* ಮುದ್ದು ಶ್ವಾನಗಳ ಆತಂಕ ನಿವಾರಣೆಗೂ ಬಂತು ಟಿವಿ
* ಯುಕೆಯಲ್ಲಿ ಡಾಗ್ ಟಿವಿ ಆರಂಭ
* ಶ್ವಾಮಗಳಿಗೆ ಇಷ್ಟವಾಗುವ ಕಾರ್ಯಕ್ರಮಗಳು
* ನೀವು ಮನೆಗೆ ಬರುವವರೆಗೂ ಅತ್ಯುತ್ತಮ ಸ್ನೇಹಿತ
ನಿಮ್ಮ ಮನೆಯ ಮುದ್ದಿನ ಶ್ವಾನ (Pet Dog) ಇತ್ತೀಚೆಗೆ ಯಾಕೋ ಮಂಕಾಗಿದೆಯಾ... ಮೊದಲಿನಂತೆ ಆಕ್ಟೀವ್ ಇಲ್ಲವಾ.. ನೀವು ಲಾಕ್ ಡೌನ್ (Lockdown)ಓಪನ್ ಆದ ನಂತರ ಕಚೇರಿಗೆ ತೆರಳುತ್ತಿದ್ದೀರಾ? ಶ್ವಾನದ ಮೇಲೆ ಇದು ಪರಿಣಾಮ ಬೀರುತ್ತಿದೆಯಾ? ಇದೆಲ್ಲದಕ್ಕೂ ಉತ್ತರ ಇಲ್ಲಿದೆ.. ಅದುವೇ(Dog TV) ಡಾಗ್ ಟಿವಿ.
ನಿಯತ್ತಿನ ಪ್ರಾಣಿ, ಮುದ್ದಿನ ಪ್ರಾಣಿ, ಪೆಟ್.. ಏನೆಲ್ಲಾ ಬೇಕಾದರೂ ಕರೆಯಿರಿ.. ಮನುಷ್ಯ (Man)ಮತ್ತು ಶ್ವಾನದ ನಡುವೆ ಅದೊಂದು ಅವಿನಾಭಾವ ಸಂಬಂಧ-ಬಾಂಧವ್ಯ ಬಹಳ ಹಿಂದಿನ ಕಾಲದಿಂದಲೂ ಇದೆ.
ಮುದ್ದಿನ ಶ್ವಾನಗಳು ಇದ್ದರೆ ನಮ್ಮ ಕಷ್ಟ-ನಷ್ಟಗಳನ್ನೆಲ್ಲ ಅವುಗಳ ಜತೆ ಶೇರ್ ಮಾಡಿಕೊಂಡು ಭಯ, ಆತಂಕ, ದುಗುಡ(Stress) ಎಲ್ಲವನ್ನು ನಿವಾರಣೆ ಮಾಡಿಕೊಳ್ಳುತ್ಥೇವೆ. ಅದೇ ಮುದ್ದಿನ ಶ್ವಾನಗಳಿಗೆ ಉಂಟಾಗುವ ಬೇಸರ ನಿವಾರಣೆ ಮಾಡೋರು ಯಾರು? ಇದೆಲ್ಲವನ್ನು ಮನಗಂಡು 'ಡಾಗ್ ಟಿವಿ' ಬಂದಿದೆ.. ನಮ್ಮ ನಾಲ್ಕು ಕಾಲಿನ ಸ್ನೇಹಿತರಿಗಾಗಿಯೇ ವಿಶೇಷವಾಗಿ ಈ ವಾಹಿನಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಸಂಶೋಧನೆ(Research): ಈ ವಾಹಿನಿ ಹೊರತರಲು ವರ್ಷಗಳ ಕಾಲ ಸಂಶೋಧನೆ ನಡೆಸಲಾಗಿದೆ. ಶ್ವಾನಗಳು ಎದುರಿಸುತ್ತಿರುವ ಆತಂಕ, ಒಂಟಿತನ ಮತ್ತು ಒತ್ತಡ ನಿವಾರಣೆ ಮುಖ್ಯ ಉದ್ದೇಶ. ಮಾಲೀಕರು ಮುದ್ದಿನ ಶ್ವಾಣವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಇದು ತಿಳಿಸಿಕೊಡುತ್ತದೆ.
