
ಮೇಷ
ವರಮಾನವು ಕಡಿಮೆಯಾಗಿದೆ. ಅದರಿಂದ
ಸಾಲಗಳು ಹೆಚ್ಚುತ್ತಿದೆ. ನಿಮಗೇ ತಿಳಿಯದಂತೆ
ಹಳೆಯ ಗೆಳೆಯರು ಸಹಕಾರಕ್ಕೆ ಬರಲಿದ್ದಾರೆ.
ವೃಷಭ
ಮಕ್ಕಳ ಮೇಲೆ ಕೋಪ ಬೇಡ. ಅವರನ್ನು
ಅರ್ಥ ಮಾಡಿಕೊಂಡರೆ ಎಲ್ಲಾ ಸರಿಹೋಗು
ತ್ತದೆ. ತಾಳ್ಮೆಯಿಂದ ವರ್ತಿಸುವುದು ಸೂಕ್ತ.
ಮಿಥುನ
ಹೊಗಳಿಕೆಗೆ ಹಿಗ್ಗದೆಯೂ ತೆಗಳಿಕೆಗೆ ಕುಗ್ಗದೆ
ಇರುವುದೇ ನಿಮ್ಮ ಪ್ಲಸ್. ಎಲ್ಲವನ್ನೂ ಸರಿಸಮ
ವಾಗಿಯೇ ತೆಗೆದುಕೊಳ್ಳುವ ಗುಣ ನಿಮ್ಮದು.
ಕಟಕ
ಹಿರಿಯರ ಆರೋಗ್ಯವನ್ನು ಸದಾ ಗಮನಿಸು
ತ್ತಲೇ ಇರಬೇಕು. ಅದು ಏರುಪೇರಾಗುವ
ಲಕ್ಷಣಗಳಿವೆ. ಮುಂಜಾಗ್ರತೆ ಒಳ್ಳೆಯದು.
ಕನ್ಯಾ
ಬೆಳೆದಿರುವ ಮಕ್ಕಳನ್ನು ದಂಡಿಸದಿರಿ. ಅವರ
ಮನಸ್ಥಿತಿಯು ಮಕ್ಕಳಂತೆ ಇಲ್ಲ. ಅವಾಂತರ
ಗಳಿಗೆ ಅವಕಾಶ ಕೊಡದಿರಿ. ಒಂದು ಕಣ್ಣಿಟ್ಟಿರಿ.
ಸಿಂಹ
ಬಣ್ಣ ಬಣ್ಣದ ಬಟ್ಟೆಗಳನ್ನು ತೊಡುವ ನಿಮಗೆ
ಆ ವ್ಯಾಮೋಹವು ನಿಮಗಿಂದು ಹೆಚ್ಚಿನ
ತುಲಾ ಖರ್ಚನ್ನು ಮಾಡಿಸುತ್ತದೆ. ಪ್ರವಾಸ ಯೋಗ.
ವೃಶ್ಚಿಕ
ಕೆಲಸದ ಒತ್ತಡವು ಇಂದು ನಿಮ್ಮನ್ನು ಹೆಚ್ಚು
ಕಾಡಲಿದೆ. ಸ್ವಂತ ಕೆಲಸ ಮಾಡುವವರಿಗೆ
ಆದಾಯ ಕಡಿಮೆಯಾಗಿ ಶ್ರಮ ಹೆಚ್ಚಾಗಲಿದೆ.
ಧನುಸ್ಸು
ಹಿರಿಯರಿಗೆ ನೀವು ಆಗಾಗ ಸಹಾಯ ಮಾಡು
ತ್ತಿರುತ್ತೀರಿ. ಅಂತಹ ಒಂದು ಮಹತ್ವದ ಕೆಲಸಕ್ಕೆ
ಇಂದು ಕೈಹಾಕಲಿದ್ದೀರಿ. ಖುಷಿಯ ದಿನ.
ಮಕರ
ಕೃಷಿಕರಿಗೆ ಹೆಚ್ಚಿನ ಲಾಭಗಳೇನು ಸಿಗದಿದ್ದರೂ
ಬಂಡವಾಳಕ್ಕೇನು ಮೋಸವಿಲ್ಲ. ಸ್ವಲ್ಪ ದಿನಗಳು
ಕಾಯಲೇ ಬೇಕು. ಒಳ್ಳೆಯ ದಿನ ಬರಲಿದೆ.
ಕುಂಭ
ಇಂದು ನಿಮಗೆ ಶುಭ ಸೂಚಕವೇ ಹೆಚ್ಚು.
ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯ
ಹೊಂದುವಿರಿ. ಧನಾತ್ಮಕ ಸಂಕೇತಗಳೇ ಹೆಚ್ಚು.
ಮೀನ
ಮಹಿಳೆಯರಲ್ಲಿ ವಯೋಮಾನದ ಸಮಸ್ಯೆ
ಗಳು ಹೆಚ್ಚಾಗಿ ಕಾಡಲಿದೆ. ಅವರ ಮನಸ್ಸಿಗೆ
ಆಘಾತವಾಗುವಂತಹ ಸುದ್ದಿ ತಿಳಿಸದಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.