ಎಷ್ಟು ಕ್ಲೀನ್ ಮಾಡಿದರೂ ಮನೆಯೊಳಗೆ ಬಲೆ,ಧೂಳು ಸೇರುತ್ತಿದೆಯಾ? ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

Published : Sep 25, 2026, 01:11 PM IST
Tired of Cobwebs and Dust at Home

ಸಾರಾಂಶ

ಪ್ರತಿ ದಿನ ಮನೆ ಸ್ವಚ್ಚಗೊಳಿಸಿದರೂ ಮನೆ ಮೂಲೆಗಳಲ್ಲಿ ಬಲೆಗಳು, ಧೂಳು ಸೇರಿಕೊಳ್ಳುತ್ತಿದೆಯಾ? ಹಾಗಾದರೆ ಸಿಂಪಲ್ ಟ್ರಿಕ್ ಮೂಲಕ ಮನೆಯೊಳಗೆ ಬಲೆ ಕಟ್ಟಿಕೊಳ್ಳದಂತೆ, ಧೂಳು ಹಿಡಿಯದಂತೆ ಮಾಡಲು ಸಾಧ್ಯವಿದೆ.

ಮನೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಸ್ವಚ್ಚವಾಗಿಟ್ಟುಕೊಳ್ಳುವುದು ಸವಾಲು. ಧೂಳು, ಕೀಟಗಳು, ಜೇಡರ ಬಲೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿ ದಿನ ಮನೆಯನ್ನು ಹಲವು ಕ್ಲೀನರ್ ಬಳಸಿ ಶುಚಿಗೊಳಿಸಿದರೂ ಸಮಸ್ಯೆ ಮುಗಿಯುತ್ತಿಲ್ಲ ಅನ್ನೋದು ಹಲವರ ಚಿಂತೆ. ಇದಕ್ಕೆ ಸುಲಭ ಪರಿಹಾರವಿದೆ. ಮನೆಯನ್ನು ಸ್ವಚ್ಚವಾಗಿಡುವುದಲ್ಲದೆ, ಬಲೆ, ಧೂಳಿನಿಂದ ಮುಕ್ತವಾಗಿಸುತ್ತದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಿದೆ.

ಮನೆಯೊಳಗೆ ಸರಿಯಾಗಿ ಗಾಳಿ ಬೆಳಕು ಬೇಕು

ಮನೆಯೊಳಗೆ ಧೂಳು ಸೇರಿಕೊಳ್ಳುವುದು, ಬಲೆ ಕಟ್ಟಿಕೊಳ್ಳುವುದು ಸಾಮಾನ್ಯ. ಪ್ರಮುಖವಾಗಿ ಕೆಲ ಮುನ್ನಚ್ಚರಿಕೆ ವಹಿಸಿದರೆ ಈ ಸಮಸ್ಯೆಯಿಂದ ದೂರವಿರಲು ಸಾಧ್ಯವಿದೆ. ಮನೆಯ ಹೊರಗಿನಿಂದ ಬರವು ಧೂಳು, ಮನೆಯೊಳಗಿನ ಫರ್ನೀಟರ್ ಸೇರಿದಂತೆ ಇತರ ವಸ್ತುಗಳಿಂದ ಧೂಳು ಸೇರಿಕೊಳ್ಳುತ್ತದೆ. ಇನ್ನು ಸಣ್ಣ ಕೀಟಗಳು, ಕಣ್ಣಿಗೆ ಕಾಣದಂತೆ ಕೀಟಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಇದರಿಂದ ಜೇಡಗಳು ಬಲೆ ಕಟ್ಟಿಕೊಳ್ಳುತ್ತದೆ. ಇದಕ್ಕೆ ಪ್ರಮುಖವಾಗಿ ಮನೆಯೊಳಗೆ ಸಾಕಷ್ಟು ಗಾಳಿ ಬೆಳಕು ಬೀಳುವಂತೆ ಮಾಡಬೇಕು. ಸೂರ್ಯನ ಬೆಳಕು ಸರಿಯಾದ ಪ್ರಮಾಣದಲ್ಲಿ ಬೀಳಬೇಕು. ಮನೆಯ ಎಲ್ಲಾ ಕೋಣೆಗಳಿಗೆ ಬೆಳಕು ಬೀಳುವಂತಿದ್ದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ.

