ಈಗೀಗ ಜನರಲ್ಲಿ ಮಂಡಿನೋವು ಹೆಚ್ಚಲು ಕಾರಣವೇನು ಗೊತ್ತಾ?

By Suvarna Web DeskFirst Published Mar 20, 2018, 7:12 PM IST
Highlights

ನಮ್ಮ ಮಂಡಿ ಜಾಯಿಂಟ್‌ಗಳಲ್ಲಿ ಕುಶನ್ ಥರದ ಭಾಗ ಇರುತ್ತೆ. ಇದರಲ್ಲಿ ಒಂದು ಫ್ಲೂಯಿಡ್ ಇರುತ್ತೆ. ಈ ಭಾಗ ದೇಹದ ಶಾಕ್ ಅಬ್ಸರ್ವರ್ ಥರ ಕೆಲಸ ಮಾಡುತ್ತೆ. ವೈರಲ್ ಫೀವರ್ ಆದಾಗ ಇದರಲ್ಲಿ ಇನ್‌ಫೆಕ್ಷನ್ ಆಗುತ್ತೆ. ಆಗ ಊತ ಕಾಣಿಸಿಕೊಂಡು ನೋವು ಹೆಚ್ಚಾಗುವುದು ಸಾಮಾನ್ಯ.

- ಡಾ. ಗೌತಮ್ ಜಿ. ಶಾನುಭೋಗ್

ಇತ್ತೀಚೆಗೆ ಬರುವ ವೈರಲ್ ಫೀವರ್‌ಗಳಲ್ಲಿ ಮಂಡಿನೋವು ಜಾಸ್ತಿ ಯಾಕೆ?
ನಮ್ಮ ಮಂಡಿ ಜಾಯಿಂಟ್‌ಗಳಲ್ಲಿ ಕುಶನ್ ಥರದ ಭಾಗ ಇರುತ್ತೆ. ಇದರಲ್ಲಿ ಒಂದು ಫ್ಲೂಯಿಡ್ ಇರುತ್ತೆ. ಈ ಭಾಗ ದೇಹದ ಶಾಕ್ ಅಬ್ಸರ್ವರ್ ಥರ ಕೆಲಸ ಮಾಡುತ್ತೆ. ವೈರಲ್ ಫೀವರ್ ಆದಾಗ ಇದರಲ್ಲಿ ಇನ್‌ಫೆಕ್ಷನ್ ಆಗುತ್ತೆ. ಆಗ ಊತ ಕಾಣಿಸಿಕೊಂಡು ನೋವು ಹೆಚ್ಚಾಗುವುದು ಸಾಮಾನ್ಯ. ಇದಕ್ಕೆ ಪ್ರತ್ಯೇಕವಾದ ಚಿಕಿತ್ಸೆ ಇಲ್ಲ. ಜ್ವರ  ಕಡಿಮೆಯಾಗಿ ದೇಹದ ಇನ್‌ಫೆಕ್ಷನ್ ಕಡಿಮೆಯಾದಾಗ ಈ ನೋವೂ ಕಡಿಮೆಯಾಗುತ್ತೆ. ಸಾಧ್ಯವಾದಷ್ಟೂ ಈ ಭಾಗಗಳನ್ನು ಬೆಚ್ಚಗಿಟ್ಟುಕೊಂಡರೆ ನೋವು ಬೇಗ ವಾಸಿಯಾಗುತ್ತೆ.

-  ಮೊದಲೆಲ್ಲ ಮಂಡಿನೋವು ವಯಸ್ಸಾದವರಲ್ಲಿ ಮಾತ್ರ ಇತ್ತು. ಈಗ ಚಿಕ್ಕ ವಯಸ್ಸಿನವರಲ್ಲೂ ಹೆಚ್ಚಾಗುತ್ತಿದೆಯಲ್ಲಾ?
ಇದಕ್ಕೆ ಮೂಳೆ ಸವೆತ ಕಾರಣ. ವಯಸ್ಸು 40-45 ಆಗುತ್ತಿರುವಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳ ಸಾಮರ್ಥ್ಯವೂ ಕ್ಷೀಣಿಸಿ ಕೆಲವಾರು ಸಮಸ್ಯೆಗಳು ಶುರವಾಗುತ್ತವೆ. ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಈ ಸಮಸ್ಯೆ ಹೆಚ್ಚೋದಕ್ಕೆ ಹಲವಾರು ಕಾರಣಗಳಿವೆ. ಮಂಡಿಮೇಲೆ ಅತಿಯಾದ ಒತ್ತಡ ಬೀಳೋದು, ವ್ಯಾಯಾಮ ಇಲ್ಲದೇ ಇರುವುದು, ಆಹಾರದಲ್ಲಿ ಕ್ಯಾಲ್ಶಿಯಂ, ಪೌಷ್ಠಿಕಾಂಶದ ಕೊರತೆ ಇತ್ಯಾದಿ. 

