
ಡಯಟ್ ಬಗ್ಗೆ ಕೇಳೋಕೆ ವೈದ್ಯರ ಬಳಿ ಓಡ್ತೀರಿ. ಆದರೆ, ಹುಟ್ಟಿದಾಗಿನಿಂದ ಮನೆಯಲ್ಲಿ ಅಮ್ಮ ಹೇಳುವ ಉತ್ತಮ ಆಹಾರಗಳ ಬಗ್ಗೆ ಮಾತ್ರ ಕಿವಿಗೊಟ್ಟಿರುವುದಿಲ್ಲ. ಈ ಅಮ್ಮನ ಅನುಭವದ ಮಾತುಗಳು ಆಯುರ್ವೇದ ಡಯಟ್‌ನ ಝಲಕ್ಕೇ.
ಏಕೆಂದರೆ, ನಾವು ಭಾರತೀಯರ ಮನೆಮನೆಯಲ್ಲಿಯೂ ತಿಳಿದೋ ತಿಳಿಯದೆಯೋ ಆಯುರ್ವೇದವನ್ನು ಫಾಲೋ ಮಾಡುತ್ತಲೇ ಇರುತ್ತೇವೆ. ಕಷಾಯದಿಂದ ಎಣ್ಣೆ ಸ್ನಾನದವರೆಗೂ, ರಾಗಿಗಂಜಿಯಂಥ ಮಿತಾಹಾರದಿಂದ ಉಪವಾಸದವರೆಗೂ, ಮನೆಮದ್ದುಗಳಿಂದ ಮಾತಿನವರೆಗೂ ಆಯುರ್ವೇದ ಉಪಾಸನೆ ನಮ್ಮ ಮನೆಗಳಲ್ಲಿ ನಡೆಯುತ್ತದೆ. ಇದು ಪಾರಂಪರಿಕವಾಗಿ, ನಮ್ಮ ತಿಳಿವಳಿಕೆಯಾಗಿ, ಸಂಪ್ರದಾಯವಾಗಿ ಸಾವಿರಾರು ವರ್ಷಗಳಿಂದ ಹರಿದುಬಂದಿದೆ.
4 ತಿಂಗಳಲ್ಲಿ 26 ಕೆ.ಜಿ ತೂಕ ಇಳಿಸಿದ ಸಾನಿಯಾ!
ಇದೀಗ ಈ ಆಯುರ್ವೇದಿಕ್ ಡಯಟ್ ಬಗ್ಗೆ ಜಾಗತಿಕ ಆರೋಗ್ಯಪ್ರಿಯರ ಗಮನ ಹರಿದಿದೆ. ದೇಹದೊಳಗಿನ ವಿವಿಧ ಶಕ್ತಿಗಳನ್ನು ಸಮತೂಗಿಸಿ ಉತ್ತಮ ದೇಹ ಹಾಗೂ ಮನಸ್ಸನ್ನು ಕಾಪಾಡಿಕೊಳ್ಳುವತ್ತ ಫೋಕಸ್ ಮಾಡುತ್ತದೆ ಆಯುರ್ವೇದಿಕ್ ಡಯಟ್.
ಬಾಡಿ ಟೈಪ್
ನಿಮ್ಮ ದೇಹ ಯಾವ ವಿಧದ್ದು ಎಂಬುದನ್ನು ಗಮನಿಸಿ ಆಹಾರ ಪದ್ಧತಿ ಬೋಧಿಸುತ್ತದೆ ಆಯುರ್ವೇದ. ಅದರ ಪ್ರಕಾರ, ವಾಯು, ಜಲ, ಅಗ್ನಿ, ಆಕಾಶ, ಪೃಥ್ವಿ ಸೇರಿ ಈ ಬ್ರಹ್ಮಾಂಡ ಸೃಷ್ಟಿಯಾಗಿದೆ. ಈ ಸಂಗತಿಗಳು ದೇಹದೊಳಗೆ ಹರಿದಾಡುವ ಶಕ್ತಿ ಸಂಚಯ ಸಬಂಧಿ ಮೂರು ರೀತಿಯ ದೋಷಕ್ಕೆ(ಬಾಡಿ ಟೈಪ್) ಕಾರಣವಾಗಬಹುದು. ಎಲ್ಲರಲ್ಲೂ ಈ ಮೂರು ದೋಷಗಳಿದ್ದರೂ ಯಾವುದಾದರೂ ಒಂದು ಮೇಲುಗೈ ಸಾಧಿಸಿರುತ್ತದೆ.
