Smartwatch Charging: ಚಾರ್ಜಿಂಗ್ ವೇಳೆ ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಸ್ಮಾರ್ಟ್‌ವಾಚ್ ತಂದ ತಿಂಗಳಿಗೇ ಗುಜರಿಗೆ!

Published : Jul 19, 2026, 11:35 AM IST
Common Smartwatch Charging Mistakes That Ruin Your Battery

ಸಾರಾಂಶ

ಈಗ ಎಲ್ಲರ ಕೈನಲ್ಲೂ ಸ್ಮಾರ್ಟ್ ವಾಚ್‌ಗಳಿವೆ.. ಆದರೆ ಸರಿಯಾಗಿ ಚಾರ್ಜ್ ಮಾಡದಿದ್ದರೆ ಅದರ ಬ್ಯಾಟರಿ ಬೇಗನೆ ಹಾಳಾಗಬಹುದು. ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಮತ್ತು ನಿಮ್ಮ ವಾಚ್‌ನ ಬ್ಯಾಟರಿ ಬಾಳಿಕೆ ಹೆಚ್ಚಿಸುವ ಸರಳ ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲು ಸ್ಮಾರ್ಟ್ ವಾಚ್‌ಗಳಿವೆ. ಫಿಟ್ನೆಸ್ ಟ್ರ್ಯಾಕಿಂಗ್‌ನಿಂದ ಹಿಡಿದು ನೋಟಿಫಿಕೇಶನ್‌ಗಳವರೆಗೆ ಹಲವು ಫೀಚರ್ಸ್ ಇರುವುದರಿಂದ ಎಲ್ಲ ಒಂದರಲ್ಲೇ ಸೌಲಭ್ಯ ಸಿಗುವ ಸ್ಮಾರ್ಟ್ ವಾಚ್ ಎಂದರೆ ಈಗ ಎಲ್ಲರಿಗೂ ಅಚ್ಚುಮೆಚ್ಚು.

ಆದರೆ ಸ್ಮಾರ್ಟ್ ವಾಚ್ ಖರೀಸುವುದು ಸುಲಭ. ಆದರೆ ಮೆಂಟೇನ್ ಮಾಡೋಕೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸ್ಮಾರ್ಟ್ ವಾಚ್ ಹಿಂದಿನ ವಾಚ್‌ಗಳಂತಲ್ಲ. ನೀವು ಮಾಡುವ ಈ ತಪ್ಪುಗಳಿಂದ ಬ್ಯಾಟರಿ ಬೇಗನೇ ಹಾಳಾಗುತ್ತದೆ.ಕೇಳುವುದಕ್ಕೆ ಇದು ಸಣ್ಣ ವಿಷಯದಂತೆ ಕಂಡರೂ, ನಿಮ್ಮ ದುಬಾರಿ ಗ್ಯಾಜೆಟ್‌ನ ಬಾಳಿಕೆಯನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಚಾರ್ಜಿಂಗ್ ವಿಧಾನ ಅನುಸರಿಸದಿದ್ದರೆ, ವಾಚ್‌ನ ಬ್ಯಾಟರಿ ಸಾಮರ್ಥ್ಯ ಕೆಲವೇ ತಿಂಗಳುಗಳಲ್ಲಿ ಕುಸಿಯಲು ಆರಂಭವಾಗುತ್ತದೆ. ಹಾಗಾದರೆ, ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ವಿವರ.

