ಮೊಬೈಲ್ ಮಾತ್ರ ಬೇಕು, ಬಾಕ್ಸ್ ಬೇಡ ಎನ್ನುವವರು ಇದನ್ನು ಓದಿ. ಕಂಪನಿ ಮೊಬೈಲ್ ಜೊತೆ ಕೊಡುವ ಬಾಕ್ಸ್ ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ.
ನೀವು ಹೊಸ ಮೊಬೈಲ್ (New mobile) ಖರೀದಿ ಮಾಡಿದಾಗ ನಿಮಗೆ ಮೊಬೈಲ್ ಜೊತೆ ಒಂದು ಕಾರ್ಡ್ ಬೋರ್ಡ್ ಪ್ಯಾಕಿಂಗ್ ಬಾಕ್ಸ್ (cardboard packing box) ಸಿಗುತ್ತೆ. ಅದು ಎಲ್ಲರಿಗೂ ತಿಳಿದಿರೋ ವಿಷ್ಯ. ಈ ಬಾಕ್ಸ್ ನಲ್ಲಿ ಯುಎಸ್ಬಿ (USB), ಚಾರ್ಜರ್ ಸೇರಿದಂತೆ ಮೆನುವಲ್ ಇರುತ್ತೆ. ಸಾಮಾನ್ಯವಾಗಿ ಬಾಕ್ಸ್ ನಿಂದ ಎಲ್ಲ ವಸ್ತುವನ್ನು ತೆಗೆದು ಆ ಡಬ್ಬವನ್ನು ಬಹುತೇಕರು ಕಸಕ್ಕೆ ಎಸೆಯುತ್ತಾರೆ. ಮತ್ತೆ ಕೆಲವರು ತಮ್ಮ ಕಪಾಟಿನ ಮೂಲೆಗೆ ಸೇರಿಸ್ತಾರೆ. ಮೊಬೈಲ್ ಮಾತ್ರ ನಮಗೆ ಮುಖ್ಯವೇ ಹೊರತು ಅದು ಬಂದ ಬಾಕ್ಸ್ ಅಲ್ಲ ಅನ್ನೋದು ಎಲ್ಲರ ವಾದ. ಆದ್ರೆ ಮೊಬೈಲ್ ಪ್ಯಾಕ್ ಆಗಿ ಬರುವ ಈ ಸುಂದರ ಮೊಬೈಲ್ ಬಾಕ್ಸ್ ಪ್ರಯೋಜನ ಸಾಕಷ್ಟಿದೆ. ನೀವು ಅದನ್ನು ಕಸಕ್ಕೆ ಅಥವಾ ಮನೆಯ ಮೂಲೆಗೆ ಎಸೆಯುವ ಮುನ್ನ ಅದ್ರ ಪ್ರಯೋಜನ ತಿಳಿದುಕೊಳ್ಳಿ.
ಮೊಬೈಲ್ ಪ್ಯಾಕಿಂಗ್ ಬಾಕ್ಸ್ ಲಾಭಗಳು :
• ಮೊಬೈಲ್ ಫೋನ್ ಸುರಕ್ಷತೆ : ಕಂಪನಿಗಳು ಆಯಾ ಮಾಡೆಲ್ ಫೋನ್ ಗೆ ತಕ್ಕಂತೆ ಬಾಕ್ಸ್ ಸಿದ್ಧಪಡಿಸಿರುತ್ತವೆ. ಅದ್ರ ಮೇಲೆ ನಿಮ್ಮ ಮೊಬೈಲ್ ಹೆಸರು, ಫೋಟೋ ಸೇರಿದಂತೆ ಅನೇಕ ಮಾಹಿತಿಯನ್ನು ನೀವು ನೋಡ್ಬಹುದು. ಕಂಪನಿ ಈ ಬಾಕ್ಸ್ ತಯಾರಿಸುವ ಮೊದಲ ಮತ್ತು ಮುಖ್ಯ ಉದ್ದೇಶ ಮೊಬೈಲ್ ಸುರಕ್ಷತೆ. ನೀವು ಮೊಬೈಲ್ ಬಳಸದ ಸಮಯದಲ್ಲಿ ಮೊಬೈಲನ್ನು ಈ ಬಾಕ್ಸ್ ನಲ್ಲಿ ಹಾಕಿಡಬಹುದು. ಇದ್ರಿಂದ ನಿಮ್ಮ ಫೋನ್ ಧೂಳು, ಕೊಳಕಿನಿಂದ ರಕ್ಷಿಸಲ್ಪಡುತ್ತದೆ. ಇದ್ರಿಂದ ಮೊಬೈಲ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಹಳೆ ಕಾಂಚೀವರಂ ಸೀರೆಯಿಂದ ಚಿನ್ನ ತೆಗೆಯುವ 5 ವಿಧಾನಗಳು
• ಎಕ್ಸಸರೀಸ್ ಇಡಲು ಉತ್ತಮ ಸ್ಥಳ : ಮೊಬೈಲ್ ಜೊತೆ ಬರುವ ಯುಎಸ್ ಬಿ, ಚಾರ್ಜರ್, ಇಯರ್ ಫೋನ್ ಗಳನ್ನು ಕಂಡ ಕಂಡಲ್ಲಿ ಎಸೆಯುವ ಬದಲು ಈ ಬಾಕ್ಸ್ ನಲ್ಲಿ ಹಾಕಿಡುವ ಅಭ್ಯಾಸ ರೂಢಿಸಿಕೊಳ್ಳಿ. ಇದ್ರಿಂದ ವರ್ಜಿನಲ್ ಎಕ್ಸಸರೀಸ್ ಕಳೆಯುವುದಿಲ್ಲ. ಅಲ್ಲದೆ ನೀವು ಸ್ಮಾರ್ಟ್ಫೋನ್ ಬಿಲ್ ಕೂಡ ಈ ಬಾಕ್ಸ್ ನಲ್ಲಿ ಹಾಕಿಡುವುದು ಒಳ್ಳೆಯದು.
