ವರ್ಕ್ಔಟ್ ಮಾಡುವಾಗ ಗುಂಡು, ತುಂಡಿನ ಮೇಲಿರಲಿ ಹಿಡಿತ...

By Web Desk  |  First Published Jun 4, 2019, 10:43 AM IST

ವರ್ಕೌಟ್ ಬಳಿಕದ ರೂಟಿನ್ ಕೂಡಾ ವರ್ಕೌಟ್‌ನಷ್ಟೇ ಮುಖ್ಯ. ಹೀಗಾಗಿ, ವರ್ಕೌಟ್ ಬಳಿಕ ಏನು ಮಾಡಬೇಕು, ಏನು ಮಾಡಬಾರದು ಎಂಬ ಸಂಗತಿ ತಿಳಿದುಕೊಂಡಿರಬೇಕು.


ವರ್ಕೌಟ್‌ ಮಾಡಿದ ಬಳಿಕ ಹೆಚ್ಚಿನ ಲಾಭ ಪಡೆಯಬೇಕೆಂದರೆ ಕೆಲವು ಸಂಗತಿಗಳಿಂದ ದೂರ ಉಳಿಯಬೇಕು, ಮತ್ತು ಕೆಲವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜಿಮ್‌ಗೆ ಹೋಗುತ್ತಿದ್ದರೂ ಸರಿ, ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದರೂ ಸರಿ, ವರ್ಕೌಟ್ ನಂತರ ಮಾಡಬಾರದ ತಪ್ಪುಗಳಿವು.

ಸ್ಟ್ರೆಚ್ ಮಾಡದಿರುವುದು
ವರ್ಕೌಟ್ ಮುಗಿದ ಬಳಿಕ ಸೀದಾ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ.  ವರ್ಕೌಟ್ ಆಗುತ್ತಿದ್ದಂತೆಯೇ  ಸ್ನಾಯುಗಳು ರಿಲ್ಯಾಕ್ಸ್ ಆಗಿ, ಚೆನ್ನಾಗಿ ರಕ್ತ ಸಂಚಾರ ಆಗಲು ಫೋಮ್ ರೋಲಿಂಗ್ ಅಥವಾ ಸಿಂಪಲ್ ಸ್ಟ್ರೆಚಿಂಗ್ ಎಕ್ಸರ್ಸೈಸ್‌ಗಳನ್ನು ಮಾಡಬೇಕು.  



ತಡವಾಗಿ ಆಹಾರ ಸೇವನೆ
ನಿಜವೆಂದರೆ, ವರ್ಕೌಟ್ ಆದ 30ರಿಂದ 45 ನಿಮಿಷದೊಳಗೆ ಆಹಾರ ಸೇವಿಸಬೇಕು. ಇದರಿಂದ ದೇಹವು ಸ್ನಾಯುಗಳ ರಿಪೇರ್‌ಗೆ ಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಉತ್ಪತ್ತಿ ಮಾಡುತ್ತದೆ. ಸ್ಮೂತಿ, ಪ್ರೋಟೀನ್ ಬಾರ್, ಎನರ್ಜಿ ಡ್ರಿಂಕ್, ಬಾಳೆಹಣ್ಣು, ಹಾಲು ಏನಾದರೂ ಸರಿ, ವರ್ಕೌಟ್ ಮುಗಿಯುತ್ತಿದ್ದಂತೆಯೇ ಸೇವಿಸಬೇಕು. 

Tap to resize

Latest Videos

ಬೆವರಿದ ಬಟ್ಟೆ ಬದಲಿಸದಿರುವುದು
ನೀವು ಧರಿಸಿದ ವರ್ಕೌಟ್ ಬಟ್ಟೆ ಯಾವುದೇ ಬ್ರ್ಯಾಂಡ್‌ದಾಗಿರಬಹುದು, ಎಷ್ಟೇ ಕ್ಯೂಟ್ ಆಗಿರಬಹುದು. ಆದರೆ, ವರ್ಕೌಟ್ ಮುಗಿಯುತ್ತಿದ್ದಂತೆಯೇ ಅದನ್ನು ಬದಲಿಸಬೇಕು. ಇದರಿಂದ ಇನ್ಫೆಕ್ಷನ್ ಹಾಗೂ ದುರ್ನಾತ ಬರುವುದನ್ನು ತಡೆಯಬಹುದು.

ಫಿಟ್ನೆಸ್ ಫ್ರೀಕ್ ಆಗಿದ್ದರೆ ಈ ಮಾಡೆಲ್‌ಗಳನ್ನು ಫಾಲೋ ಮಾಡಲೇಬೇಕು!

