ಲೈಂಗಿಕ ಚಟುವಟಿಕೆ ವ್ಯಾಯಾಮಕ್ಕೆ ಬದಲಿಯಾಗುತ್ತಾ?

By Web Desk  |  First Published Jul 26, 2019, 2:50 PM IST

ಲೈಂಗಿಕ ಚಟುವಟಿಕೆಗಳು ಕೂಡಾ ಕ್ಯಾಲೋರಿ ಬರ್ನ್ ಮಾಡುತ್ತವೆ. ಹಾಗಿದ್ದರೆ, ವರ್ಕೌಟ್‌ಗಿಂತಲೂ ಇದೇ ಬೆಸ್ಟಾ? ವರ್ಕೌಟ್‌ಗೆ ಬದಲಿಯಾಗಬಲ್ಲದೇ ಸೆಕ್ಸ್? ತಜ್ಞರೇನಂತಾರೆ?


ಹೊಟ್ಟೆಯ ಎರಡು ಭಾಗದಿಂದ ಹೊರಗಿಣುಕುವ ಆ ಎಕ್ಸ್ಟ್ರಾ ಕ್ಯಾಲೋರಿಗಳನ್ನು ಕರಗಿಸಿ, ಫಿಟ್ ಆಗಿರಲು ಎಕ್ಸರ್ಸೈಸ್ ಬೇಕೆಂಬುದು ನಮಗೆಲ್ಲ ಗೊತ್ತು. ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಟ್ರೇನರ್ ನಿಮಗೆ  ರನ್ನಿಂಗ್, ಸ್ವಿಮ್ಮಿಂಗ್ ಎಂದು ವ್ಯಾಯಾಮದಲ್ಲೂ ವೈವಿಧ್ಯತೆ ಇಡುತ್ತಾರೆ. ಈ ವ್ಯಾಯಾಮಗಳು  ಖಂಡಿತಾ ನಿಮ್ಮನ್ನು ಆರೋಗ್ಯದಲ್ಲಿರಿಸುತ್ತವೆ. ಆದರೆ, ಸೆಕ್ಸ್ ? ಅದೂ ಕೂಡಾ ವ್ಯಾಯಾಮವೇ? ಅದರಿಂದಲೂ ಕ್ಯಾಲೋರಿಗಳು ಕರಗುತ್ತವೆಯೇ? ಅದೂ ಕೂಡಾ ಶೇಪ್‌ನಲ್ಲಿರಲು ಸಹಾಯ ಮಾಡುತ್ತದೆಯೇ? ಇಂಥಾ ಡೌಟ್ ಹಲವರಿಗೆ ಬಂದಿರಬಹುದು. ಇದಕ್ಕೆ ಉತ್ತರ ಹೌದು ಹಾಗೂ ಇಲ್ಲ. ಕಳೆದೊಂದು ದಶಕದಲ್ಲಿ ಈ ಬಗ್ಗೆ ನಡೆದ ಹಲವಾರು ಅಧ್ಯಯನಗಳು ಸೆಕ್ಸ್ ಮಾಡರೇಟ್ ಇಂಟೆನ್ಸಿಟಿಯ ಎಕ್ಸರ್ಸೈಸ್ ಎಂದು ಹೇಳಿವೆ. 

'ಗುಂಡಮ್ಮ' ಸತಿಯಾದರೆ ಪತಿಯ ಸಂತೋಷಕ್ಕಿರದು ಮಿತಿ!

