ಸ್ಮಶಾನದಲ್ಲಿರೋ 'ಲಕ್ಕಿ' ರೆಸ್ಟೋರೆಂಟ್ ಇದು!

By Web Desk  |  First Published Jun 15, 2019, 12:26 PM IST

ಜೀವಂತ ಇರೋರ ಜೊತೆ ಊಟ ಮಾಡೋದ್ರಲ್ಲೇನೋ ಮಜಾ. ಆದ್ರೆ ಡೆಡ್ ಬಾಡಿ ಜೊತೆ ಊಟ ಮಾಡಿದ್ರೆ ಹೇಗಿರುತ್ತೆ? ಕೇಳಿದ್ರೆ ಶಾಕ್ ಆಗುತ್ತೆ ಆಲ್ವಾ? ಆದ್ರೆ ಹೀಗೆ ತಿಂಡಿ ತಿನ್ನೋ ಒಂದು ರೆಸ್ಟೋರೆಂಟ್ ಇದೆ.. 
 


ಸಾವಿನ ನಂತರ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಅದನ್ನು ಫೀಲ್ ಮಾಡಿಕೊಳ್ಳುವುದೂ ಅಸಾಧ್ಯ. ಸಾವಿನ ನಂತರ ಹೇಗೆ ಕಾಣುತ್ತೀವಿ, ಹೇಗೆ ಫೀಲ್ ಆಗುತ್ತೀವಿ, ಏನೂ ಅಂದರೆ ಏನೂ ಗೊತ್ತಾಗೋದಿಲ್ಲ. ಬದಲಾಗಿ ಸಾವಿನ ನಂತರದ ಜೀವನದ ಬಗ್ಗೆ ಮಾನವರೇ ಒಂದೊಂದು ರೀತಿಯ ಕಲ್ಪನಾ ಲೋಕವನ್ನು ಸೃಷ್ಟಿಸಿ ಕೊಳ್ಳುತ್ತಾರೆ. ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ. ನಮ್ಮ ದೇಶದಲ್ಲೊಂದು ರೆಸ್ಟೋರೆಂಟ್ ಇದೆ. ಅದು ಮುಖ್ಯವಾಗಿ ಸಾವಿನ ಬಗ್ಗೆ ವಿಶೇಷವಾಗಿ ತಿಳಿಸುವ ರೆಸ್ಟೋರೆಂಟ್. ಅಲ್ಲಿ ನಾವು ಡೆಡ್ ಬಾಡಿ ಜೊತೆ ಆಹಾರ ಸೇವಿಸಬಹುದು. 

ಹೌದು. ಈ ರೆಸ್ಟೋರೆಂಟ್ ಇರೋದು ಗುಜರಾತಿನ ಅಹ್ಮದಾಬಾದಿನಲ್ಲಿ. ಈ ರೆಸ್ಟೋರೆಂಟ್ ಹೆಸರು ನ್ಯೂ ಲಕ್ಕಿ ರೆಸ್ಟೋರೆಂಟ್. ಸಾಮಾನ್ಯವಾಗಿ ಮರಣ ಎಂದರೆ ನೆಗೆಟಿವ್ ಎನ್ನಲಾಗುತ್ತದೆ. ಸಾವಿಗೆ ಸಂಬಂಧಿಸಿದ ಎಲ್ಲಾ ವಿಷಯದಿಂದ ಜನರು ದೂರ ಸರಿಯುತ್ತಾರೆ. ಭೂತ, ಆತ್ಮ ಎಂದರೇನೇ ಜನರು ಭಯ ಪಡುತ್ತಾರೆ. ಈ ಭಯವನ್ನೆಲ್ಲ ಹೋಗಲಾಡಿಸಲು ಅಹ್ಮದಾಬಾದಿನಲ್ಲಿ ಈ ರೆಸ್ಟೋರೆಂಟ್ ಇದೆ. 

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!

