ಮದುವೆ ದಿನ ಪರಾರಿಯಾದ ಪ್ರಿಯಕರ: ನಾಯಿಯೊಂದಿಗೇ ಹಸೆಮಣೆ ಏರಿದ ಮದುಮಗಳು!

Published : Jan 15, 2017, 09:06 AM ISTUpdated : Apr 11, 2018, 12:50 PM IST
ಮದುವೆ ದಿನ ಪರಾರಿಯಾದ ಪ್ರಿಯಕರ: ನಾಯಿಯೊಂದಿಗೇ ಹಸೆಮಣೆ ಏರಿದ ಮದುಮಗಳು!

ಸಾರಾಂಶ

ಮದುವೆ ಮುರಿದು ಬೀಳುವ ವಿಚಾರ ನಾವು ಕೇಳುತ್ತಿರುತ್ತೇವೆ, ಇದು ಹೊಸತೇನೂ ಅಲ್ಲ. ಆದರೆ ಮದುವೆ ಮುರಿದು ಬಿತ್ತೆಂದು ಯುವತಿಯೊಬ್ಬಳು ತನ್ನ ನಾಯಿಯೊಂದಿಗೆ ಮದುವೆಯಾದ ಪ್ರಸಂಗ ಬಹುಶಃ ಯಾರೂ ಕೇಳಿರಲಿಕ್ಕಿಲ್ಲ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,  ಮದುವೆಯ ದಿನವೇ ಪ್ರಿಯಕರ ಮದುಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮದುಮಗಳು ತನ್ನ ನಾಯಿಯೊಂದಿಗೆ ಮದುವೆಯಾಗಿದ್ದಾಳೆ.

ಅರ್ಜೆಂಟಿನಾ(ಜ.15): ಮದುವೆ ಮುರಿದು ಬೀಳುವ ವಿಚಾರ ನಾವು ಕೇಳುತ್ತಿರುತ್ತೇವೆ, ಇದು ಹೊಸತೇನೂ ಅಲ್ಲ. ಆದರೆ ಮದುವೆ ಮುರಿದು ಬಿತ್ತೆಂದು ಯುವತಿಯೊಬ್ಬಳು ತನ್ನ ನಾಯಿಯೊಂದಿಗೆ ಮದುವೆಯಾದ ಪ್ರಸಂಗ ಬಹುಶಃ ಯಾರೂ ಕೇಳಿರಲಿಕ್ಕಿಲ್ಲ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,  ಮದುವೆಯ ದಿನವೇ ಪ್ರಿಯಕರ ಮದುಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮದುಮಗಳು ತನ್ನ ನಾಯಿಯೊಂದಿಗೆ ಮದುವೆಯಾಗಿದ್ದಾಳೆ.

ಅರ್ಜೆಂಟಿನಾದ ರೊಬಿನಾ ಪೀಟೋಂ ಹೆಸರಿನ ಯುವತಿಗೆ ಆಕೆಯ ಪ್ರಯಕರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ಹಿಂದಿನ ದಿನ ಈ ಸಂಬಂಧ ಮುರಿದು ಬಿದ್ದಿದೆ.  ಇಷ್ಟಾದರೂ ಧೈರ್ಯಗೆಡದ ಯುವತಿ, ಪ್ರಿಯಕರನಿಗೆ ಬುದ್ಧಿ ಕಲಿಸಲು  ನಾಯಿಯೊಡನೆ ಮದುವೆಯಾಗಿದ್ದಾಳೆ.

ಇಲ್ಲಿನ ಹೋಟೆಲ್ ಬಿಗಂಸ್'ನಲ್ಲಿ ನಾಯಿ ಹಾಗೂ ಯುವತಿಯ ಮದುವೆ ನಡೆದಿದೆ. ಯುವಕ ನಿರಾಕರಿಸಿದರೇನಂತೆ ಮದುವೆ ಮಾತ್ರ ನಿಗದಿಪಡಿಸಿದ ದಿನದಂದೇ ಆಗಬೇಕು ಎಂದು ಪಟ್ಟು ಹಿಡಿದ ಯುವತಿ ಹೀಗೆ ಮಾಡಿದ್ದಾಳೆ. ವಾಸ್ತವವಾಗಿ ಆಕೆಯ ಮನೆಯವರೂ ಆಕೆ ತನ್ನ ಮುದ್ದಿನ ನಾಯಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿ ಮದುವೆ ಮಾಡಿಕೊಳ್ಳುತ್ತಾಳೆ ಎಂದು ಕಲ್ಪಿಸಿರಲಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು