ಈ ವಾರ ನಿಮ್ಮ ಉಗುರು, ಕೂದಲು ಕತ್ತರಿಸುವ ಮುನ್ನ ಎಚ್ಚರ..!

By Suvarna Web DeskFirst Published Feb 22, 2018, 4:36 PM IST
Highlights

ಹಿರಿಯರಿದ್ದ ಮನೆಯಲ್ಲಿ ಕೆಲ ದಿನಗಳಲ್ಲಿ ಕೂದಲು ಹಾಗೂ ಉಗುರನ್ನು ಕತ್ತರಿಸಲು ಕೆಲ ದಿನದಲ್ಲಿ ಅವಕಾಶ ಬಿಡುವುದಿಲ್ಲ. ಅದಕ್ಕೆ ಕೆಲ ನಕಾರಾತ್ಮಕವಾದ ಪರಿಣಾಮ ನಮ್ಮ ಮೇಲೆ ಬೀಳುತ್ತದೆ ಎನ್ನುವುದೇ ಆಗಿದೆ. ಹಾಗಾದರೆ ಯಾವ ವಾರ ಉಗುರು, ಕೂದಲು ಕತ್ತರಿಸಿದರೆ ಒಳಿತು.  ಯಾವ ವಾರ ಕತ್ತರಿಸಬಾರದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಹಿರಿಯರಿದ್ದ ಮನೆಯಲ್ಲಿ ಕೆಲ ದಿನಗಳಲ್ಲಿ ಕೂದಲು ಹಾಗೂ ಉಗುರನ್ನು ಕತ್ತರಿಸಲು ಕೆಲ ದಿನದಲ್ಲಿ ಅವಕಾಶ ಬಿಡುವುದಿಲ್ಲ. ಅದಕ್ಕೆ ಕೆಲ ನಕಾರಾತ್ಮಕವಾದ ಪರಿಣಾಮ ನಮ್ಮ ಮೇಲೆ ಬೀಳುತ್ತದೆ ಎನ್ನುವುದೇ ಆಗಿದೆ. ಹಾಗಾದರೆ ಯಾವ ವಾರ ಉಗುರು, ಕೂದಲು ಕತ್ತರಿಸಿದರೆ ಒಳಿತು.  ಯಾವ ವಾರ ಕತ್ತರಿಸಬಾರದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಯಾವುದೇ ವಿಶೇಷ ದಿನ ಅಥವಾ ಹಬ್ಬ ಇರುವ ದಿನದಲ್ಲಿ ಉಗುರು ಹಾಗೂ ಕೂದಲನ್ನು ಕತ್ತರಿಸಬಾರದು ಎನ್ನಲಾಗುತ್ತದೆ. ಅಲ್ಲದೇ ಉಗುರುಗಳನ್ನು ಸಂಜೆ ಸಮಯದಲ್ಲಿ ಹಾಗೂ ರಾತ್ರಿ ಸಮಯದಲ್ಲಿ ಕತ್ತರಿಸಬಾರದು ಎನ್ನುವುದು ಕೂಡ ಹಿರಿಯರ ನಂಬಿಕೆಯಾಗಿದೆ.

ಹಿಂದೂ ಸಂಪ್ರದಾಯದಂತೆ ಪ್ರತೀ ವಾರವನ್ನೂ ಕೂಡ ಒಂದೊಂದು ಗುರುತಿನಿಂದ ನೋಡಲಾಗುತ್ತದೆ. ಅದರಲ್ಲಿ ಗ್ರಹ , ನೀತಿ ನಿಯಮಗಳ ಪ್ರಭಾವವನ್ನು ಪರಿಗಣಿಸಲಾಗುತ್ತದೆ.

ಸೋಮವಾರವನ್ನು ಶಿವನ ವಾರ ಎಂದು ಕರೆಯಲಾಗುತ್ತದೆ. ಅಲ್ಲದೇ ಚಂದ್ರನ ಪ್ರಭಾವದ ವಾರ ಎಂದೂ ಇದನ್ನು ಕರೆಯಲಾಗುತ್ತದೆ. ಮಂಗಳವಾರವನ್ನು ಮಂಗಳ ಗ್ರಹದ, ಹನುಮಾನ್ ವಾರವೆಂದು ಪರಿಗಣಿಸಲಾಗುತ್ತದೆ.

