ಬಹು ಉಪಯೋಗಿ ಈ ಲವಂಗ

Published : Oct 26, 2016, 08:53 AM ISTUpdated : Apr 11, 2018, 12:58 PM IST
ಬಹು ಉಪಯೋಗಿ ಈ ಲವಂಗ

ಸಾರಾಂಶ

ಲವಂಗ ಎಂದರೆ ಅದನ್ನು ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ. ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ.

ಲವಂಗ ಎಂದರೆ ಅದನ್ನು ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ. ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ.

ಕೆಲವೊಮ್ಮೆ ಅತಿಯಾದ ಆಯಾಸದಿಂದ ಆಲಸ್ಯ ಬಂದುಬಿಡುತ್ತದೆ. ಅತಿಯಾದ ಸೋಮಾರಿತನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಆ ಸಮಯದಲ್ಲಿ ಲವಂಗದೆಣ್ಣೆಯನ್ನು ನೀವು ಸೇವಿಸುವ ಆರೋಗ್ಯಕರ ಪಾನೀಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸಿ. ಇದರಿಂದ ಆಲಸ್ಯ ದೂರವಾಗಿ ಚೈತನ್ಯ ಮೂಡುತ್ತದೆ.

ಲವಂಗದೆಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಮನೆ ಸುಗಂಧಭರಿತವಾಗುತ್ತದೆ. ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗದೆಇರುವುದರಿಂದ ಬರುವ ದುರ್ಗಂಧ ದೂರವಾಗುತ್ತದೆ.

ಅಡುಗೆ ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆಗಳು ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುಡಿಸಿ ನೀರು ಆವಿಯಾದಂತೆಲ್ಲ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ಕಾಫಿ, ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ ಸಮಯದಲ್ಲಿ ಅದರ ಒಳಗೆ ಕೆಲವು ಲವಂಗವನ್ನು ಹಾಕಿ ಮುಚ್ಚಿಡಿ. ಬೇಕಾದಾಗ ಲವಂಗ ತೆಗೆದು ಬಳಸ ಬಹುದು ಇದರಿಂದ ಪ್ಲಾಸ್ಕಿನ ಒಳಗಿನ ದುರ್ಗಂಧ ದೂರವಾಗುತ್ತದೆ.

ಚರ್ಮಕ್ಕೆ ಲವಂಗದೆಣ್ಣೆಯನ್ನು ಸ್ವಲ್ಪ ಲಠಪಿಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ. ಸ್ವಲ್ಪ ಮಾತ್ರ ಹಚ್ಚಬೇಕು. ಹೆಚ್ಚು ಹಚ್ಚಿದರೆ ಚರ್ಮಕ್ಕೆ ಹಾನಿಯಾಗುವ ಸಂಭವವಿದೆ.

ನಿತ್ಯ ಲವಂಗ ಸೇವಿಸುವುದರಿಂದ ರಕ್ತದೊತ್ತಡವನ್ನು ನಿವಾರಿಸಬಹುದು.

ಒಂದು ಹನಿ ಲವಂಗದೆಣ್ಣೆಯನ್ನು ದಾಲ್ಚಿನ್ನಿ ತೈಲ ಮತ್ತು ನೀರಿನೊಂದಿಗೆ ಮಿಶ್ರ ಮಾಡಿ ಮನೆಯಲ್ಲಿ ಇರುವೆಗಳು ಬಂದಾಗ ಸಿಂಪಡಿಸಿ. ಇದರಿಂದ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು.

1/4 ಕಪ್ ಲವಂಗವನ್ನು 1 ಕಪ್ ಆಲೀವ್ ಎಣ್ಣೆಯೊಂದಿಗೆ ಸೇರಿಸಿ 24 ಗಂಟೆ ಬಿಟ್ಟರೆ ಲವಂಗದೆಣ್ಣೆ ತಯಾರಾಗುತ್ತದೆ ಅದನ್ನು ವಿವಿಧ ಉಪಯೋಗಗಳಿಗೆ ಬಳಸಿಕೊಳ್ಳಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಉಗುರು ಕಟ್ ಮಾಡಬಾರದು.. ತಮಾಷೆ ವಿಷಯವಲ್ಲ, ವೈಜ್ಞಾನಿಕ ಕಾರಣವೂ ಇದೆ
ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!