ಮೊದಲು ಧೂಳು ನಿವಾರಣೆ ಮಾಡಬೇಕು

ಮನೆಯೊಳಗೆ ಧೂಳು ಸೇರಿಕೊಳ್ಳದಂತೆ ಎಚ್ಚರವಹಿಸಬೇಕು. ಮನೆಯ ಫ್ಯಾನ್, ಗೋಡೆಗಳು ಸೀಲಿಂಗ್ ಮೇಲೆ ಅಂಟಿಕೊಂಡಿರುವ ಧೂಳನ್ನು ತೆಗೆಯಬೇಕು. ಬಳಿಕ ಟಿಪಾಯ್, ಟೇಬಲ್, ಫ್ಲೋರ್ ಸೇರಿದಂತೆ ಮನೆಯ ಪ್ರತಿ ಮೂಲೆ ಮೂಲೆಯನ್ನು ಕ್ಲೀನ್ ಮಾಡಬೇಕು. ಸ್ವಚ್ಚಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆ ಬಳಸಿದರೆ ಉತ್ತಮ. ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿ ಒರೆದರೆ ಶುಚಿಯಾಗಲಿದೆ.

ಮನೆಯಲ್ಲಿ ಅನಗತ್ಯ ವಸ್ತುಗಳ ತುಂಬಬೇಡಿ

ಕೀಟಗಳನ್ನು ಹುಡುಕಿಕೊಂಡು ಅಥವಾ ಮನೆಯೊಳಗೆ ಸೇರಿರುವ ಕೀಟಗಳಿಗಾಗಿ ಜೇಡ ಹಾಗೂ ಜೇಡರ ದಾತಿಗೆ ಸೇರಿದಂತ ಹಲವು ಕೀಟಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಇವು ಪ್ರತಿ ದಿನ ಬಲೆ ಕಟ್ಟಿ ಆಹಾರ ಬೇಟೆಯಾಡುತ್ತದೆ. ಹೀಗಾಗಿ ಕೀಟಗಳು ಒಳಗೆ ಬರದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಸಂಗ್ರಹಿಸುವುದು ತಪ್ಪಿಸಿ. ಮನೆ ಪ್ರತಿ ಕೋಣೆಯಲ್ಲಿ ವಸ್ತುಗಳನ್ನು ತುಂಬಬೇಡಿ. ಗಾಳಿ, ಬೆಳಕು ಬೀಳುವಂತೆ, ಹೆಚ್ಚಿನ ಸ್ಥಳವಕಾಶ ಇರುವಂತೆ ನೋಡಿಕೊಳ್ಳಿ.

ವಿನಿಗರ್ ಸೇರಿದಂತೆ ಇತರ ನೈಸರ್ಗಿಕ ವಸ್ತು ಬಳಸಿ

ಅರ್ಧ ಭಾಗ ವಿನಿಗರ್ ಹಾಗೂ ಅರ್ಧ ನೀರು ಮಿಶ್ರಣ ಮಾಡಿ ಸ್ಪ್ರೇ ಬಾಟಲಿ ಮೂಲಕ ಮನೆಯ ಮೂಲೆ ಮೂಲೆಯಲ್ಲಿ ಸ್ಪ್ರೇ ಮಾಡಿ. ವಿನಿಗರ್ ಮಿಶ್ರಣದ ಸ್ಪ್ರೇಗೆ ಜೇಡರ ಬಲೆಗಳು ದೂರವಾಗುತ್ತದೆ. ಪೆಪ್ಪರ್‌ಮಿಂಟ್ ಎಸೆನ್ಶಿಯಲ್ ಆಯಿಲ್ ನೀರಿಗೆ ಬೆರೆಸಿ ಸ್ಪ್ರೇ ಮಾಡಿದರೂ ಬಲೆ ಕಟ್ಟುುವುದು ಕಡಿಮೆಯಾಗುತ್ತದೆ. ಲವಂಗದ ಎಣ್ಣೆ, ಸಿಟ್ರಸ್ ತುಂಬಿರುವ ಹಣ್ಣಿನ ಸಿಪ್ಪೆ ವಾಸನೆಗೆ ಜೇಡಗಳು ದೂರವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Neem Karoli Baba: ನೀರಿನಿಂದ ತುಪ್ಪ-ಪೆಟ್ರೋಲ್; ಇದು ಹನುಮನ ಅವತಾರ ಪುರುಷ ನೀಮ್ ಕರೋಲಿ ಬಾಬಾ ಪವಾಡ!
ಒಂದೇ ವಾರದಲ್ಲಿ ₹4.5 ಲಕ್ಷ ಗಳಿಸಿದ ಮೇಕಪ್ ಆರ್ಟಿಸ್ಟ್! ಈ ಮಹಿಳೆಯ ಯಶೋಗಾಥೆ ತಿಳಿದರೆ ನಿಮಗೂ ಸ್ಫೂರ್ತಿ