ನಿಮ್ಮ ದೇಹ ಆರೋಗ್ಯವಾಗಿರಲು ಪ್ರತಿನಿತ್ಯ ಎಷ್ಟು ಉಪ್ಪು ಅಗತ್ಯ..?

By Suvarna Web DeskFirst Published Feb 25, 2018, 10:02 PM IST
Highlights

ಉಪ್ಪಿಗಿಂತ ರುಚಿ ಇಲ್ಲ ಎನ್ನುವ ಗಾದೆಯನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ. ಆದರೆ ನಮ್ಮ ಆರೋಗ್ಯಕ್ಕೆ ಎಷ್ಟು ಉಪ್ಪು ಸೇವನೆ ಮಾಡಿದರೆ ಉತ್ತಮ ಎನ್ನುವುದು ಗೊತ್ತೆ..?

ಬೆಂಗಳೂರು : ಉಪ್ಪಿಗಿಂತ ರುಚಿ ಇಲ್ಲ ಎನ್ನುವ ಗಾದೆಯನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ. ಆದರೆ ನಮ್ಮ ಆರೋಗ್ಯಕ್ಕೆ ಎಷ್ಟು ಉಪ್ಪು ಸೇವನೆ ಮಾಡಿದರೆ ಉತ್ತಮ ಎನ್ನುವುದು ಗೊತ್ತೆ..?

ಉಪ್ಪು ಸಹ ಅನಾರೋಗ್ಯವನ್ನು ತಂದಿಡುತ್ತದೆ ಎಂದರೆ ನೀವು ನಂಬಲೇಬೇಕು. ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಹೃದಯ ಸಂಬಮಧಿ ತೊಂದರೆಯೊಂದಿಗೆ ರಕ್ತದ ಒತ್ತಡವೂ ಕೂಡ ಹೆಚ್ಚುತ್ತದೆ. ಆದ್ದರಿಂದ ನಿಗದಿತ ಪ್ರಮಾಣದಲ್ಲಿ ನಿತ್ಯ ಉಪ್ಪನ್ನು ಸೇವಿಸಿದಲ್ಲಿ ಮಾತ್ರ ಆರೋಗ್ಯಕ್ಕೆ ಉತ್ತಮ. ಇಲ್ಲವಾದಲ್ಲಿ ಉಪ್ಪು ಅನಾರೋಗ್ಯವನ್ನು ತಂದಿಡುತ್ತದೆ.

ಪ್ರತಿನಿತ್ಯ ಒಬ್ಬ ಮನುಷ್ಯ 4ರಿಂದ 6 ಗ್ರಾಂನಷ್ಟು ಉಪ್ಪನ್ನು ಸೇವಿಸಬಹುದಾಗಿದೆ. ಹೆಚ್ಚೆಂದರೆ ಒಂದು ಟೇಬಲ್ ಸ್ಪೂನ್ ಉಪ್ಪು ಸೇವಿಸಿದಲ್ಲಿ ಸಮಸ್ಯೆಯಾಗದು. ಅದು ಆಹಾರಗಳೊಂದಿಗೆ ಸೇರಿಸಿ ಸೇವಿಸಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ.

ನೀವು ಯಾವುದೇ ಸಂಸ್ಕರಿತ ಆಹಾರವನ್ನು ಕೊಳ್ಳುವಾಗ ಅದರಲ್ಲಿ ಉಪ್ಪಿನ ಪ್ರಮಾಣ ಎಷ್ಟಿರುತ್ತದೆ ಎನ್ನುವುದನ್ನು ಪರೀಕ್ಷಿಸಿ ಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

click me!