ತೂಕ ಇಳಿಸಲು ಕ್ಲೋರೋಫಿಲ್ ವಾಟರ್ ಎಂಬ ಹೊಸ ಟ್ರೆಂಡ್!
ವಾತಾ(ಆಕಾಶ ಹಾಗೂ ವಾಯು): ವಾತಾ ದೇಹದ ಮೂಲ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಅಂದರೆ ಮನಸ್ಸು, ಉಸಿರಾಟ, ರಕ್ತ ಸಂಚಯ ಹಾಗೂ ಜೀರ್ಣಕ್ರಿಯೆ. ಈ ದೋಷ ಹೊಂದಿರುವ ಜನರು ತೆಳ್ಳಗಿದ್ದು ಎನರ್ಜೆಟಿಕ್ ಆಗಿರುತ್ತಾರೆ. ಅವರಲ್ಲಿ ಸಮತೋಲನ ತಪ್ಪಿದಾಗ ಸುಸ್ತು, ತೂಕ ಇಳಿಕೆ, ನಿದ್ರಾಹೀನತೆ, ಆತಂಕ ಹಾಗೂ ಜೀರ್ಣಸಂಬಂಧಿ ಸಮಸ್ಯೆಗಳು ಕಾಣಿಸುತ್ತವೆ.
ಪಿತ್ತ(ಅಗ್ನಿ ಹಾಗೂ ನೀರು): ಈ ದೋಷವು ಮೆಟಬಾಲಿಸಂ, ಹಾರ್ಮೋನ್ಸ್ ಹಾಗೂ ಜೀರ್ಣಕ್ರಿಯೆ ನಿಯಂತ್ರಿಸುತ್ತದೆ. ಪಿತ್ತ ದೋಷ ಹೊಂದಿರುವ ಜನರು ಮಧ್ಯಮ ಗಾತ್ರ ಹೊಂದಿರುತ್ತಾರೆ. ಬ್ಯಾಲೆನ್ಸ್ ತಪ್ಪಿದರೆ ಅವರಲ್ಲಿ ಹೈ ಬಿಪಿ, ಹೃದಯ ಸಮಸ್ಯೆಗಳು, ಉರಿಯೂತ ಅಥವಾ ಜೀರ್ಣಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ.
ಕಫ(ಜಲ ಹಾಗೂ ಪೃಥ್ವಿ): ಈ ದೋಷವು ನಮ್ಮ ರೋಗ ನಿರೋಧಕ ವ್ಯವಸ್ಥೆ, ಸ್ನಾಯುಗಳ ಬೆಳವಣಿಗೆ ಹಾಗೂ ಶಕ್ತಿಯನ್ನು ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ಈ ದೋಷ ಇರುವವರು ಬಲವಾಗಿ ದಪ್ಪಗೆ ಇರುತ್ತಾರೆ. ಅವರು ಬ್ಯಾಲೆನ್ಸ್ ತಪ್ಪಿದಾಗ ತೂಕ ಹೆಚ್ಚಳ, ನೀರು ತುಂಬಿ ಬಾತುಕೊಳ್ಳುವುದು, ಡಯಾಬಿಟೀಸ್, ಖಿನ್ನತೆ, ಅಲರ್ಜಿ ಹಾಗೂ ಶ್ವಾಸಕೋಶದ ಸಮಸ್ಯೆಗಳು ಕಾಣಿಸುತ್ತವೆ.
ತೂಕ ಇಳಿಸಲು ಕೊತ್ತಂಬರಿಯಂಥ ಸೊಪ್ಪಿದು...!