ಬೆಂಗಳೂರಲ್ಲಿ ಶ್ವಾನ ಸಾಕಲು ಲೈಸನ್ಸ್ ಕಡ್ಡಾಯ
ಕೊರೋನಾದಿಂದ(Coronavirus) ಲಾಕ್ ಡೌನ್ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಪರಿಣಾಮ ಶ್ವಾನ ಸಾಕುವವರ ಸಂಖ್ಯೆಯೂ ಏರಿತು. ಆದರೆ ಲಾಕ್ ಡೌನ್ ಮುಗಿದ ನಂತರದಲ್ಲಿ ಜನರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾದರು..ಕಚೇರಿಗಳು ಆರಂಭವಾದವು. ಮನೆಯಲ್ಲಿ ಸಾಕಿದ್ದ ಶ್ವಾನಗಳಿಗೆ ಒಂಟಿತನ ಕಾಡಲು ಆರಂಭಿಸಿತು.
ಇದೇ ಕಾರಣಕ್ಕೆ ಸಮಯೋಚಿತವಾಗಿ ಈ ವಾಹಿನಿ ಹೊರತರಲಾಗಿದೆ. ಪ್ರಾಣಿಗಳ ಶಾರೀರಿಕ ಮತ್ತು ಮಾನಸಿಕ ಅಗತ್ಯತೆಗಳು, ಮನಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳ ಅಧ್ಯಯನದ ನಂತರ ಚಾನಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಗತ್ಯವಿದ್ದಾಗ ಅವುಗಳಿಗೆ ಉತ್ತೇಜನ ನೀಡಲು, ಅಥವಾ ವಿಶ್ರಾಂತಿ ಪಡೆಯಲು ಈ ವಾಹಿನಿ ನೆರವು ನೀಡುತ್ತದೆ ಎಂದು ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ವಾನ ಪ್ರಿಯ ದೃಶ್ಯಗಳು: ಶ್ವಾನಗಳ ಕಣ್ಣಿಗೆ ಅನುಕೂಲವಾಗುವಂತೆ ಆಡಿಯೊ, ತರಂಗಾಂತರಗಳು ಮತ್ತು ಕ್ಯಾಮರಾ(Camera) ಕೆಲಸಗಳು ಮುಂದೆ ಬರಲಿವೆ. ಡಾಗ್‌ಟಿವಿಯ ಮುಖ್ಯ ವಿಜ್ಞಾನಿ ಪ್ರೊಫೆಸರ್ ನಿಕೋಲಸ್ ಡಾಡ್‌ಮನ್ ಹೇಳುವಂತೆ, ನಾಯಿಗಳು ಏಕಾಂಗಿಯಾದಾಗ ಉದ್ಭವಿಸಬಹುದಾದ ಕೆಲವು ನಡವಳಿಕೆಯ ಸಮಸ್ಯೆಗಳನ್ನು ನಿವಾರಿಸಲು ನಾಯಿ ಮಾಲೀಕರಿಗೆ ಡಾಗ್ ಟಿವಿ ಅತ್ಯುತ್ತಮ ಸಾಧನವಾಗಿರಲಿದೆ ಎಂದಿದ್ದಾರೆ.
ಮಾಲೀಕರು ಕೆಲಸಕ್ಕೆ ತೆರಳಿ ಮನೆಗೆ ಹಿಂದಿರುವರೆಗೆ ಈ ಡಾಗ್ ಟಿವಿ ಶ್ವಾನಗಳ ಅತ್ಯುತ್ತಮ ಸ್ನೇಹಿತನಾಗಿರುತ್ತದೆ. ವಿಶ್ರಾಂತಿ ಮತ್ತು ಸಾಂತ್ವನವನ್ನು ಅನುಭವಿಸಲು ಸಹಾಯ ಮಾಡುತ್ತದೆ.