Tap to resize

Latest Videos

undefined

ಅಂಕಿಸಂಖ್ಯೆಗಳು

ಅಂಕಿಸಂಖ್ಯೆಗಳಲ್ಲಿ ಉತ್ತರ ಬೇಕೆಂದರೆ ಇದು ಎಷ್ಟು ಹೊತ್ತಿನ ಕ್ರಿಯೆ ಎಂಬುದು ಮೊದಲು ಪರಿಗಣಿಸಬೇಕು. ಅಧ್ಯಯನಗಳ ಪ್ರಕಾರ ಸರಾಸರಿ ಲೆಕ್ಕಾಚಾರದಲ್ಲಿ ಸಂಪೂರ್ಣ ಲವ್ ಮೇಕಿಂಗ್  ಪ್ರಕ್ರಿಯೆ 20 ನಿಮಿಷ ಸಮಯ ಹಿಡಿಯುತ್ತದೆ. ಇದು ಖಂಡಿತಾ 10,000 ಹೆಜ್ಜೆಗಳನ್ನು ನಡೆದಷ್ಟು ವ್ಯಾಯಾಮವಾಗಲಾರದು. ಹಾಗಿದ್ದರೆ, ಸೆಕ್ಸ್ ಸಂದರ್ಭದಲ್ಲಿ ಎಷ್ಟು ಕ್ಯಾಲೋರಿಗಳು ಕರಗುತ್ತವೆ? 2013 ರ ಅಧ್ಯಯನ 'ಎನರ್ಜಿ ಎಕ್ಸ್‌ಪೆಂಡಿಚರ್ ಡ್ಯೂರಿಂಗ್ ಸೆಕ್ಷುಯಲ್ ಆ್ಯಕ್ಟಿವಿಟಿ ಇನ್ ಯಂಗ್ ಹೆಲ್ದೀ ಕಪಲ್ಸ್' ಪ್ರಕಾರ, ಲೈಂಗಿಕ ಚಟುವಟಿಕೆ ಸಂದರ್ಭದಲ್ಲಿ ಸುಮಾರು 85 ಕ್ಯಾಲೋರಿಗಳು ಕರಗುತ್ತವೆ.  ಅಂದರೆ ನೀವು ಸಾಮಾನ್ಯ ವೇಗದಲ್ಲಿ ಸುಮಾರು  20-25  ನಿಮಿಷ  ನಡೆದರೆ ಕರಗುವಷ್ಟು. ಇದನ್ನು ಖಂಡಿತಾ ಒಂದು  ಮುಖ್ಯ  ವ್ಯಾಯಾಮ ಎಂದು  ಪರಿಗಣಿಸಬಹುದು ಎಂದು ವರದಿ ಹೇಳಿತ್ತು.

ಬಹುಲಾಭ ಸೆಕ್ಸ್ ನಿಮ್ಮನ್ನು ಖಂಡಿತಾ  ನಿಮ್ಮ ಸಂಗಾತಿಗೆ ಹತ್ತಿರ ತರುವುದಲ್ಲದೆ, ಅದರಿಂದ ಆರೋಗ್ಯಕ್ಕೂ ಲಾಭಗಳಿವೆ ಎಂಬುದು ಉತ್ತಮ ವಿಚಾರವಲ್ಲವೇ? "ಸೆಕ್ಸ್  ಎಂಬುದು ಬಯೋ ಫಿಸಿಯಾಲಜಿಕಲ್ ಪ್ರಕ್ರಿಯೆಯಾಗಿದ್ದು, ಇದರಿಂದ ಹಲವು ಆರೋಗ್ಯ ಲಾಭಗಳಿವೆ. ಇದು ಹೃದಯ ನಾಳಗಳ ಕೆಲಸವನ್ನು ಸರಾಗವಾಗಿಸುವುದಲ್ಲದೆ, ರಕ್ತದೊತ್ತಡ ಕಡಿಮೆ ಮಾಡಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ ಸೆರಟೋನಿನ್, ಡೋಪಮಿನ್, ನೋರೆಫೈನೆಫ್ರೈನ್ ಹಾಗೂ ಆಕ್ಸಿಟೋಸಿನ್ ಮುಂತಾದ ನ್ಯೂರೋಟ್ರಾನ್ಸ್‌ಮಿಟರ್ಸ್ ಕೆಲಸ ಮಾಡುವುದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ಕೂಡಾ ಉತ್ತಮಗೊಳ್ಳುತ್ತದೆ," ಎನ್ನುತ್ತಾರೆ ಮನಶಾಸ್ತ್ರಜ್ಞ ಹಾಗೂ ಲೈಂಗಿಕ ತಜ್ಞರಾದ ಡಾ. ಕೇದಾರ್ ತಿಲ್ವೆ. 

