ಕಲಿಯುವ ಉತ್ಸಾಹ ಇರೋ ಕೆಲವು ಮಕ್ಕಳು ಸ್ಲೋ ಏಕಿರುತ್ತಾರೆ?

First Published Jun 29, 2018, 7:35 PM IST
Highlights

ನನ್ನ ಮಗನಿಗೆ 4 ವರುಷ. ಸಾಮಾನ್ಯವಾಗಿ ಮಕ್ಕಳಿಗೆ ಹೊಸತನ್ನು ಕಲಿಯುವ ಉತ್ಸಾಹ ಅಧಿಕವಿರುತ್ತದೆ. ಆದರೆ, ಅಂಥ ಉತ್ಸಾಹ ಇವನಲ್ಲಿ ಕಾಣಿಸುತ್ತಿಲ್ಲ. ಹೇಳಿದ್ದನ್ನು ಗ್ರಹಿಸಿಕೊಳ್ಳುವುದೂ ತೀರಾ ನಿಧಾನ. ಅದಕ್ಕೆ ಆತ ಪ್ರತಿಕ್ರಿಯಿಸುವುದೂ ಇನ್ನೂ ನಿಧಾನ. ಯಾಕೆ ಹೀಗೆ? ಇದು ರೋಗವೇ? ಮಗನ ಮೆದುಳನ್ನು ಚುರುಕುಗೊಳಿಸಲು ನಾನೇನು ಮಾಡಬೇಕು?

ಸುನಂದಾ ಟಿ ಕೆ ತರೀಕೆರೆ

ನೀವು ಹೇಳುತ್ತಿರುವ ಸಮಸ್ಯೆಗೆ ಹಲವಾರು ಕಾರಣಗಳಿರಬಹುದು. ಈ ವಯಸ್ಸಿನ ಮಕ್ಕಳಲ್ಲಿ ಕಾಣುವ ‘ಅತೀ ಚಟುವಟಿಕೆ’ (hyper active) ಕಾರಣದಿಂದಲೂ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗಿ, ಗಮನ ಕೊಡದಿರುವುದು ಇರುತ್ತದೆ. ಹಾಗೆಯೇ, ಯಾವುದೇ ಚಟುವಟಿಕೆಗಳನ್ನು ಕೆಲವು ನಿಮಿಷಗಳ ಕಾಲ ಮಾಡುವಾಗ ತೊಂದರೆ, ಹೋಮ್‌ವರ್ಕ್ ಮಾಡದಿರುವುದು, ಶಾಲೆಯಲ್ಲಿ ತರಗತಿಯ ಪಾಠದ ಕಡೆ ಗಮನ ಇಲ್ಲದಿರುವುದು ಕೂಡ ಇದರ ಲಕ್ಷಣಗಳು. ಹಾಗೆಯೇ ಶಿಸ್ತಿನ ಕೊರತೆ ಕೂಡ ಈ ಸಮಸ್ಯೆಯನ್ನು ಹೆಚ್ಚಿಸಿರಬಹುದು. 

ಮನೆಯಲ್ಲಿ ಒಂದುಮಟ್ಟಿನ ಶಿಸ್ತನ್ನು ಕಾಪಾಡುವುದು ಉತ್ತಮ. ನಿಯಮಿತವಾಗಿ ವೇಳಾಪಟ್ಟಿಯಂತೆ ಎಲ್ಲ ಚಟುವಟಿಕೆಗಳನ್ನೂ ಮನೆಯಲ್ಲಿ ಕಾರ್ಯರೂಪಕ್ಕೆ ತರಲೆತ್ನಿಸಿ. ಮಗು ಒಳ್ಳೆಯದನ್ನು ಮಾಡಿದಾಗ ‘ಭೇಷ್’ ಎಂದು ಬೆನ್ನು ತಟ್ಟಿ ಪ್ರಶಂಸಿಸಿ. ಪೋಷಕರಾಗಿ ನಿಮಗೆ ತಾಳ್ಮೆ ಇರಲಿ. ನಿಮ್ಮ ನಡೆಯೂ ಅವರಿಗೆ ಮಾದರಿಯಾಗಿರಲಿ. ಅಗತ್ಯವಿದ್ದರೆ ಹತ್ತಿರದಲ್ಲಿರುವ ಮನೋವೈದ್ಯರನ್ನು ಕಂಡು ಸಲಹೆ ಪಡೆಯಿರಿ.

                                                                                                                                                                                                                       - ಡಾ. ಶುಭ್ರತಾ ಕೆ ಎಸ್, ಮನೋವೈದ್ಯೆ

click me!