Viral Video: ಬೆಕ್ಕು – ಬಾತುಕೋಳಿ ಕಚ್ಚಾಟ ನೋಡಿ ಭಯವಾದ್ರೆ ಕಣ್ಮುಚ್ಚಿಕೊಳ್ಳಿ!

Published : Jul 17, 2023, 02:03 PM IST
Viral Video: ಬೆಕ್ಕು – ಬಾತುಕೋಳಿ ಕಚ್ಚಾಟ ನೋಡಿ ಭಯವಾದ್ರೆ ಕಣ್ಮುಚ್ಚಿಕೊಳ್ಳಿ!

ಸಾರಾಂಶ

ಪ್ರಾಣಿಗಳ ಮಧ್ಯೆ ಪ್ರೀತಿಯ ಫೈಟಿಂಗ್, ಕೋಪದ ಫೈಟಿಂಗ್ ಎರಡೂ ನಡೆಯುತ್ತೆ. ಈಗ ವೈರಲ್ ಆಗಿರುವ ವಿಡಿಯೋ ಯಾವ ಕೆಟಗರಿಗೆ ಸೇರುತ್ತೆ ಅಂತಾ ನೀವೆ ಡಿಸೈಡ್ ಮಾಡಿ. ಬೆಕ್ಕು ಹಾಗೂ ಬಾತುಕೋಳಿ ಜಗಳ ಟ್ವೀಟರ್ ಬಳಕೆದಾರರ ಕಣ್ಣು ಕೆಂಪು ಮಾಡಿದೆ.  

ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ರೆ ಒತ್ತಡ, ಖಿನ್ನತೆ ಕಾಡೋದಿಲ್ಲ ಎಂದು ತಜ್ಞರೇ ಹೇಳ್ತಾರೆ. ಈ ಪ್ರಾಣಿಗಳಿಗೆ ನಮ್ಮ ಭಾವನೆ ಅರ್ಥವಾಗುತ್ತದೆ. ಮನುಷ್ಯನ ಮೂಡ್ ಹಾಳಾಗಿದ್ದಾಗ, ಹತ್ತಿರ ಬಂದು ಮುದ್ದು ಮಾಡಿ ಸಾಂತ್ವಾನ ಹೇಳ್ತವೆ. ಅದ್ರಲ್ಲಿ ನಾಯಿ ಮೊದಲ ಸ್ಥಾನದಲ್ಲಿದೆ. ಮನೆಯಲ್ಲಿ ನಾಯಿ ಸಾಕಿದವರು ಅದನ್ನು ತಮ್ಮ ಮಕ್ಕಳಂತೆ ನೋಡುವುದಲ್ಲದೆ, ಅದಕ್ಕೆ ಅಗತ್ಯವಿರುವ ಎಲ್ಲವನ್ನೂ ನೀಡ್ತಾರೆ. ಹಾಗೆಯೇ ನಾಯಿ ಕೂಡ ಮಾಲಿಕನಿಗೆ ನೆರವಾಗುತ್ತದೆ. 

ಮನೆಯಲ್ಲಿ ಒಂದು ನಾಯಿ (Dog) ಯನ್ನು ಮಾತ್ರವಲ್ಲ ಅನೇಕ ಪ್ರಾಣಿಗಳನ್ನು ಸಾಕುವವರಿದ್ದಾರೆ. ಕೆಲವರ ಮನೆಯಲ್ಲಿ ಎರಡು ನಾಯಿ ಇಲ್ಲವೆ ನಾಯಿ, ಬೆಕ್ಕು ಹೀಗೆ ವೆರೈಟಿ ಸಾಕು ಪ್ರಾಣಿಗಳನ್ನು ನೀವು ನೋಡ್ಬಹುದು. ಮನೆಯಲ್ಲಿರುವ ಪ್ರಾಣಿಗಳು ನಮಗೆ ಮನರಂಜನೆ ನೀಡುತ್ತವೆ. ಮನೆಯಲ್ಲಿ ಬೆಕ್ಕು (Cat) ಹಾಗೂ ನಾಯಿ ಎರಡನ್ನೂ ಸಾಕಿದ್ದರೆ ಮನರಂಜನೆ ಡಬಲ್ ಆಗುತ್ತದೆ. ಅವುಗಳ ನಡುವೆ ಸ್ನೇಹ ಬೆಳೆದಿದ್ದರೆ, ನಾಯಿ ಹಾಗೂ ಬೆಕ್ಕು ಆಟವಾಡೋದನ್ನು ನೀವು ನೋಡ್ಬಹುದು. ಅವುಗಳ ಕಚ್ಚಾಟ ನಿಮ್ಮ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತೆ. ಕಾಡಿನಲ್ಲಿ ಅನೇಕ ಪ್ರಾಣಿಗಳು ಜಗಳವಾಡುವ ವಿಡಿಯೋಗಳು ನಮಗೆ ಕಾಣ ಸಿಗುತ್ವೆ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಾಣಿ – ಪಕ್ಷಿಗಳ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲ ವಿಡಿಯೋ ಮನಸ್ಸಿಗೆ ಹಿತವೆನಿಸಿದ್ರೆ ಮತ್ತೆ ಕೆಲವರು ಕೋಪ ತರಿಸುತ್ತವೆ. ಈಗ ಒಂದು ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ಬೆಕ್ಕು ಹಾಗೂ ಬಾತುಕೋಳಿ (Duck) ಕಾದಾಟವನ್ನು ನೀವು ನೋಡ್ಬಹುದು.  ಬೆಕ್ಕು, ಗೂಡಿನಲ್ಲಿರುವ ಹಕ್ಕಿ ಮರಿಯನ್ನು ಕದ್ದೊಯ್ಯೋದಿದೆ. ಆದ್ರೆ ಬಾತುಕೋಳಿ ಜೊತೆ ಜಗಳವಾಡೋದು ಅಪರೂಪ. ಬಾತುಕೋಳಿ ಹಾಗೂ ಬೆಕ್ಕು ಕಚ್ಚಾಡೋದನ್ನು ನೀವು ವೈರಲ್ ವಿಡಿಯೋದಲ್ಲಿ ನೋಡ್ಬಹುದು. 

