ಕರೆಂಟ್ ಬಿಲ್ ಏಕಾಏಕಿ ಜಾಸ್ತಿಯಾಗಿದೆಯಾ? ಫ್ರಿಡ್ಜ್ ಬಳಕೆಯಲ್ಲಿ ಈ ತಪ್ಪುಗಳಿದೆಯೇ ನೋಡಿ!

Published : May 26, 2026, 05:44 PM IST
Refrigerator Mistakes

ಸಾರಾಂಶ

ನಿಮ್ಮ ಮನೆಯ ಫ್ರಿಡ್ಜ್ ಸರಿಯಾಗಿ ಕೂಲ್ ಆಗ್ತಿಲ್ವಾ? ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಹಾಗಿದ್ರೆ ನೀವು ತಿಳಿಯದೆ ಮಾಡುವ ಈ ತಪ್ಪುಗಳೇ ಕಾರಣವಿರಬಹುದು. ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡುವುದರಿಂದ ಕಂಪ್ರೆಸರ್‌ಗೆ ಹೆಚ್ಚು ಒತ್ತಡ ಬೀಳುತ್ತದೆ.

ಅದೆಷ್ಟೋ ಮನೆಗಳಲ್ಲಿ "ನಮ್ಮ ಫ್ರಿಡ್ಜ್ ಮೊದಲಿನ ಹಾಗೆ ತಣ್ಣಗಾಗುತ್ತಿಲ್ಲ" ಅನ್ನೋ ದೂರು ಸಾಮಾನ್ಯ. ಜೊತೆಗೆ, ಕರೆಂಟ್ ಬಿಲ್ ಕೂಡ ಗಗನಕ್ಕೇರುತ್ತಿರಬಹುದು. ಇದಕ್ಕೆಲ್ಲಾ ಕಾರಣ ಫ್ರಿಡ್ಜ್‌ನ ದೋಷವಲ್ಲ, ಬದಲಾಗಿ ನಾವು ತಿಳಿಯದೆ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು. ಈ ಅಭ್ಯಾಸಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳಿ.

ಬಿಸಿ ಆಹಾರವನ್ನು ನೇರವಾಗಿ ಇಡಬೇಡಿ

ತುರ್ತಿನಲ್ಲಿ ಹಲವರು ಬಿಸಿಯಾದ ಸಾರು ಅಥವಾ ಇತರ ಆಹಾರ ಪದಾರ್ಥಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಹೀಗೆ ಮಾಡುವುದರಿಂದ ಫ್ರಿಡ್ಜ್‌ನ ಒಳಗಿನ ತಾಪಮಾನ ಥಟ್ಟನೆ ಹೆಚ್ಚಾಗಿ, ಕಂಪ್ರೆಸರ್ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಫ್ರಿಡ್ಜ್ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಿ ಬಂದು, ವಿದ್ಯುತ್ ಬಳಕೆ ಹೆಚ್ಚಾಗುತ್ತದೆ ಮತ್ತು ಕೂಲಿಂಗ್ ಸಿಸ್ಟಮ್ ದುರ್ಬಲಗೊಳ್ಳುತ್ತದೆ.

ಗೋಡೆಯಿಂದ ಅಂತರವಿರಲಿ

ಜಾಗ ಉಳಿಸುವುದಕ್ಕಾಗಿ ಹಲವರು ಫ್ರಿಡ್ಜ್ ಅನ್ನು ಗೋಡೆಗೆ ತಾಗಿಸಿ ಇಡುತ್ತಾರೆ. ಇದು ಫ್ರಿಡ್ಜ್‌ನ ಹಿಂದಿರುವ ಕಂಡೆನ್ಸರ್ ಕಾಯಿಲ್‌ಗಳಿಗೆ ಗಾಳಿಯಾಡಲು ಅಡ್ಡಿಪಡಿಸುತ್ತದೆ. ಬಿಸಿ ಹೊರಗೆ ಹೋಗಲು ಸಾಧ್ಯವಾಗದಿದ್ದಾಗ, ಫ್ರಿಡ್ಜ್ ಬಿಸಿಯಾಗಿಯೇ ಉಳಿದು ಕೂಲಿಂಗ್ ಕಡಿಮೆಯಾಗುತ್ತದೆ.