ವರ್ಕೌಟ್  ಮಾಡಿದಾಗ ಬಿಡುಗಡೆಯಾಗುವ ಫೀಲ್ ಗುಡ್ ಹಾರ್ಮೋನ್ಸ್, ಸೆಕ್ಸ್ ಸಂದರ್ಭದಲ್ಲೂ ಬಿಡುಗಡೆಯಾಗುತ್ತದೆ. ಅಷ್ಟೇ  ಅಲ್ಲ, ಲೈಂಗಿಕ ಚಟುವಟಿಕೆಯಿಂದ ಆಯಸ್ಸು ಕೂಡಾ ವೃದ್ಧಿಯಾಗುತ್ತದೆ. ಬ್ರಿಟಿಷ್ ಮೆಡಿಕಲ್ ಜರ್ನಿಯು 49ರಿಂದ 59 ವಯೋಮಾನದ ಸುಮಾರು 918 ಜನರನ್ನು 10 ವರ್ಷಗಳ ಕಾಲ ಅಧ್ಯಯನ ನಡೆಸಿತು. ನಂತರ ಕಂಡು ಬಂದಿದ್ದೇನೆಂದರೆ, ವಾರಕ್ಕೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಸೆಕ್ಸ್ ನಡೆಸುತ್ತಿದ್ದವರಲ್ಲಿ ಉಳಿದವರಿಗಿಂತ ಮರಣ ಪ್ರಮಾಣ ಶೇ.50ರಷ್ಟು ಕಡಿಮೆ ಕಂಡುಬಂದಿತು. 
ವರ್ಕೌಟ್‌ಗಿದು ಬದಲಿಯಾಗುವುದೇ?

ಸಂಗಾತಿಯೊಂದಿಗಿನ ವಯಸ್ಸಿನ ಅಂತರ ಭವಿಷ್ಯದ ಕನಸಿಗೆ ಕುತ್ತು!

ಲೈಂಗಿಕ ಚಟುವಟಿಕೆಯು ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕೆ ಪೂರಕ ಎಂಬುದರಲ್ಲಿ ಅನುಮಾನವಿಲ್ಲ. ಕ್ಯಾಲೋರಿ ಕಳೆದುಕೊಳ್ಳುವುದರ ಜೊತೆಗೆ, ಇದು ಪೆಲ್ವಿಕ್, ಪ್ಯಾರಾಸ್ಪೈನಲ್ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಕೂಡಾ.  ಒತ್ತಡ ಕೂಡಾ ಕಡಿಮೆ ಮಾಡುತ್ತದೆ. ಆದರೆ, ಇದನ್ನು ಪಕ್ಕಾ ವ್ಯಾಯಾಮ ಎಂದು ಹೇಳಲಾಗುವುದಿಲ್ಲ. ಅಥವಾ ವರ್ಕೌಟ್‌ಗೆ ಬದಲಿಯಾಗಿ ಸೆಕ್ಸ್ ಒಂದೇ ಸಾಕು ಎನ್ನಲಾಗುವುದಿಲ್ಲ. ವರ್ಕೌಟ್‌ನಷ್ಟು ಪರಿಣಾಮಗಳು ಇದರಿಂದ ಸಾಧ್ಯವಿಲ್ಲ. ಎರಡಕ್ಕೂ ಅದರದ್ದೇ ಆದ ಲಾಭಗಳಿವೆ. ನಿಮ್ಮ ವರ್ಕೌಟ್ ರೂಟಿನ್‌ಗೆ ಸೆಕ್ಸ್ ಸಪ್ಲಿಮೆಂಟ್ ಆಗಬಹುದೇ ಹೊರತು, ಬದಲಿಯಾಗುವುದಿಲ್ಲ ಎನ್ನುತ್ತಾರೆ ತಜ್ಞರು. 
 

click me!