ನಿಮ್ಮ ದೋಷ ಯಾವುದು ಎಂಬುದನ್ನು ನೋಡಿ ನೀವು ಯಾವ ಆಹಾರ ತೆಗೆದುಕೊಳ್ಳಬೇಕು, ಯಾವುದನ್ನು ತೆಗೆದುಕೊಳ್ಳಬಾರದು ಎಂದು ನಿರ್ಧರಿಸಬೇಕು. ಆಯುರ್ವೇದದಂತೆ, ಒಮ್ಮೆ ನೀವು ಸಮತೋಲಿತವಾಗಿದ್ದರೆ, ಸಹಜವಾಗಿಯೇ ಆರೋಗ್ಯ ಕಾಪಾಡಿಕೊಳ್ಳುವಂಥ ಆಹಾರವನ್ನು ಬಯಸಲಾರಂಭಿಸುತ್ತೀರಿ.
ನಿಮ್ಮ ಬಾಡಿ ಟೈಪ್‌ಗೆ ಯಾವ ಆಹಾರ ಸೇವಿಸಬೇಕು?
ಆಯುರ್ವೇದಿಕ್ ಡಯಟ್ ಆರೋಗ್ಯ ಲಾಭಗಳಿಗಾಗಿ 6 ರೀತಿಯ ಪ್ರಮುಖ ರುಚಿಗಳನ್ನು ಗುರುತಿಸಿದೆ; ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು. ಪ್ರತಿದಿನದ ಆಹಾರ ಸೇವನೆಯಲ್ಲಿ ಈ ಎಲ್ಲ ರುಚಿಗಳೂ ಹದವಾಗಿ ದೇಹಕ್ಕೆ ಸೇರಬೇಕು ಎನ್ನುವುದನ್ನು ಈ ಪದ್ಧತಿ ಹೇಳುವುದು. ಈ ಆಹಾರ ರುಚಿಗಳಲ್ಲಿ ಕೆಲವನ್ನು ಮಾತ್ರ ದಿನದಲ್ಲಿ ಸೇವಿಸುವುದರಿಂದ ದೇಹ ಸಮತೋಲನ ಕಳೆದುಕೊಂಡು ಆನಾರೋಗ್ಯಕಾರಿ ಆಹಾರವನ್ನು ಕೇಳಲಾರಂಭಿಸುತ್ತದೆ.
ವಾತಾ ದೇಹದವರು ತಣ್ಣನೆಯ ಹಾಗೂ ಹಸಿಯ ಆಹಾರಗಳನ್ನು ಜೊತೆಗೆ ಹೆಚ್ಚಾಗಿ ಕೆಫಿನ್ ಸೇವನೆಯನ್ನು ಬಿಡಬೇಕು. ಬದಲಿಗೆ ಅವರು ಬೆಸಿಯಾದ ಸಿಹಿ, ಉಪ್ಪು ಹಾಗೂ ಹುಳಿ ಹೆಚ್ಚಿರುವ ಆಹಾರ ಸೇವಿಸಬೇಕು. ಸಿಹಿಯಾದ ಆಹಾರ ಎಂದರೆ ದ್ವಿದಳ ಧಾನ್ಯಗಳು, ಗೆಣಸು, ಆಲೂಗಡ್ಡೆಯಂಥ ಸ್ಟಾರ್ಚಿ ತರಕಾರಿಗಳು, ಜೇನುತುಪ್ಪು ಮುಂತಾದವು ದೇಹದ ಮೇಲೆ ಶಾಂತ ಪಾರಿಣಾಮ ಬೀರುತ್ತವೆ. ಉಪ್ಪು ಎಂದರೆ ಟೇಬಲ್ ಸಾಲ್ಟ್ ಜೊತಗೆ ಸಾಲ್ಟೆಡ್ ಫಿಶ್ ಹಸಿವು ಹೆಚ್ಚಿಸುತ್ತವೆ.
ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ.