ಹೆಚ್ಚು ಹೊತ್ತು ಡೋರ್ ತೆರೆದಿಡಬೇಡಿ

ನೀವು ಪದೇ ಪದೇ ಫ್ರಿಡ್ಜ್ ಡೋರ್ ತೆರೆದರೆ, ಹೆಚ್ಚು ಹೊತ್ತು ತೆರೆದಿಟ್ಟರೆ, ಅಥವಾ ಮುಚ್ಚಲು ಮರೆತರೆ, ಒಳಗಿನ ತಂಪಾದ ಗಾಳಿ ಹೊರಹೋಗುತ್ತದೆ. ಇದು ಪುನರಾವರ್ತನೆಯಾದಾಗ, ತಾಪಮಾನವನ್ನು ಮೊದಲಿನ ಸ್ಥಿತಿಗೆ ತರಲು ಫ್ರಿಡ್ಜ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

ಸಾಮಾನುಗಳನ್ನು ತುರುಕಬೇಡಿ

ಅನೇಕರು ಫ್ರಿಡ್ಜ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಾಮಾನುಗಳನ್ನು ತುರುಕುತ್ತಾರೆ. ಇದು ಪದಾರ್ಥಗಳು ಹಾಳಾಗುವುದನ್ನು ತಡೆಯಬಹುದು, ಆದರೆ ಫ್ರಿಡ್ಜ್‌ಗೆ ಹಾನಿ ಮಾಡುತ್ತದೆ. ಸಾಮಾನುಗಳು ತುಂಬಿರುವುದರಿಂದ ತಂಪಾದ ಗಾಳಿ ಸರಿಯಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕೆಲವು ಭಾಗಗಳಲ್ಲಿ ಹೆಚ್ಚು ತಂಪಾದರೆ, ಇನ್ನು ಕೆಲವು ಕಡೆ ಕಡಿಮೆ ತಂಪು ಉಂಟಾಗುತ್ತದೆ.

ಸ್ವಚ್ಛಗೊಳಿಸಲು ಮಡಿವಂತಿಕೆ ಬೇಡ

ಫ್ರಿಡ್ಜ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಹಿಂದಿನ ಕಾಯಿಲ್‌ಗಳಲ್ಲಿ ಮತ್ತು ಒಳಗಿನ ಟ್ರೇಗಳಲ್ಲಿ ಧೂಳು ಸಂಗ್ರಹವಾಗುತ್ತದೆ. ಇದು ಯಂತ್ರದ ಕೂಲಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡಿ, ಮೋಟಾರ್‌ಗೆ ಹೆಚ್ಚು ಹೊರೆ ನೀಡುತ್ತದೆ. ಜೊತೆಗೆ, ದುರ್ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಉಂಟಾಗಲು ಇದು ಕಾರಣವಾಗುತ್ತದೆ.

ತಾಪಮಾನವನ್ನು ಸರಿಯಾಗಿ ಸೆಟ್ ಮಾಡಿ

ಅತಿ ಕಡಿಮೆ ತಾಪಮಾನ ಅಥವಾ ಅತಿಯಾದ ಕೂಲಿಂಗ್ ಸೆಟ್ ಮಾಡುವುದು ಎರಡೂ ಹಾನಿಕಾರಕ. ಅತಿಯಾದ ತಂಪು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ, ಅದೇ ರೀತಿ ಕೂಲಿಂಗ್ ಕಡಿಮೆಯಿದ್ದರೆ ಆಹಾರ ಪದಾರ್ಥಗಳು ಬೇಗನೆ ಹಾಳಾಗುವ ಸಾಧ್ಯತೆಯಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪದ್ಮಶ್ರೀ ಪುರಸ್ಕೃತೆಯಿಂದ ಐಶ್ಚರ್ಯ ರೈ ಬಾಡಿ ಶೇಮಿಂಗ್: ಯಾರೀ ಮೃಣಾಲ್​? ಪ್ರಶಸ್ತಿ ಸಿಕ್ಕಿದ್ದು ಹೇಗೆ
ಉಜ್ಜಿದ್ರೆ ಪ್ರಯೋಜನವಿಲ್ಲ, ಶರ್ಟ್ ಕಾಲರ್ ಮೇಲಿನ ಕಪ್ಪು ಕಲೆ ತೆಗೆಯಲು ಈ ಟ್ರಿಕ್ಸ್ ಬಳಸಿ