- ಗ್ಯಾಸ್ಟ್ರಿಕ್‌ನಂಥ ಸಮಸ್ಯೆ ಇತ್ತೀಚೆಗೆ ಬಹಳ ಹೆಚ್ಚು. ಇದರಿಂದಲೂ ಮಂಡಿನೋವು ಕಾಣಿಸಿಕೊಳ್ಳುತ್ತಲ್ಲಾ?
ಹೌದು, ಮಂಡಿ ಮಾತ್ರವಲ್ಲ, ಎದೆಯ ಭಾಗದಲ್ಲೂ ನೋವು, ಉರಿ ಕಾಣಿಸಿಕೊಳ್ಳಬಹುದು. ಇದು ಆಹಾರದಿಂದ ಬರುವ ಸಮಸ್ಯೆ. ಆಹಾರದಲ್ಲಿ ಸಮತೋಲನವಿದ್ದರೆ, ಪೌಷ್ಟಿಕಾಂಶವಿರುವ ಆಹಾರ ಸೇವನೆಯಿಂದ ಈ ಸಮಸ್ಯೆ ತಡೆಯಬಹುದು.

-  ಹೀಗೆ ನೋವು ಕಾಣಿಸಿಕೊಂಡಾಗ ನೋವು ನಿವಾರಕ ತಿಂದು ಸುಮ್ಮನಾಗೋದು ಎಷ್ಟು ಸರಿ?
ಇದರಿಂದ ತಾತ್ಕಾಲಿಕವಾಗಿ ನೋವು ಕಡಿಮೆಯಾಗುತ್ತದೆ ಅಷ್ಟೇ. ಆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅತಿಯಾದ ನೋವು ನಿವಾರಕ ಸೇವನೆ ದೇಹಕ್ಕೆ ಒಳ್ಳೆಯದಲ್ಲ.

-  ಗಂಟುಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗೋದೂ ಈಗ ಸಮಸ್ಯೆಯಾಗ್ತಿದೆಯಲ್ಲಾ?
ಹೌದು. ಕೆಲವರು ವೈದ್ಯರ ಸಲಹೆ ಪಡೆಯದೇ ಅತಿಯಾಗಿ ಕ್ಯಾಲ್ಶಿಯಂ ಮಾತ್ರೆ ಸೇವಿಸುತ್ತಾರೆ. ಇದರಿಂದ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗಿ ಹರಳುಗಟ್ಟುವ ಸಮಸ್ಯೆಯಾಗುತ್ತದೆ. ಯಾವತ್ತೂ ಕ್ಯಾಲ್ಶಿಯಂ ಪ್ರಮಾಣ ಎಷ್ಟಿದೆ ಎಂದು ಟೆಸ್ಟ್ ಮಾಡಿಯೇ ಟ್ಯಾಬ್ಲೆಟ್ಸ್ ಸೇವಿಸಬೇಕು. ಸ್ವಯಂ ಆಗಿ ಸೇವಿಸೋದ್ರಿಂದ ಕಿಡ್ನಿಗೂ ಸಮಸ್ಯೆಯಾಗುತ್ತದೆ.

- ಮಂಡಿನೋವು ಬರದ ಹಾಗೆ ಡಯೆಟ್ ಯಾವ ತರ ಮಾಡಬಹುದು?
ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿರುವ ಹಾಲಿನ ಉತ್ಪನ್ನಗಳನ್ನು ಹೆಚ್ಚೆಚ್ಚು ಸೇವಿಸಿ. ಮೊಟ್ಟೆ, ಮೀನಿನ ಸೇವನೆಯೂ ಒಳ್ಳೆಯದು. ಆರ್ಥೈಟಿಸ್‌ನಂಥ ಸಮಸ್ಯೆ ಶುರುವಾಗುವ ಮೊದಲೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ನೋವು, ಊತ ಇರುವ ಗಂಟುಗಳಿಗೆ ರೆಸ್ಟ್ ಕೊಡಬೇಕು. ಕೆಲವು ವ್ಯಾಯಾಮ ಮಾಡಬೇಕು. ಒಮ್ಮೆ ಈ ಮೂಳೆ  ಸವೆತ, ಆರ್ಥೈಟಿಸ್‌ನಂಥ ಸಮಸ್ಯೆ ಬಂದರೆ ತಡೆಯೋದು ಕಷ್ಟ. 
 

click me!