ಸ್ಮೋಕ್ ಬ್ರೇಕ್ ತೆಗೆದುಕೊಳ್ಳುವುದು
ಸ್ಮೋಕಿಂಗ್ ಹಾಗೂ ವರ್ಕೌಟ್ ಒಂದಕ್ಕೊಂದು ಪೂರಾ ದುಶ್ಮನಿಗಳು. ಸಿಗರೇಟ್‌ನಲ್ಲಿರುವ ನಿಕೋಟಿನ್ ಹಾಗೂ ಕಾರ್ಬನ್ ಮೋನಾಕ್ಸೈಡ್ ಹೃದಯದ ಕವಾಟುಗಳನ್ನು ಕಿರಿದುಗೊಳಿಸುತ್ತವೆ. ಇದರಿಂದ ದೇಹದ ಎಲ್ಲ ಅಂಗಾಗಳಿಗೆ ರಕ್ತ ಪಂಪ್ ಮಾಡಲು ಹೃದಯ ಹೆಚ್ಚು ಒದ್ದಾಡಬೇಕು. ವರ್ಕೌಟ್‌ನಿಂದ ಮಸಲ್ಸ್ ಬೆಳೆಸಬೇಕೆಂದಿದ್ದರೆ ಅವುಗಳಿಗೆ ಆಕ್ಸಿಜನ್ ಪೂರೈಕೆ ಅಗತ್ಯವಿದೆ. ಆದರೆ, ಸಿಗರೇಟ್ ಈ ಆಮ್ಲಜನಕ ಪೂರೈಕೆಗೆ ತಡೆ ತರುತ್ತದೆ. ಹೀಗಾಗಿ, ವರ್ಕೌಟ್ ಬಳಿಕವಷ್ಟೇ ಅಲ್ಲ, ಶಾಶ್ವತವಾಗಿ ಸಿಗರೇಟ್ ಚಟಕ್ಕೆ ಬೈಬೈ ಹೇಳುವುದು ಉತ್ತಮ.

ಮದ್ಯ ಸೇವನೆ
ವರ್ಕೌಟ್‌ನಿಂದ ದೇಹ ಅದಾಗಲೇ ಡಿಹೈಡ್ರೇಟ್ ಆಗಿರುತ್ತದೆ. ಹೀಗಾಗಿ, ನಂತರದಲ್ಲಿ ಆಲ್ಕೋಹಾಲ್ ಸೇವನೆ ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮನ್ನು ಬಲು ಬೇಗ ಕುಡಿತದ ಚಟಕ್ಕೆ ಎಳೆದುಕೊಳ್ಳುತ್ತದೆ. ಅಲ್ಲದೆ, ಪ್ರತಿದಿನ ವರ್ಕೌಟ್ ಬಳಿಕ ಮದ್ಯ ಸೇವಿಸಿದರೆ ಕಾಲಾಂತರದಲ್ಲಿ ನಿಮ್ಮ ನರಮಂಡಲಕ್ಕೂ ದೇಹಕ್ಕೂ ಕನೆಕ್ಷನ್ ಮಿಸ್ ಹೊಡೆಯಲಾರಂಭಿಸುತ್ತದೆ. ಮೆದುಳು ಹೇಳಿದ್ದನ್ನು ದೇಹ ಕೇಳದೇ ಹೋಗಬಹುದು.

ನಿದ್ದೆ ಮಾಡದಿರುವುದು
ವರ್ಕೌಟ್ ಮಾಡುವಾಗ ಪ್ರತಿ ರಾತ್ರಿ ಉತ್ತಮ ನಿದ್ರೆ ಅತ್ಯಗತ್ಯ. ನಿದ್ರೆಯ ಆರ್‌ಇಎಂ ಸ್ಟೇಜ್‌ನಲ್ಲಿ ಬೆಳಗಿನ ಹೊತ್ತು ಹಾನಿಗೊಂಡ ಸ್ನಾಯು ಹಾಗೂ ಟಿಶ್ಯೂಗಳು ರಿಪೇರ್ ಆಗುತ್ತವೆ. ಅಲ್ಲದೆ, ನಿದ್ರೆ ಸರಿಯಾಗಿ ಆಗಿಲ್ಲವಾದರೆ ಸುಸ್ತಿನಿಂದ ಮರುಬೆಳಗ್ಗೆ ಸರಿಯಾಗಿ ವರ್ಕೌಟ್ ಕೂಡಾ ಮಾಡಲಾರಿರಿ. ಹಾಗಾಗಿ ವರ್ಕೌಟ್ ಮಾಡುವಾಗ ಚೆನ್ನಾಗಿ ನಿದ್ರಿಸುವುದು ಅಗತ್ಯ. 

click me!