• ಮಾರಾಟದ ವೇಳೆ ಹೆಚ್ಚಾಗುತ್ತೆ ದರ : ನೀವು ನಿಮ್ಮ ಸ್ಮಾರ್ಟ್ಫೋನ್ ಮಾರಾಟ ಮಾಡ್ತೀರಿ ಎಂದಾಗ ಅದಕ್ಕೆ ಈ ಬಾಕ್ಸ್ ಅವಶ್ಯಕತೆ ಹೆಚ್ಚಿರುತ್ತದೆ. ನೀವು ಬಾಕ್ಸ್ ನಲ್ಲಿ ಮೊಬೈಲ್ ಜೊತೆ ಎಕ್ಸಸರೀಸ್ ಹಾಕಿದ್ರೆ ಅದ್ರ ಬೆಲೆ ಏರಿಕೆಯಾಗುತ್ತದೆ. ಮೊಬೈಲ್ ಕಂಡೀಷನ್ ಚೆನ್ನಾಗಿದೆ ಎಂಬುದನ್ನು ಮೊಬೈಲ್ ಕವರ್ ನೋಡಿಯೇ ಗ್ರಾಹಕರು ಊಹಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಮೊಬೈಲ್ ಆದ್ರೂ ಅದನ್ನು ಖರೀದಿಸುವವರಿಗೆ ಹೊಸ ಮೊಬೈಲ್ ಖರೀದಿಸಿದ ಅನುಭವವನ್ನು ಇದು ನೀಡುತ್ತದೆ.
• ಗಿಫ್ಟಿಂಗ್ : ಒಂದ್ವೇಳೆ ನಿಮ್ಮ ಹಳೆ ಫೋನನ್ನು ನೀವು ಗಿಫ್ಟ್ ರೂಪದಲ್ಲಿ ನಿಮ್ಮ ಆಪ್ತರಿಗೆ ನೀಡಲು ಬಯಸಿದ್ದರೆ, ಫೋನ್ ಹಾಗೇಯೇ ನೀಡುವ ಬದಲು, ಬಾಕ್ಸ್ ಜೊತೆ ಗಿಫ್ಟ್ ಪ್ಯಾಕ್ ಮಾಡಿದ್ರೆ ಒಳ್ಳೆಯದು. ಗಿಫ್ಟ್ ಪಡೆದ ವ್ಯಕ್ತಿಗೆ ಇದು ಖುಷಿ ನೀಡುವ ಜೊತೆಗೆ ಎಲ್ಲ ಎಕ್ಸಸರೀಸ್ ಲಭ್ಯವಿರುತ್ತದೆ.
ಜಿರಳೆಗಳನ್ನು ಓಡಿಸಲು ಮನೆಯಲ್ಲಿಯೇ ತಯಾರಿಸಿಕೊಳ್ಳಿ ಪೇಸ್ಟ್
• ಪರಿಸರ ರಕ್ಷಣೆ : ಈಗಿನ ದಿನಗಳಲ್ಲಿ ಮೊಬೈಲ್ ಖರೀದಿ ಮಾಡುವವರ ಸಂಖ್ಯೆ ಸಾಕಷ್ಟಿದೆ. ಮೊಬೈಲ್ ಇಟ್ಕೊಂಡು ಬಾಕ್ಸ್ ಎಸೆಯೋದು ಒಳ್ಳೆಯ ಮಾರ್ಗವಲ್ಲ. ಈಗಿನ ಕಂಪನಿಗಳು ಪರಿಸರ ಸ್ನೇಹಿ ಮೊಬೈಲ್ ಬಾಕ್ಸ್ ತಯಾರಿಸುತ್ತಿದೆಯಾದ್ರೂ ನೀವು ಅದನ್ನು ಮರು ಬಳಕೆ ಮಾಡಿದಾಗ, ಬಾಕ್ಸ್ ಕಸ ಸೇರೋದು ಕಡಿಮೆಯಾಗುತ್ತದೆ.