ಸಂಧಿವಾತಕ್ಕೆ ಸುಲಭ ಮನೆ ಮದ್ದು

Published : Dec 04, 2018, 03:41 PM IST
ಸಂಧಿವಾತಕ್ಕೆ ಸುಲಭ ಮನೆ ಮದ್ದು

ಸಾರಾಂಶ

ವಯಸ್ಸಿನ ಹಂಗಿಲ್ಲದೇ ಈಗೀಗ ಎಲ್ಲರಿಗೂ ಸಂಧಿವಾತ ಕಾಡುತ್ತಿದೆ. ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದ ಮನುಷ್ಯ ನೋವು ತಿನ್ನುವುದೂ ಹೆಚ್ಚಾಗಿದೆ. ಈ ನೋವಿಗೆ ಮನೆ ಮದ್ದೇನು?

ಒಂದಕ್ಕಿಂತ ಹೆಚ್ಚು ಕೀಲುಗಳು ಊದಿಕೊಂಡಾಗ ಸಂಧಿವಾತ ಕಾಡುತ್ತದೆ. ಇದರಿಂದ ನೋವು, ಉರಿ, ಮರಗಟ್ಟುವುದು, ಊತ ಹಾಗೂ ಕೆಂಪಾಗುವಂಥ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಂಧಿವಾತವನ್ನು ತಡೆಯಲು ಇಲ್ಲಿವೆ ಸಿಂಪಲ್ ಮನೆ ಮದ್ದು... 

ಅರಿಷಿಣ

ಅರಿಷಿಣದಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಆ್ಯಂಟಿ ಇನ್ಫ್ಲೇಷನ್ ಗುಣಗಳಿದ್ದು, ದಿನಕ್ಕೊಂದು ಸಲ ಬಿಸಿ ಹಾಲಿನೊಂದಿಗೆ ಕುಡಿಯಬೇಕು.

ಗ್ರೀನ್ ಟೀ

ಇದು ಪರಿಣಾಮಕಾರಿ ಮನೆ ಔಷಧಿಯಾಗಿದ್ದು, ದಿನಕ್ಕೆ ಒಂದೆರಡು ಸಲ ಕುಡಿದರೆ ಒಳಿತು. ಟೀ ಬ್ಯಾಗ್ ಬಳಸದಿದ್ದರೆ ಒಳ್ಳೆಯದು. 

ಶುಂಠಿ

ಅಡುಗೆ ಪದಾರ್ಥಗಳಲ್ಲಿ ಬಳಸಿ ಸೇವಿಸಬಹುದು. ಇದು ವಾಯುವಿಗೆ ಉತ್ತಮ ಮದ್ದು. ಸಾಮಾನ್ಯವಾಗಿ ಸಂಧಿವಾತ ಕಾಡುವುದು ವಾಯುವಿನಿಂದ.

ಬೆಳ್ಳುಳ್ಳಿ

ಊತವಾದ ಜಾಗದಲ್ಲಿ ಬೆಳ್ಳುಳ್ಳಿಯಿಂದ  ಮಸಾಜ್ ಮಾಡಬೇಕು. ಇಲ್ಲವಾದರೆ 2-3 ಬೆಳ್ಳುಳ್ಳಿ ಜಗಿದು ತಿಂದರೂ, ಪರಿಣಾಮಕಾರಿ.

ದಾಲ್ಚಿನ್ನಿ

ಇದನ್ನು ಪುಡಿ ಮಾಡಿಕೊಂಡು ಕಾಫಿ, ಟೀ ಅಥವಾ ಅಡುಗೆಗೆ ಬಳಸಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kidney Disease: ಕಿಡ್ನಿ ಕಾಯಿಲೆ ತಡೆಯಲು ಈ 6 ಅಭ್ಯಾಸ ರೂಢಿಸಿಕೊಳ್ಳಿ
ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲಿನ ಮೂಳೆಯನ್ನೇ ಮುರಿದ ವೈದ್ಯರು?