
ಆಹಾರಗಳನ್ನ ಬಿಸಿ ಮಾಡಿ ಸೇವಿಸುವುದು ಎಲ್ಲರ ಮನೆಯಲ್ಲಿ ದಿನನಿತ್ಯದ ಪ್ರಕ್ರಿಯೆ. ಆದರೆ, ಕೆಲ ಆಹಾರಗಳನ್ನ ಬಿಸಿ ಮಾಡಿದರೆ ಅವು ನಿಮ್ಮ ದೇಹಕ್ಕೆ ಮಾರಕವಾಗಬಹುದು. ಯಾವ ಆಹಾರಗಳನ್ನ ಮತ್ತೆ ಬಿಸಿ ಮಾಡಬಾರದು ಎಂಬುದರ ಲಿಸ್ಟ್ ಇಲ್ಲಿದೆ.
CLICK HERE.. ತಿಂಗಳ ಖರ್ಚಿಗೆ ಲಕ್ಷ ಲಕ್ಷ ಬೇಡಿಕೆ ಇಟ್ಟ ರಂಭಾ
1. ಚಿಕನ್: ಚಿಕನ್`ನಲ್ಲಿ ಅತ್ಯಧಿಕ ಪ್ರೋಟೀನ್ ಇರುವುದರಿಂದ ಮತ್ತೆ ಮತ್ತೆ ಬಿಸಿ ಮಾಡಿದರೆ ಹಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಸೃಷ್ಟಿಸುತ್ತದೆ. ತಣ್ಣಗಾಗಿದ್ದರೂ ಹಾಗೆ ತಿನ್ನುವುದು ಉತ್ತಮ.
2. ಅನ್ನ: ಆಹಾರ ಗುಣಮಟ್ಟ ಸಂಸ್ಥೆಯ ಪ್ರಕಾರ, ಅಕ್ಕಿ ಬೇಯಿಸಿದ ಬಳಿಕ ಅದರಲ್ಲಿರುವ ಬ್ಯಾಕ್ಟೀರಿಯಾ ಸತ್ತು ಹೋಗುತ್ತವೆ. ಬೇಯಿಸಿದ ಬಳಿಕ ಅನ್ನವನ್ನ ಮತ್ತೆ ಬಿಸಿ ಮಾಡುವುದರಿಂದ ವಾಂತಿಯಂತಹ ಸಮಸ್ಎಯ ೆದುರಾಗುತ್ತದೆ.
3. ಆಲೂಗಡ್ಡೆ: ಆಲೂಗಡ್ಡೆಯನ್ನ ಬೇಯಿಸಿದ ಬಳಿಕ ಮರು ಬಿಸಿ ಮಾಡುವುದರಿಂದ ಅದರ ಸತ್ವ ಕಳೆದುಕೊಳ್ಳುತ್ತೆ. ದೇಹಕ್ಕೆ ಪೂರಕವಾಗುವ ಬದಲು ಮಾರಕವಾಗುತ್ತೆ.
4. ಪಾಲಾಕ್, ಬೀಟ್ರೋಟ್: ಪಾಲಾಕ್ ಮತ್ತು ಬಿಟ್ರೋಟ್ ಆಹಾರಗಳನ್ನ ಮರು ಬಿಸಿ ಮಾಡಿದರೆ ಅದರಲ್ಲಿರುವ ನೈಟ್ರೇಟ್ಸ್`ಗಳು ನೈಟ್ರೀಟ್`ಗಳಾಗಿ ಬದಲಾಗಿ ವಿಷಕಾರಿಯಾಗುತ್ತವೆ.
5. ಮೊಟ್ಟೆ: ಒಮ್ಮೆ ಬೇಯಿಸಿದ ಮೊಟ್ಟೆಯನ್ನ ಮರುಬಿಸಿ ಮಾಡುವುದರಿಂದ ವಿಷಕಾರಿಯಾಗಿ ಜೀರ್ಣಕ್ರಿಯೆಯ ಸಮಸ್ಯೆ ಎದುರಾಗುತ್ತೆ.
6. ಅಣಬೆ: ಅಣಬೆ ಆಹಾರವನ್ನ ಸಿದ್ಧಪಡಿಸಿದ ಕೂಡಲೇ ತಿನ್ನುವುದು ಉತ್ತಮ. ಇಲ್ಲವಾದರೆ, ಅದರಲ್ಲಿರುವ ಪ್ರೋಟಿನ್ ಹಾಳಾಗಿ ನಿಮ್ಮ ಸೊಂಟದ ಭಾಗಕ್ಕೆ ತರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.