ಊಟದ ಬಳಿಕ ಸ್ಪೂನ್ ಎಸೆಯಬೇಡಿ ತಿನ್ನಿ, 88 ವಿಫಲ ಪ್ರಯತ್ನ ನಂತರ ಯಶಸ್ಸು ಸಾಧಿಸಿದ ಎಡಿಬೈಟ್

Published : Oct 29, 2026, 06:16 PM IST
This Startup Makes Edible Cutlery After 88 Failed Attempts

ಸಾರಾಂಶ

ಊಟದ ಬಳಿಕ, ಪಾಯಸ, ಸಿಹಿ ತಿಂಡಿ, ಐಸ್‌ಕ್ರೀಮ್ ಸೇರಿದಂತೆ ಸ್ಪೂನ್ ಬಳಸಿ ಆಹಾರ ಸವಿಯುವುದು ಹಲವು ಬಾರಿ ಅನಿವಾರ್ಯವಾಗಿದೆ. ಇನ್ಮುಂದೆ ಊಟದ ಬಳಿಕ ಸ್ಪೂನ್ ಎಸೆಯಬೇಕಿಲ್ಲ, ತಿನ್ನಬಹುದು. ಹೊಸ ತಿನ್ನೋ ಸ್ಪೂನ್ ಲಗ್ಗೆ ಇಟ್ಟಿದೆ.

ಮುಂಬೈ (ಅ.29) ಊಟ, ಚಾಟ್ಸ್, ಐಸ್‌ಕ್ರೀಂ ಸೇರಿದಂತೆ ಹಲವು ತಿನಿಸುಗಳಿಗೆ ಸ್ಪೂನ್ ಬೇಕೇ ಬೇಕು. ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಸ್ಪೂನ್ ಬಳಕೆ ಮಾಡಲಾಗುತ್ತದೆ. ಊಟದ ಬಳಿಕ, ತಿನಿಸು ತಿಂದ ಬಳಿಕ ಸ್ಪೂನ್ ಎಸೆಯಲಾಗುತ್ತದೆ. ಪ್ಲಾಸ್ಟಿಕ್ ಸ್ಪೂನ್ ದೇಹಕ್ಕೂ ಉತ್ತಮವಲ್ಲ, ಪರಿಸರಕ್ಕೂ ಒಳ್ಳೇದಲ್ಲ. ಇದೀಗ ಊಟದ ಬಳಿಕ ಸ್ಪೂನ್ ಎಸೆಯಬೇಕಾಗಿಲ್ಲ, ನೇರವಾಗಿ ತಿನ್ನಬಹುದು. ಹೌದು, ಬರೋಬ್ಬರಿ 88 ವಿಫಲ ಪ್ರಯತ್ನ ಬಳಿಕ ಎಡಿಬೈಟ್ಸ್ ( Edybites) ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕ ಉದ್ಯಮಿ, ರೂಪೇಶ್ ಕೆ ಸಂಘವಿ ತಿನ್ನೋ ಸ್ಪೂನ್ ಆವಿಷ್ಕರಿಸಿ ಮಾರುಕಟ್ಟೆಗೆ ಲಾಂಚ್ ಮಾಡಿದ್ದಾರೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮಾರುಕಟ್ಟೆ ಬಂದಿರುವ ಈ ಸ್ಪೂನ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಸಿರಿಧಾನ್ಯಗಳ ಮಿಶ್ರಣದ ಸ್ಪೂನ್

