ತೂಕ ಕಳೆದುಕೊಳ್ಳಲು ಪ್ರತಿದಿನ ಪರಿತಪಿಸುವವರನ್ನು ನೋಡಿದ್ದೇವೆ. ಅದರಲ್ಲೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಆಧುನಿಕ ಜೀವನಕ್ಕೆ ಮೊರೆ ಹೋದವರಿಗೆ ತೂಕವೇ ಒಂದು ಸಮಸ್ಯೆಯಾಗಿದೆ.
ವಾಷಿಂಗ್‌ಟನ್ ಸ್ಟೇಟ್ ಯುನಿವರ್ಸಿಟಿ ಒಂದು ಸಂಶೋಧನಾ ವರದಿಯನ್ನು ಮುಂದಿಟ್ಟಿದೆ. ರಾತ್ರಿ ನಿದ್ರೆಗೆ ಜಾರುವ ಮುನ್ನ ಸ್ವಲ್ಪ ವೈನ್ ಸೇವನೆ ಮಾಡಿದರೆ ಸಾಕು ..ತೂಕ ಕಳೆದುಕೊಳ್ಳಬಹುದು ಎಂದು ಹೇಳಿದೆ.
ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!
2015ರಿಂದಲೇ ಸಂಶೋಧನಾ ನಿರತವಾಗಿದ್ದ ಸಂಸ್ಥೆ, ತೂಕ್ ಮತ್ತು ವೈನ್ ಒಂದಕ್ಕೊಂದು ನೇರ ಸಂಬಂಧ ಇಟ್ಟುಕೊಂಡಿವೆ. ಸಂಗ್ರಹವಾಗುವ ಅನವಶ್ಯಕ ಕೊಬ್ಬನ್ನು ವೈನ್ ಕರಗಿಸುತ್ತದೆ ಎಂದು ಹೇಳಿದೆ.
ತೂಕ ಕಳೆದುಕೊಳ್ಳಲು ಇಚ್ಛಿಸುವವರಿಗೆ ವೈದ್ಯರು ಆಲ್ಕೋಹಾಲ್ ಸೇವನೆ ಸಲಹೆ ನೀಡಲು ಹಿಂದೇಟು ಹಾಕುತ್ತಾರೆ. ಇಂಥ ಸಲಹೆ ನೀಡಿ ಅಗತ್ಯಕ್ಕಿಂತ ಹೆಚ್ಚಿನ ಮದ್ಯ ಸೇವನೆ ಆರಂಭಿಸಿದರೆ ಅದು ಆರೋಗ್ಯದ ಮೇಲೆ ಇನ್ನೊಂದು ರೀತಿಯಲ್ಲಿ ದುಷ್ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.