ಇಲ್ಲಿ ಸ್ಮಶಾನದಲ್ಲೇ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಜನರು ಇಲ್ಲಿಗೆ ಬಂದು ತುಂಬಾ ಸಮಯದವರೆಗೆ ಡೆಡ್ ಬಾಡಿ ಜೊತೆ ಕುಳಿತುಕೊಂಡು ಊಟ ಮಾಡುತ್ತಾರೆ. ಇಲ್ಲಿ ಹೆಣ ಇದೆ ಎಂಬ ಭಯ ಇಲ್ಲಿನ ಮಾಲೀಕನಿಗೂ, ಅಲ್ಲಿ ಕೆಲಸ ಮಾಡುವವರಿಗೂ ಹಾಗೂ ಗ್ರಾಹಕರಿಗಂತೂ ಇಲ್ಲವೇ ಇಲ್ಲ. ಅಲ್ಲದೆ ಈ ಜಾಗ ಮಾಲೀಕರಿಗೆ ಲಕ್ಕಿ ಆಗಿರೋದರಿಂದ ಈ ಹೋಟೆಲ್‌ಗೆ ದ ನ್ಯೂ ಲಕ್ಕಿ ರೆಸ್ಟೋರೆಂಟ್ ಎನ್ನುತ್ತಾರೆ. 

1950ರ ಸಮಯದಲ್ಲಿ ಕೆ. ಎಚ್. ಮೊಹಮದ್ ಮತ್ತು ಕೃಷ್ಣನ್ ಕುಟ್ಟಿ ನಾಯರ್ ಎಂಬಿಬ್ಬರು ಹಳೆಕಾಲದ ಸ್ಮಶಾನವನ್ನು ದತ್ತು ತೆಗೆದುಕೊಂಡು ಅಲ್ಲೇ ಹೊರಗಡೆ ಟೀ ಅಂಗಡಿ ಇಟ್ಟು ಕೊಂಡರು. ಅಲ್ಲಿಯೇ ಟೀ ಮತ್ತು ಬನ್ ಮಾರಲು ಆರಂಭಿಸಿದರು. ಇಲ್ಲಿನ ಮಸಾಲಾ ಟೀ ಎಷ್ಟು ಫೇಮಸ್ ಆಯ್ತೆಂದರೆ ಬರುವ ತುಂಬಾ ಜನಕ್ಕಾಗಿ ಹೊಟೇಲ್ ನಿರ್ಮಿಸಬೇಕಾಗಿ ಬಂತು. ಅದಕ್ಕಾಗಿ ಸ್ಮಶಾನದಲ್ಲಿಯೇ ರೆಸ್ಟೋರೆಂಟ್ ಕಟ್ಟಿ, ಅಲ್ಲಿ ಟೇಬಲ್ ಮತ್ತು ಚೇರ್ ಇಟ್ಟರು. ಇಲ್ಲಿದ್ದ ಸಮಾಧಿಗಳ ಸುತ್ತಲೂ ಕಬ್ಬಿಣದ ಕಂಬಿಗಳನ್ನು ಹಾಕಿ, ಸಮಾಧಿಯನ್ನು ಹಸಿರು ಬಟ್ಟೆಯಿಂದ ಕವರ್ ಮಾಡಲಾಗಿದೆ. 

Tap to resize

Latest Videos

ಈ ಮೋಸ್ಟ್ ಹಾಂಟೆಡ್ ದ್ವೀಪಕ್ಕೆ ಹೋದ್ರೆ ಕಥೆ ಅಷ್ಟೇ....

ಇದಾದ ನಂತರ ಮೊದಲಿಗೆ ಜನರು ಇಲ್ಲಿ ಬರಲು ಹೆದರುತ್ತಿದ್ದರು, ಆದರೆ ಇಲ್ಲಿನ ಜನಪ್ರಿಯ ಮಸಾಲಾ ಟೀಯಿಂದ ಮತ್ತು ಮಸ್ಕಾ ಬನ್‌ನಿಂದಾಗಿ ಇದರ ಜನಪ್ರಿಯತೆ ಮಾತ್ರ ಕುಸಿಯಲಿಲ್ಲ. ಇಲ್ಲಿಗೆ ಸೆಲೆಬ್ರಿಟಿಗಳೂ ಬರಲಾರಂಭಿಸಿದರು. ಇದು ಇಂದಿಗೂ ಅಹ್ಮದಾಬಾದಿನ ಜನಪ್ರಿಯ ಮತ್ತು ವೈಶಿಷ್ಟ್ಯಗಳಿಂದ ತುಂಬಿದ ರೆಸ್ಟೋರೆಂಟ್ ಆಗಿ ಮಾರ್ಪಾಡಾಗಿದೆ. ನೀವೂ ಇಲ್ಲಿಗೆ ಭೇಟಿ ಮಾಡಿ ಡೆಡ್ ಬಾಡಿ ಜೊತೆ ಊಟ ಮಾಡಬಹುದು.. 

click me!