
ಬೆಂಗಳೂರು : ಪ್ರಾಣಿ ರಕ್ಷಣಾ ಕೇಂದ್ರಗಳು ಇತ್ತೀಚೆಗೆ ಒಂದು ಮಾಹಿತಿಯನ್ನು ಬಹಿರಂಗ ಮಾಡಿವೆ. ಅದರಲ್ಲಿ ಕಪ್ಪು ಬೆಕ್ಕುಗಳನ್ನು ಸಾಕಿದವರು ಮತ್ತೆ ಮನೆಗೆ ಸೇರಿಸಿಕೊಳ್ಳಲು ಒಪ್ಪುತ್ತಿಲ್ಲವಂತೆ. ಅಲ್ಲದೇ ಹೆಚ್ಚಿನ ಜನರು ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.
ಅದಕ್ಕೆ ಕಾರಣವನ್ನು ಕೇಳಿದರೆ ಚಕಿತವಾಗೋದು ಕಂಡಿತ. ಯಾಕೆ ಗೊತ್ತಾ ಜನರಿಗೆ ಕಪ್ಪು ಬೆಕ್ಕುಗಳೊಂದಿಗೆ ಫೊಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದು ಸುಂದರವಾಗಿ ಬರೋದಿಲ್ಲ ಎನ್ನುವ ಕಾರಣಕ್ಕಾಗಿ ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.
ಅವುಗಳು ಉತ್ತಮವಾಗಿ ಕಾಣುವುದಿಲ್ಲ. ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಒಳ್ಳೆಯದು ಎನಿಸದು ಎನ್ನುತ್ತಾರೆ ಮಾಲಿಕರು. ಅಲ್ಲದೇ ಕಪ್ಪು ಬೆಕ್ಕುಗಳು ಹೆಚ್ಚು ಬೋರಿಂಗ್ ಎನ್ನುವುದು ಕೂಡ ಕೆಲ ಜನರ ಅಭಿಪ್ರಾಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.