ಚಾರ್ಜಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ

ಅನೇಕರು ಮಾಡುವ ಮೊದಲ ಮತ್ತು ದೊಡ್ಡ ತಪ್ಪು ಎಂದರೆ ರಾತ್ರಿಯಿಡೀ ವಾಚ್ ಅನ್ನು ಚಾರ್ಜ್‌ಗೆ ಹಾಕಿ ಮಲಗಿಬಿಡುವುದು ಬ್ಯಾಟರಿ 100% ಪೂರ್ಣಗೊಂಡ ನಂತರವೂ ಚಾರ್ಜಿಂಗ್ ಮುಂದುವರಿಸಿದರೆ, ಅದು ಬ್ಯಾಟರಿಯ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ. ಹೀಗೆ ಮಾಡುವುದರಿಂದ ಬ್ಯಾಟರಿಯ ಲೈಫ್ಸ್ಪ್ಯಾನ್ ಗಣನೀಯವಾಗಿ ಕಡಿಮೆಯಾಗುತ್ತದೆ. ಯಾವಾಗಲೂ ಸ್ಮಾರ್ಟ್‌ವಾಚ್ ಜೊತೆಗೆ ಬಂದಿರುವ ಒರಿಜಿನಲ್ ಚಾರ್ಜರ್ ಅನ್ನೇ ಬಳಸುವುದು ಉತ್ತಮ. ಮೊಬೈಲ್ ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಫಾಸ್ಟ್ ಚಾರ್ಜರ್‌ಗಳನ್ನು ಬಳಸುವುದು ಅತ್ಯಂತ ಅಪಾಯಕಾರಿ. ಇವುಗಳು ಹೆಚ್ಚು ಪವರ್ ನೀಡುವುದರಿಂದ, ವಾಚ್‌ನ ಸೂಕ್ಷ್ಮ ಬ್ಯಾಟರಿಯನ್ನು ಶಾಶ್ವತವಾಗಿ ಹಾನಿಗೊಳಿಸಬಹುದು.

ಬ್ಯಾಟರಿಯನ್ನು ಸಂಪೂರ್ಣವಾಗಿ 0% ಆಗುವವರೆಗೆ ಕಾಯಬಾರದು!

ಇನ್ನೊಂದು ಪ್ರಮುಖ ಅಂಶವೆಂದರೆ, ಬ್ಯಾಟರಿಯನ್ನು ಸಂಪೂರ್ಣವಾಗಿ 0% ಆಗುವವರೆಗೆ ಕಾಯಬಾರದು. ಬ್ಯಾಟರಿ ಮಟ್ಟವು ಸುಮಾರು 20% ಗೆ ಇಳಿದಾಗ ಚಾರ್ಜ್ ಮಾಡುವುದು ಸೂಕ್ತ ಅಭ್ಯಾಸ. ಬ್ಯಾಟರಿಯನ್ನು ಸಂಪೂರ್ಣವಾಗಿ ಖಾಲಿಯಾಗಲು ಬಿಡುವುದು ಅದರ ರಾಸಾಯನಿಕ ಸಂಯೋಜನೆಯ ಮೇಲೆ ಒತ್ತಡ ಹೇರುತ್ತದೆ ಮತ್ತು ಬಾಳಿಕೆಯನ್ನು ಕಡಿಮೆ ಮಾಡುತ್ತದೆ. ಅಂತೆಯೇ, ಅತಿಯಾದ ಬಿಸಿ ಅಥವಾ ತಣ್ಣಗಿನ ವಾತಾವರಣದಲ್ಲಿ ನಿಮ್ಮ ಸ್ಮಾರ್ಟ್‌ವಾಚ್ ಅನ್ನು ಚಾರ್ಜ್ ಮಾಡುವುದನ್ನು ತಪ್ಪಿಸಿ. ಇಂತಹ ತಾಪಮಾನಗಳು ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಮತ್ತು ಹಾನಿಗೆ ಕಾರಣವಾಗಬಹುದು. ಈ ಸರಳ ನಿಯಮಗಳನ್ನು ಪಾಲಿಸಿದರೆ, ನಿಮ್ಮ ಸ್ಮಾರ್ಟ್‌ವಾಚ್‌ನ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುವುದರಲ್ಲಿ ಸಂಶಯವಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಹಚ್ಚೋ ಕುಂಕುಮ ಇಲ್ಲೇ ತಯಾರಾಗೋದು, ಈ ಹಳ್ಳಿಯ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ
ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿದರೆ ನಿಜವಾಗಿಯೂ ಕರಡಿ ದಾಳಿ ನಿಲ್ಲಿಸುತ್ತದೆಯೇ?