11 ವರ್ಷದ ಬಾಲಕ ತಂದೆ ಆಗಬಹುದೇ? ಯಾವ ವಯಸ್ಸಿನಲ್ಲಿ ವೀರ್ಯ ಉತ್ಪಾದನೆ ಆರಂಭ ಆಗುತ್ತೆ?

By Mahmad Rafik  |  First Published May 20, 2024, 3:40 PM IST

11 ವರ್ಷದ ಬಾಲಕ ತಂದೆ ಆಗಬಹುದೇ? ಪುರುಷರಲ್ಲಿ ಯಾವ ವಯಸ್ಸಿನಿಂದ ಎಷ್ಟನೇ  ವರ್ಷದವರೆಗೆ ದೇಹದಲ್ಲಿ ವೀರ್ಯ ಉತ್ಪಾದನೆ ಆಗುತ್ತೆ? ಎಷ್ಟನೇ ವಯಸ್ಸಿನಲ್ಲಿ ತಂದೆ ಆಗೋದು ಉತ್ತಮ?


ಪುರುಷ ಅಥವಾ ಯುವಕ ಅಥವಾ ಬಾಲಕ ಯಾವ ವಯಸ್ಸಿಗೆ ತಂದೆ ಆಗಬಹುದು ಎಂಬ ಪ್ರಶ್ನೆಗೆ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ದೇಹ ಯಾವಾಗ ವೀರ್ಯ ಉತ್ಪಾದಿಸಲು ಪ್ರಾರಂಭಿಸುತ್ತದೆಯೋ ಆಗಿನಿಂದಲೇ ಬಾಲಕ ಅಥವಾ ಯುವಕ ತಂದೆ ಆಗಬಹುದು ಎಂದು ವಿಜ್ಞಾನ ಹೇಳುತ್ತದೆ.

ವೀರ್ಯ ಉತ್ಪಾದನೆಯ ಪ್ರಾರಂಭವಾಗುವ ಸಮಯ ಎಲ್ಲರಲ್ಲಿಯೂ ಭಿನ್ನವಾಗಿರುತ್ತದೆ. ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಸೇರಿದಂತೆ ಹಲವು ಅಂಶಗಳು ವೀರ್ಯ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Tap to resize

Latest Videos

ಸಾಮಾನ್ಯವಾಗಿ 11 ರಿಂದ 14 ವರ್ಷದೊಳಗೆ ದೇಹದಲ್ಲಿ ವೀರ್ಯ ಉತ್ಪಾದನೆಯಾಗಲು ಶುರುವಾಗುತ್ತದೆ. 11 ವರ್ಷದಲ್ಲೇ ಬಾಲ ತಂದೆಯಾಗಬಹುದು ಎಂದು ವಿಜ್ಞಾನ ಹೇಳುತ್ತದೆ. ಕೇರಳದಲ್ಲಿ 12 ವರ್ಷದ ಬಾಲಕನೋರ್ವ ಮಗುವಿನ ತಂದೆಯಾಗಿದ್ದನು. ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸದ್ಯ ಈ  ಕೇಸ್ ನ್ಯಾಯಾಲಯದಲ್ಲಿದೆ.

ಹೆಚ್ಚುತ್ತಿದೆ ಸೆಕ್ಸ್‌ ಇಲ್ಲದ ಫ್ರೆಂಡ್‌ಶಿಪ್‌ ಮ್ಯಾರೀಜ್‌, ಅಮೃತಧಾರೆಯ ಗೌತಮ್-ಭೂಮಿಕಾ ಸಂಬಂಧದ ಹಾಗಾ?

25 ವಯಸ್ಸಗಿಂತ ಮೊದಲು ತಂದೆ ಆಗಬಾರದಾ?

