಒಂದು ಚಮತ್ಕಾರಿ ಹಣ್ಣು ಎನ್ನುತ್ತಿದೆ ಇತ್ತೀಚಿನ ಒಂದು ಅಧ್ಯಯನ. ಒಣ ಚರ್ಮ ಸಮಸ್ಯೆ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹಣ್ಣಿನ ಮತ್ತೊಂದು ಚಮತ್ಕಾರಿ ಗುಣ ಇದೀಗ ಬೆಳಕಿಗೆ ಬಂದಿದೆ.
ಓರ್ಲಾಂಡೋದ ವಿಶನ್ ಅಂಡ್ ಆಪ್ತಮಾಲಜಿ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿರುವ ಅಧ್ಯಯನವೊಂದರಲ್ಲಿ ದ್ರಾಕ್ಷಿ ಕಣ್ಣಿನ ದೃಷ್ಟಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಪ್ರತಿನಿತ್ಯ ದ್ರಾಕ್ಷಿ ಹಣ್ಣನನ್ನ ತಿನ್ನುವುದರಿಂದ ಕಣ್ಣಿನ ದೃಷ್ಟಿ ಭಾರೀ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆಯಂತೆ.
ಡಯಟ್`ಗೆ ಅನುಕೂಲವಾದ ಅತ್ಯಮೂಲ್ಯ ಅಂಶಗಳು ದ್ರಾಕ್ಷಿಯಲ್ಲಿದ್ದು, ಇದು ಕಣ್ಣಿನ ರೆಟಿನಾಗೆ ರಕ್ಷಣೆ ನೀಡುವ ಜೊತೆಗೆ ಕಾರ್ಯವನ್ನ ಉತ್ತಮಗೊಳಿಸುತ್ತದೆ ಎಂದು ಫ್ಲಾರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಗೈಲ್ ಹ್ಯಾಕಮ್ ಹೇಳಿದ್ಧಾರೆ.
ರೆಟಿನಾ ಕಣ್ಣಿನ ಬಹುಮುಖ್ಯ ಭಾಗವಾಗಿದ್ದು, ಬೆಳಕಿಗೆ ಪ್ರತಿಕ್ರಿಯಿಸುವ ಜೀವಕೋಶಗಳನ್ನ ಒಳಗೊಂಡಿರುತ್ತದೆ. ದ್ರಾಕ್ಷಿಯಲ್ಲಿರುವ ಕೆಲ ಪ್ರೋಟೀನ್`ಗಳ ರೆಟಿನಾ ಕ್ಷಯವನ್ನ ತಡೆದು, ದೀರ್ಘಕಾಲ ಕೆಲಸ ನಿರ್ವಹಿಸುವಂತೆ ಮಾಡುತ್ತವೆಯಂತೆ.
ಒಟ್ಟಿನಲ್ಲಿ, ಈ ಅಧ್ಯಯನದ ಸಾರಾಂಶವೆಂದರೆ ಪ್ರತಿನಿತ್ಯ ದ್ರಾಕ್ಷಿ ತಿನ್ನುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.