
ಮೇಷ
ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸ್ಥಿಮಿತಕ್ಕೆ
ಬರುವ ದಿನವು ಹತ್ತಿರದಲ್ಲಿದೆ. ನಿರೀಕ್ಷೆಯು
ಎಂದೂ ಹುಸಿಯಾಗದು ತಾಳ್ಮೆಯಿರಬೇಕಷ್ಟೆ.
ವೃಷಭ
ಇಷ್ಟಪಟ್ಟ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು
ಎದುರಾಗಲಿವೆ. ಕಾರು, ವಸ್ತ್ರ, ಆಭರಣಗಳ
ವ್ಯಾಪಾರಿಗಳಿಗೆ ಇದು ಶುಭಕಾಲವಾಗಿದೆ.
ಮಿಥುನ
ಮನದ ದುಗುಡ ಹೆಚ್ಚುವಂತಹ ಸುದ್ದಿ ಕಿವಿಗೆ
ಬಿದ್ದಿದೆ. ಅದರ ಪರಿಣಾಮ ನಿಮ್ಮ ಮನಸ್ಸು
ತಹಬದಿಗೆ ಬರುತ್ತಿಲ್ಲ. ಧೈರ್ಯ ತಂದುಕೊಳ್ಳಿ.
ಕಟಕ
ಕತ್ತಲೆಯೇ ಯಾವಾಗಲು ಇರದು. ಸೂರ್ಯ
ಎಷ್ಟು ಹೊತ್ತು ಬಚ್ಚಿಟ್ಟುಕೊಂಡರೂ ಮೇಲೇರಿ
ಬಂದು ನಿಮ್ಮ ಬದುಕನ್ನು ಬೆಳಗಲೇಬೇಕು.
ಸಿಂಹ
ಪ್ರೀತಿಪಾತ್ರರ ಜೊತೆ ವಿವಾದಗಳಿಗೆ ಅವಕಾಶ
ನೀಡದಿರಿ. ಅವರನ್ನು ಗೌರವದಿಂದ ಕಾಣಿರಿ.
ಅವರ ಆಗುಹೋಗುಗಳಿಗೆ ನೀವೇ ಕಾರಣರು.
ಕನ್ಯಾ
ನೀವು ಯೋಜಿಸಿದಂತೆಯೇ ಎಲ್ಲ ಕೆಲಸಗಳು
ನಿರಾತಂಕವಾಗಿ ನೆರವೇರುವವು. ಸಂಗೀತ
ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚು.
ತುಲಾ
ನಿನ್ನೆಯವರೆಗೂ ಸರಿಯಿದ್ದ ನಿಮ್ಮ ಹೊಸ
ವಾಹನದ ಖರೀದಿಯ ವಿಷಯ ಇಂದು
ತುಲಾ ಬೇರೆಯದೇ ತಿರುವನ್ನು ಪಡೆಯಲಿದೆ.
ವೃಶ್ಚಿಕ
ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ
ಕಾಣಲಿದೆ, ಗಾಬರಿಬೇಡ. ವಯೋಮಾನಕ್ಕೆ
ಸಂಬಂಧಿಸಿದ್ದರಿಂದ ಜಾಗ್ರತೆ ಇದ್ದರೆ ಸಾಕು.
ಧನುಸ್ಸು
ನಿಮ್ಮ ಸ್ನೇಹಿತನ ಮನೆಯ ವಿಷಮ ಪರಿಸ್ಥಿತಿ
ನಿಮ್ಮ ಮನಸ್ಸಿನ ಮೇಲೆ ತುಂಬಾ ಪರಿಣಾಮ
ಬೀರಲಿದೆ. ಅದಕ್ಕಾಗಿ ಹೆಚ್ಚು ಯೋಚಿಸಬೇಡಿ.
ಮಕರ
ನಿಮ್ಮ ಮೆಡಿಕಲ್ ಕ್ಷೇತ್ರದಲ್ಲಿನ ಸೇವೆಯನ್ನು
ಗುರುತಿಸಿ ಪ್ರಶಂಸೆಗಳ ಸುರಿಮಳೆಯಾಗಲಿದೆ.
ನಿಮ್ಮ ನಿಸ್ಪಹ ಸೇವೆಯ ಫಲವೇ ಇದು.
ಕುಂಭ
ನಿಮ್ಮ ಮನೆಯ ವಾಸ್ತುವಿನ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಜೀವನ ನಡೆದರೆ
ಸಾಕು ಎನ್ನುವ ಪರಿಸ್ಥಿತಿಯಲ್ಲಿ ಇದು ಬೇಕಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.