ಚರ್ಮಕ್ಕೇಕೆ ಕಂದು ಕಲೆಯ ಕಾಟ?

By Web DeskFirst Published Dec 6, 2018, 3:21 PM IST
Highlights

ಎಲ್ಲವೂ ಸಹಜವಾಗಿಯೇ ಇರುತ್ತೆ. ಆದರೆ, ಚರ್ಮದ ಮೇಲೊಂದು ದಿಢೀರ್ ಕಂದು ಕಲೆ ಕಾಣಿಸುತ್ತೆ. ಇದಕ್ಕೆ ತಿಂದ ಆಹಾರವೋ, ಅಲರ್ಜಿಯೋ ಗೊತ್ತಾಗೋಲ್ಲ. ಒಟ್ಟಿನಲ್ಲಿ ಸೌಂದರ್ಯಕ್ಕೆ ಕುಂದು ತರುತ್ತದೆ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವೇನು?

ಮಚ್ಚೆ ಎಂದು ತಿಳಿದು ಕೆಲವು ಕಲೆಗಳನ್ನು ಇಗ್ನೋರ್ ಮಾಡುವುದಿದೆ. ಈ ಬಗ್ಗೆ ಕಾರಣ ತಿಳಿಯದೆ, ಹಾಗೇ ಬಿಟ್ಟು ಬಿಡುತ್ತೇವೆ. ಆದರೆ ಇಂಥ ಸಣ್ಣಪುಟ್ಟ ಸಮಸ್ಯೆಗಳೇ ತ್ವಚಾ ಸೌಂದರ್ಯವನ್ನು ಹಾಳು ಮಾಡುವ ಜತೆಗೆ, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಂದು ಅಥವಾ ಕಪ್ಪು ಬಣ್ಣಗಳಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಕಲೆಯನ್ನು ವೈದ್ಯ ಭಾಷೆಯಲ್ಲಿ ಮೆಲಾಸ್ಮಾ ಎನ್ನುತ್ತಾರೆ. 

ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತದೆ?

* ಮೂಗು

* ಹಣೆ

* ಕೆನ್ನೆ

* ತುಟಿಯ ಮೇಲ್ಭಾಗ 

* ಕುತ್ತಿಗೆ

* ಬೆನ್ನು

* ಸೊಂಟ

ಈ ಸಮಸ್ಯೆ ಶೇ.10ರಷ್ಟು ಪುರುಷರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ, ಎನ್ನುತ್ತಾರೆ ಅಮೆರಿಕ ವೈದ್ಯರು. ಗರ್ಭಿಣಿಯಾದಾಗ ಹಾಗೂ ಹಾರ್ಮೋನ್ ವ್ಯತ್ಯಾಸವಾದಾಗಲೂ ಮಹಿಳೆಯರನ್ನು ಈ ಸಮಸ್ಯೆ ಕಾಡುತ್ತದೆ. 

ಕಾರಣವೇನು?

  • ವೈದ್ಯರು ಹೇಳುವಂತೆ ಪ್ರಕಾರ ಸರಿಯಾದ ಕಾರಣ ತಿಳಿದಿಲ್ಲವಾದರೂ, ಮೈ ಬಣ್ಣ ನಿಯಂತ್ರಿಸುವ ಮೆಲಾನಿನ್ ಇದಕ್ಕೆ ಮೂಲ ಕಾರಣ. ಕಪ್ಪು ಬಣ್ಣ ಇರುವವರಿಗೆ ಇದು ಕಾಡುವುದು ಹೆಚ್ಚು. 
  • ಗರ್ಭಿಣಿಯರಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದಲೂ ಇದು ಕಾಡುತ್ತೆ. 
  • ಹಾರ್ಮೋನ್ ಮಾತ್ರೆ ಸೇವಿಸುವವರನ್ನೂ ಇದು ಕಾಡುತ್ತದೆ. 
  • ಬರ್ತ್ ಕಂಟ್ರೋಲ್ ಮಾತ್ರೆ ಸೇವಿಸುವವರನ್ನೂ ಕಾಡುವ ಸಾಧ್ಯತೆ ಇರುತ್ತದೆ. 
  • ಬಿಸಿಲಿನಲ್ಲಿ ಹೆಚ್ಚು ಓಡಾಡುವವರು ಹುಷಾರಾಗಿರಬೇಕು.
  • ವಿಪರೀತ ಅಥವಾ ದೇಹಕ್ಕೆ ಹೊಂದದಂಥ ಸೌಂದರ್ಯ ವರ್ಧಕ ಬಳಸುವವರಿಗೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. 
  • ವಂಶಪಾರಂಪರ್ಯವಾಗಿಯೂ ಹರಡಬಹುದು. 

ಚಿಕಿತ್ಸೆ ಏನು?

ಇದಕ್ಕೆ ಚಿಕಿತ್ಸೆ ಅಗತ್ಯವಲ್ಲದೇ ಹೋದರೂ, ತುರಿಕೆ, ಉರಿತ ಹೆಚ್ಚಾದರೆ ಮಾತ್ರ ವೈದ್ಯರ ಸಲಹೆ ಸೂಕ್ತ. ಗರ್ಭಿಣಿಯರಾದರೆ, ಪ್ರಸವದ ನಂತರ ಸರಿ ಹೋಗುತ್ತದೆ. ಒಮ್ಮೆ ವಾಸಿಯಾದಂತೆ ಕಂಡರೂ, ಮತ್ತೊಮ್ಮೆ ಕಾಣಿಸಿಕೊಳ್ಳಬಹುದು.

click me!