ಅಡುಗೆ ರೆಸಿಪಿಯೂ ಇದೆ: ಇತರ ದೇಶಗಳಲ್ಲಿ ಈಗಾಗಲೇ ಲಭ್ಯವಿರುವ ಚಾನೆಲ್, ನಾಯಿ ಮಾಲೀಕರಿಗಾಗಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ. ಸೆಲೆಬ್ರಿಟಿ ಶ್ವಾನ ತರಬೇತುದಾರರಾದ ಲಾರಾ ನೇಟಿವೊ ಅವರ ಪ್ರದರ್ಶನಗಳು ಸೇರಿದಂತೆ, ಅವರು ಸಾಕುಪ್ರಾಣಿಗಳೊಂದಿಗೆ ಮನೆಯಲ್ಲಿ ಹೇಗೆ ಉತ್ತಮವಾಗಿ ಬದುಕಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲಾಗುತ್ತಿದೆ. ಸರಳವಾದ ಕಾರ್ಯಕ್ರಮಗಳ ಮೂಲಕ ಶ್ವಾನಗಳಿಗೆ ಪ್ರಿಯವಾಗುವ ರೆಸಿಪಿಗಳ ವಿವರಣೆಯೂ ಇರುತ್ತದೆ.
ಡಾಗ್ ಟಿವಿ ಸಂಶೋಧನೆಗಳು ಹೇಳುವಂತೆ, ಆರು ನಾಯಿಗಳಲ್ಲಿ ಒಂದು ಶ್ವಾನ ಪ್ರತ್ಯೇಕತೆ ಆತಂಕದಿಂದ ಬಳಲುತ್ತಿದೆ.
ಮಾಲೀಕರು ದೂರದಲ್ಲಿರುವಾಗ ಕಾಣಿಸಿಕೊಳ್ಳುವ ರೋಗಲಕ್ಷಣಗಳು ಅತಿಯಾದ ಬೊಗಳುವಿಕೆ ಮತ್ತು ತಿನ್ನಲು ನಿರಾಕರಿಸುವುದು, ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಮಾಡುತ್ತದೆ.
ಬ್ರಿಟಿಷ್ ಪ್ರಾಣಿ ತರಬೇತುದಾರ ವಿಕ್ಟೋರಿಯಾ ಸ್ಟಿಲ್‌ವೆಲ್ ಹೇಳುವಂತೆ, "ಡಾಗ್ ಟಿವಿಯು ಮೊದಲಿಗೆ ಸ್ವಲ್ಪ ವಿಲಕ್ಷಣ ಪರಿಕಲ್ಪನೆಯಾಗಿದೆ ಎಂದು ಜನರು ಭಾವಿಸಿದ್ದರು. ಆದರೆ ನಾನು ಅವರಿಗೆ ಸಂಶೋಧನೆಯ ಲಾಭಗಳನ್ನು ತಿಳಿಸಿಕೊಟ್ಟೆ. ಈ ಟಿವಿ ಚಾನೆಲ್ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ನಾಯಿಗಳ ಮನಸ್ಸನ್ನು ತನ್ನ ಕಡೆ ಸೆಳೆದಿಟ್ಟುಕೊಂಡಿರುತ್ತದೆ. ಸ್ಮಾರ್ಟ್ ಟಿವಿಗಳು, ಆಂಡ್ರಾಯ್ಡ್ ಮತ್ತು ಆಪಲ್ ಸಾಧನಗಳು ಮತ್ತು ಆನ್‌ಲೈನ್‌ನಲ್ಲಿ ಡಾಗ್ ಟಿವಿ ಲಭ್ಯವಿದೆ.
Here’s @ hey__itsfranklin__ another enjoying some DOGTV! 🐶📺 pic.twitter.com/n77BdxsdMu
— DOGTV (@dogtv)