ವಿರುಷ್ಕಾ ದಂಪತಿ ಭೇಟಿಯಾಗಿದ್ದ ಸ್ವಾಮಿಜಿಯಿಂದ ಬ್ಯೂಟಿ ಟಿಪ್ಸ್!

ಟ್ವಿಟರ್ ನಲ್ಲಿ ವೈರಲ್ ಆಗಿದೆ ಜಗಳ :  ದಿ ಫೈಟಿಂಗ್ ಅನಿಮಲ್ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಾತುಕೋಳಿ ಫೈಟ್ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಇದ್ರಲ್ಲಿ ಬಾತುಕೋಳಿ ಹಾಗೂ ಬೆಕ್ಕನ್ನು ನೀವು ನೋಡ್ಬಹುದು. ಬಾತುಕೋಳಿ ಹಿಂದಿನಿಂದ ಕಚ್ಚುತ್ತಿದ್ದಂತೆ ಬೆಕ್ಕು ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಮತ್ತೆ ಮತ್ತೆ ಬೆಕ್ಕನ್ನು ಬೆನ್ನು ಹತ್ತುವ ಬಾತುಕೋಳಿ ಅದ್ರ ಕಿವಿ ಸೇರಿದಂತೆ ದೇಹದ ಕೆಲ ಭಾಗಗಳನ್ನು ಕಚ್ಚುತ್ತದೆ. ಇದು ಬೆಕ್ಕಿನ ಕೋಪವನ್ನು ಹೆಚ್ಚಿಸುತ್ತದೆ. ಬೆಕ್ಕು ಬಾತುಕೋಳಿ ತಲೆಗೆ ಹೊಡೆದು ವಿರೋಧಿಸುತ್ತಿದ್ದರೂ ಬಾತುಕೋಳಿ ಅದನ್ನು ಕಚ್ಚುತ್ತಿರೋದನ್ನು ನೀವು ನೋಡ್ಬಹುದು.

ನಂಗೂ ಜೀವನ ಸಂಗಾತಿ ಇದ್ದಿದ್ದರೆ ಜೀವನ ಪರಿಪೂರ್ಣ ಎನಿಸುತ್ತಿತ್ತು: ಮನೀಷಾ ಕೊಯಿರಾಲ

ಟ್ವೀಟ್ ಬಳಕೆದಾರರ ಪ್ರತಿಕ್ರಿಯೆ :  ಈವರೆಗೆ ಈ ವಿಡಿಯೋವನ್ನು 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 105 ಬಾರಿ ರೀ ಟ್ವೀಟ್ ಮಾಡಲಾಗಿದೆ. ಅನೇಕರು ಲೈಕ್ಸ್ ಬಟನ್ ಒತ್ತಿದ್ರೆ ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು ತಮಾಷೆಯಾಗಿ ತೋರಿಸಲಾಗಿದೆ. ಆದ್ರೆ ಬಳಕೆದಾರರು ಇದಕ್ಕೆ ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಕೋಪ ವ್ಯಕ್ತಪಡಿಸಿದ್ದಾರೆ. ಇದು ನಗುತರಿಸುವಂತಹ ವಿಡಿಯೋ ಅಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಸುಮ್ಮನೆ ವಿಡಿಯೋ ಮಾಡ್ತಾ ಏಕೆ ನಿಂತಿದ್ದೀರಿ, ಬೆಕ್ಕಿಗೆ ಗಾಯವಾಗ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇಲ್ಲಿ ಬೆಕ್ಕು ಮತ್ತು ಬಾತುಕೋಳಿ ಆಟವಾಡ್ತಿಲ್ಲ, ಜಗಳವಾಡ್ತಿದೆ ಎನ್ನುವ ಅರ್ಥದಲ್ಲಿ ಬರೆದಿದ್ದಾರೆ.  ವಿಡಿಯೋ ಮಾಡ್ತಿರುವ ವ್ಯಕ್ತಿಗೆ ಇನ್ನೊಬ್ಬ ಬಳಕೆದಾರ ಬೈದಿದ್ದಾನೆ. ವಿಡಿಯೋ ಮಾಡೋದು ಇದ್ರಲ್ಲಿ ಏನಿಲ್ಲ. ಎರಡರಲ್ಲಿ ಒಂದಕ್ಕೆ ಗಾಯವಾಗ್ಬಹುದು. ಬೆಕ್ಕು ಇದನ್ನು ಇಷ್ಟಪಡ್ತಿಲ್ಲ. ಬಾತುಕೋಳಿ, ಬೆಕ್ಕಿನ ಕಣ್ಣು ಕಿತ್ರೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!