ಎಡಿಬೈಟ್ಸ್ ಸ್ಟಾರ್ಟ್ಅಪ್ ಕಂಪನಿ ಸಂಸ್ಥಾಪಕ ರೂಪೇಶ್ ಕೆ ಸಂಘವಿ ಹೊಸ ಸ್ಪೂನ್ ಅವಿಷ್ಕರಿಸಿದ್ದಾರೆ. ಬಳಕೆ ಬಳಿಕ ಸ್ಪೂನ್ ಎಸೆಯಬೇಕಾಗಿಲ್ಲ. ಹಾಗೇ ತಿನ್ನಬಹುದು. ಹೌದು, ಅಕ್ಕಿ, ಜೋಳ, ಗೋಧಿ ಹಿಟ್ಟು ಸೇರಿದಂತೆ ಸಿರಿಧಾನ್ಯಗಳಿಂದ ಈ ಸ್ಪೂನ್ ತಯಾರಿಸಲಾಗಿದೆ. ಸಿರಿಧಾನ್ಯಗಳ ಮಿಶ್ರಣದಿಂದ ತಯಾರಿಸಿದ ಈ ಸ್ಪೂನ್ ತಿನಿಸು ತಿಂದ ಬಳಿಕ ತಿನ್ನಬಹುದು. ತಿನ್ನದೇ ಹಾಗೇ ಎಸೆದರೇ ಒಂದೇ ದಿನದಲ್ಲಿ ಕೊಳೆತು ಹೋಗಲಿದೆ.

ಯೂಸ್ ಆ್ಯಂಡ್ ಥ್ರೋ ಸ್ಪೂನ್ ಎಲ್ಲೆಡೆ ಲಭ್ಯವಿದೆ. ಆದರೆ ಇದು ಅತ್ಯಂತ ಅಪಾಯಕಾರಿ. ಪರಿಸರದಲ್ಲೂ ಈ ಸ್ಪೂನ್ ಕೊಲೆಯದೆ, ಕರಗದೇ ಹಾಗೇ ಉಳಿಯುತ್ತದೆ. ಪ್ರತಿ ದಿನ ಲಕ್ಷಾಂತರ ಪ್ಲಾಸ್ಟಿಕ್ ಸ್ಪೂನ್ ಬಳಕೆಯಾಗಿ ಎಸೆಯಲಾಗುತ್ತದೆ. ಇನ್ನು ಕೆಲ ಪರಿಸರ ಪೂರಕ ಎಂದು ಬಂದಿರುವ ಯೂಸ್ ಆ್ಯಂಡ್ ಥ್ರೋ ಪ್ಲಾಸ್ಟಿಕ್ ಸ್ಪೂನ್‌ಗಳಲ್ಲಿ 2.5 ಗ್ರಾಂನಿಂದ 3 ಗ್ರಾಂ ಪ್ಲಾಸ್ಟಿಕ್ ಇದೆ. ಇದೀಗ ಸಿರಿಧಾನ್ಯಗಳ ಮಿಶ್ರಣದ ತಿನ್ನಬಹುದಾದ 1 ಲಕ್ಷ ಸ್ಪೂನ್‌ನಿಂದ 250 ರಿಂದ 300 ಕೆಜಿ ಪ್ಲಾಸಿಕ್ ಬಳಕೆ ತಪ್ಪಲಿದೆ. ಇದು ಪರಿಸರಕ್ಕೆ ಹಾಗೂ ಮನುಷ್ಯ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂದು ರೂಪೇಶ್ ಹೇಳಿದ್ದಾರೆ.

ಕೋವಿಡ್‌ನಿಂದ ಹುಟ್ಟಿಡ ಐಡಿಯಾ

ಕೋವಿಡ್ ಸಮಯದಲ್ಲಿ ರೂಪೇಶ್‌ಗೆ ಮನೆ ಕೆಲಸದವರ ಸಮಸ್ಯೆ ಎದುರಾಗಿತ್ತು. ನಿರ್ಬಂಧಗಳ ಕಾರಣ ಯಾರು ಬರುವಂತಿಲ್ಲ, ಯಾರೂ ಇರಲಿಲ್ಲ. ಪಾತ್ರೆ ತೊಳೆಯಲು ಕೆಲಸದವರು ಇರಲಿಲ್ಲ. ಶುಚಿಯಾದ ಪಾತ್ರೆ, ಸ್ಪೂನ್ ಇಲ್ಲದೆ ರೂಪೇಶ್ ಪರದಾಡಿದ್ದರು. ಹೀಗಾಗಿ ಯೂಸ್ ಆ್ಯಂಡ್ ಥ್ರೂ ಸ್ಪೂನ್ ಬಳಸಬೇಕಾಯಿತು. ಆದರೆ ಯೂಸ್ ಆ್ಯಂಡ್ ಥ್ರೋ ಪ್ಲಾಸ್ಟಿಕ್ ಸ್ಪೂನ್‌ ಬದಲು ಆರೋಗ್ಯ, ದೇಹಕ್ಕೂ ಉತ್ತಮ ಸ್ಪೂನ್ ಆವಿಷ್ಕರಿಸುವ ಪ್ಲಾನ್ ಹುಟ್ಟಿಕೊಂಡಿತು.