25 ವರ್ಷಕ್ಕಿಂತ ಮೊದಲು ತಂದೆಯಾಗುವುದು ಭವಿಷ್ಯದಲ್ಲಿ ಗಂಭೀರ ಆರೋಗ್ಯ ಪರಿಣಾಮಗಳನ್ನು ಬೀರುತ್ತದೆ ಎಂದು ಜರ್ನಲ್ ಆಫ್ ಎಪಿಡೆಮಿಯಾಲಜಿ ಮತ್ತು ಕಮ್ಯುನಿಟಿ ಹೆಲ್ತ್‌ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಅಧ್ಯಯನದ ಕುರಿತು ಪ್ರಕಟವಾದ ಲೇಖನದಲ್ಲಿ 25 ವರ್ಷಕ್ಕಿಂತ ಮೊದಲು ತಂದೆಯಾಗುವ ವ್ಯಕ್ತಿ ಮಧ್ಯವಯಸ್ಸಿನಲ್ಲಿಯೇ ಅಕಾಲಿಕ ಮರಣಕ್ಕೆ ತುತ್ತಾಗಬಹುದು ಎಂದು ಪ್ರಕಟವಾಗಿದೆ. ಭಾರತದಲ್ಲಿ ತಂದೆಯಾಗಲು ಕಾನೂನುಬದ್ಧ ವಯಸ್ಸು ಇಲ್ಲವಾದರೂ, ಮದುವೆಯಾಗಲು ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದಲು ಕನಿಷ್ಠ ವಯಸ್ಸು ಮೀಸಲಿದೆ. ಮದುವೆಯಾಗಲು ಯುವಕನಿಗೆ 21 ಮತ್ತು ಯುವತಿಗೆ 18 ವರ್ಷ ವಯಸ್ಸು ಆಗಿರಬೇಕು.

ಯಾವ ವಯಸ್ಸಿನವರೆಗೆ ವೀರ್ಯ ಉತ್ಪಾದನೆ?

ಪುರುಷರಲ್ಲಿ ಹದಿಹರೆಯದ ವಯಸ್ಸಿನಿಂದ  ವೃದ್ಯಾಪ್ಯದವರೆಗೂ ವೀರ್ಯ ಉತ್ಪಾದನೆ ಆಗುತ್ತಿರುತ್ತದೆ. ಆದರೆ ವಯಸ್ಸು ಆದಂತೆ ವೀರ್ಯ ಉತ್ಪಾದನೆ ಪ್ರಮಾಣ ಕುಸಿಯುತ್ತದೆ ಅಥವಾ ನಾಶವಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ವೀರ್ಯ ನಾಶವು ಡಿಎನ್‌ಎ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹುಟ್ಟುವ  ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಕಾಮೋತ್ತೇಜನೆ ಆಗೋದೇ ಇಲ್ವ? ಇದಕ್ಕೇನು ಕಾರಣ?

ಕೇರಳದಲ್ಲಿ ನಡೆದ ಘಟನೆ ಏನು?

12 ವರ್ಷದ ಬಾಲಕ, 17ರ ಯುವತಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದನು. ಪರಿಣಾಮ ಬಾಲಕ ತಂದೆಯಾಗಿದ್ದನು. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು. ಆರಂಭದಲ್ಲಿ 12ನೇ ವಯಸ್ಸಿನಲ್ಲಿ ಹುಡುಗ ತಂದೆ ಆಗಬಹುದೇ ಎಂಬ ಪ್ರಶ್ನೆಯೊಂದು ಮೂಡಿತ್ತು. ನಂತರ ನಡೆದ ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕನೇ ಮಗುವಿನ ತಂದೆ ಎಂದು ಸಾಬೀತಾಗಿತ್ತು. ಕೊನೆಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ವಿದೇಶಗಳಲ್ಲಿ ಇಂತಹ ಸುದ್ದಿಗಳು ವರದಿಯಾಗುತ್ತಿರುತ್ತವೆ.

ವೈದ್ಯರ ಅಭಿಪ್ರಾಯ ಏನು?

ಕೇರಳದ ಪ್ರಕರಣ ಮುನ್ನಲೆ ಬಂದಾಗ ತಿರುವನಂತಪುರ ವೈದ್ಯಕೀಯ ಕಾಲೇಜಿನ Endocrinology Department ವಿಭಾಗದ ಮುಖ್ಯಸ್ಥರಾದ ಡಾ.ಡಾ.ಪಿ.ಕೆ.ಜಬ್ಬಾರ್, ಈ ವಯಸ್ಸಿನಲ್ಲಿ ತಂದೆಯಾಗಲು ಸಾಧ್ಯ ಎಂದು ಹೇಳಿದ್ದರು. ಸಾಮಾನ್ಯವಾಗಿ 12 ರಿಂದ 14ನೇ ವಯಸ್ಸಿನಲ್ಲಿ ಮಕ್ಕಳು ಪ್ರಬುದ್ಧತೆಯ ಹಂತಕ್ಕೆ ತಲುಪುತ್ತಾರೆ. ಇದು ಕೆಲವರಲ್ಲಿ ಮುಂಚಿತವಾಗಿ ಸಂಭವಿಸಬಹುದು. ಜೈವಿಕವಾಗಿ 20 ರಿಂದ 30 ವರ್ಷ ವಯಸ್ಸಿನವರು ತಂದೆಯಾಗಲು ಉತ್ತಮ ವಯಸ್ಸು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

click me!