ಹುಳಿಗಾಗಿ ಸಿಟ್ರಸ್ ಹಣ್ಣುಗಳು, ಉಪ್ಪಿನಕಾಯಿ ಸೇವಿಸಿದರೆ ಜೀರ್ಣಕ್ರಿಯೆ ಸರಾಗಗೊಳಿಸುತ್ತವೆ. ಪಿತ್ತ ದೋಷ ಇರುವವರು ಹಾಟ್ ಆ್ಯಂಡ್ ಸ್ಪೈಸಿ ಆಹಾರಗಳನ್ನು, ಆಲ್ಕೋಹಾಲ್ ಹಾಗೂ ಹುಳಿ ಬರಿಸಿದ ಆಹಾರಗಳ ಸೇವನೆ ಕಡಿಮೆ ಮಾಡಬೇಕು. ಬದಲಿಗೆ ಸಿಹಿ, ಕಹಿ ಹಾಗೂ ಒಗರಿನ ಆಹಾರ ಸೇವಿಸಬೇಕು. ಕಹಿ ಆಹಾರವೆಂದರೆ ಹಸಿರು ತರಕಾರಿಗಳು, ಬ್ರೊಕೋಲಿ- ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ. ಒಗರಿನ ಆಹಾರಗಳಾದ ದಾಳಿಂಬೆ, ಹಸಿರು ಸೇಬು, ಬೀನ್ಸ್ ಮುಂತಾದವು ಪಿತ್ತ ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತವೆ.
ಕಫ ದೇಹದವರು ಉಪ್ಪು, ಡೈರಿ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಬದಲಿಗೆ ಖಾರ, ಕಹಿ ಹಾಗೂ ಒಗರಿನ ಆಹಾರಗಳನ್ನು ಹೆಚ್ಚಾಗಿ ಅವರು ಸೇವಿಸಬೇಕು. ಖಾರ ಎಂದರೆ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಸಾಸಿವೆ, ಶುಂಠಿ ಮುಂತಾದವು ಸೈನಸ್ ಕ್ಲಿಯರ್ ಮಾಡಿ ಬೆವರು ಬರಿಸುತ್ತವೆ.
ಆಯುರ್ವೇದಿಕ್ ಡಯಟ್‌ನಿಂದ ತೂಕ ಇಳಿಸಬಹುದೇ?
ಆಯುರ್ವೇದ ಸಲಹೆ ಮಾಡುವ ಯಾವ ಆಹಾರಗಳೂ ಬೊಜ್ಜು ಬರಿಸುವಂಥವಲ್ಲ. ಒಂದು ವೇಳೆ ಮೊದಲೇ ಬೊಜ್ಜಿದ್ದರೂ ಆಯುರ್ವೇದ ಡಯಟ್ ಜೊತೆಗೆ ಆಯುರ್ವೇದ ಮೂಲ ಹೊಂದಿರುವ ಜೀವನಶೈಲಿ ಅಭ್ಯಾಸಗಳಾದ ಯೋಗ, ಧ್ಯಾನ, ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯುವುದು, ಉತ್ತಮ ನಿದ್ರೆ, ನಗು, ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಖಂಡಿತಾ ತೂಕ ಕಡಿಮೆಯಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಕನಿಷ್ಠ ಪ್ರೊಸೆಸ್ಡ್ ಆಹಾರವನ್ನು ಹೊಂದಿದ ವಿಟಮಿನ್, ಮಿನರಲ್‌ಗಳು, ಫೈಬರ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಗರಿ,್ಠವಾಗಿ ಹೊಂದಿದೆ ಈ ಡಯಟ್ ಪದ್ಧತಿ ಶೇ.50ರಷ್ಟು ಹೆಚ್ಚು ಕ್ಯಾಲೋರಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ಈ ಪದ್ಧತಿಯಲ್ಲಿ ಹಲವಾರು ಔಷಧೀಯ ಆಹಾರಗಳು ದೇಹ ಸೇರುತ್ತವೆ. ಇದು ಕೂಡಾ ಆರೋಗ್ಯವನ್ನು ಕಾಪಾಡುವ ಜೊತೆಗೆ ಪಾಸಿಟಿವ್ ಮೂಡ್ ತರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.