88 ಬಾರಿ ಪ್ರಯತ್ನಿಸಿ ಸೋತಿದ್ದ ರೂಪೇಶ್

ರೂಪೇಶ್‌ಗೆ ಹೊಳದ ಐಡಿಯಾ ಬೆನ್ನಲ್ಲೇ ಆವಿಷ್ಕಾರಗಳು ಆರಂಭಗೊಂಡಿತು. ಆದರೆ ಪ್ರಯತ್ನಗಳು ವಿಫಲಗೊಂಡಿತು. ಸ್ಪೂನ್ ಡಿಸೈನ್, ಸಿರಿಧಾನ್ಯಗಳ ಮಿಶ್ರಣ, ಗಟ್ಟಿತನದ ಕೊರತೆಯಿಂದ ಸ್ಪೂನ್ ಪ್ರಯತ್ನ ಕೈಗೂಡಲಿಲ್ಲ. ಬರೋಬ್ಬರಿ 88 ಬಾರಿ ನಡೆಸಿದ ಪ್ರಯತ್ನ ವಿಫಲಗೊಂಡಿತ್ತು. ಕೊನೆಗೂ ರೊಪೇಶ್ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದರು.

ರೆಫ್ರಿಜರೇಟರ್ ಇಲ್ಲದೆ ಎಡಿಬೈಟ್ಸ್ ಸ್ಪೂನ್‌ಗಳನ್ನು 3 ತಿಂಗಳ ವರೆಗೆ ಶೇಖರಿಸಿಡಲು ಸಾಧ್ಯವಿದೆ. ಒಂದು ಎಡಿಬೈಟ್ಸ್ ಚಮಚಾ ಬೆಲೆ 7 ರಿಂದ 8 ರೂಪಾಯಿ . ಸದ್ಯ 5000ಕ್ಕೂ ಹೆಚ್ಚು ಚಮಚಾ ಮಾರಾಟ ಮಾಡಲಾಗಿದೆ.

ಇದೀಗ ಮುಂಬೈನಲ್ಲಿ ಎಡಿಬೈಟ್ಸ್ ಸ್ಪೂನ್ ಭಾರಿ ಜನಪ್ರಿಯವಾಗಿದೆ. ಹಲವರ ಟೇಬಲ್‌ನಲ್ಲಿ ಇದೀಗ ಎಡಿಬೈಟ್ಸ್ ಸ್ಪೂನ್ ಬಳಕೆ ಮಾಡಲಾಗುತ್ತದೆ. ಮುಂಬೈನಿಂದ ಇತರ ನಗರದಲ್ಲೂ ಎಡಿಬೈಟ್ಸ್ ಸ್ಪೂನ್ ಲಭ್ಯವಾಗುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಮೂರು ಪದಾರ್ಥ ಇದ್ರೆ ಸಾಕು, ಕೆಮಿಕಲ್​ ಹೇರ್​ಡೈಗೆ ಹೇಳಿ ಗುಡ್​ಬೈ : ಖ್ಯಾತ ವೈದ್ಯರು ಕೊಟ್ಟ ಟಿಪ್ಸ್​ ನೋಡಿ
ಯಾವಾಗ್ಲೂ ಹೆಲ್ತಿಯಾಗಿರಬೇಕು, ಆಸ್ಪತ್ರೆಯಿಂದ ದೂರ ಇರಬೇಕು ಅಂದ್ರೆ ಈ ದಿನಚರಿ ನಿಮ್ಮದಾಗಿರಲಿ