ಬುಧವಾರವನ್ನು ಕೃಷ್ಣ ವಾರ, ಬುಧನ ಪ್ರಭಾವದ ವಾರವೆಂದು ಪರಿಗಣಿಸಲಾಗುತ್ತದೆ. ಗುರುವಾರವನ್ನು ವಿಷ್ಣುವಿನ ವಾರವೆಂದು ಹಾಗೂ ಗುರುವಿನ ಅಧಿಪತ್ಯದ ವಾರವೆಂದು ಪರಿಗಣಿಸಲಾಗುತ್ತದೆ.

ಶುಕ್ರವಾರವು ದುರ್ಗೆಯ ವಾರವಾಗಿದ್ದು, ಶುಕ್ರ ಗ್ರಹದ ಅಧಿಪತ್ಯದ ವಾರವೆಂದು ಪರಿಗಣಿಸಲಾಗುತ್ತದೆ.  ಶನಿವಾರ ಶನಿಯ ವಾರ ಎನ್ನಲಾಗುತ್ತದೆ. ಭಾನುವಾರವೂ ಸೂರ್ಯನ ವಾರ ಎನ್ನಲಾಗುತ್ತದೆ.

 

ಯಾವಾಗ  ಉಗುರುಗಳನ್ನು ಕತ್ತರಿಸಬೇಕು, ಯಾವಾಗ ಕತ್ತರಿಸಬಾರದು

ಹಿಂದೂ ನಂಬಿಕೆಯ ಪ್ರಕಾರವಾಗಿ ನಿತ್ಯವೂ ಕೂಡ ಒಂದೊಂದು ಸಂಪ್ರದಾಯವನ್ನು ಪಾಲನೆ ಮಾಡಲಾಗುತ್ತದೆ. ಶೇವ್, ಕೂದಲ ಕತ್ತರಿಸಲು ಉಗುರು ಕತ್ತರಿಸಲು ಕೆಲ ದಿನದಲ್ಲಿ ನಿಷೇಧವಿದೆ.

ಸೋಮವಾರ

ಸೋಮವಾರವೂ  ಚಂದ್ರನಿಗೆ ಸಂಬಂಧಿಸಿದ ವಾರವಾಗಿದ್ದು, ಮಾನವನ ದೇಹದ ಮೇಲೆ ಚಂದ್ರನ ನೇರ ಪರಿಣಾಮ ಇರುತ್ತದೆ. ಈ ವಾರ ಉಗುರು ಕತ್ತರಿಸಿದರೆ ಮಾನವನ ದೇಹದ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಅಲ್ಲದೇ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ.

 

ಮಂಗಳವಾರ

ಮಂಗಳವಾರ ಕೂದಲು ಕತ್ತರಿಸಲು ನಿಷೇಧವಿದೆ. ಅಲ್ಲದೇ ಅಂದು ಶೇವ್ ಮಾಡಲು ಕೂಡ ನಕಾರಾತ್ಮಕ ಪರಿಣಾಮ ಎನ್ನಲಾಗುತ್ತದೆ. ಇದು ಜೀವನದ ಮೇಲೆ ಮಾರಕ ಪರಿಣಾಮ ಬೀರುತ್ತದೆ.

ಬುಧವಾರ

ಬುಧವಾರವೂ ಸಾಮಾನ್ಯವಾಗಿ ಎಲ್ಲರಿಗೂ ನೆಚ್ಚನ ವಾರ. ಈ ವಾರದಂದು ಯಾವ ಕೆಲಸ ಮಾಡಿದರೂ ಕೂಡ ನಕಾರಾತ್ಮಕವಾದ ಪರಿಣಾಮ ಬೀರದು.  ಇಂದು ಕೂದಲು, ಉಗುರು ಕತ್ತರಿಸಲು ಅವಕಾಶವಿದೆ. ಈ ವಾರ ಲಕ್ಷ್ಮೀ ಕೃಪಾಕಟಾಕ್ಷ  ಇರುತ್ತದೆ.

ಗುರುವಾರ

ಗುರುವಾರವನ್ನು ವಿಷ್ಣುವಿನ ವಾರ ಎನ್ನಲಾಗುತ್ತದೆ. ಇಂದು ಉಗುರು ಹಾಗೂ ಕೂದಲನ್ನು ಕತ್ತರಿಸುವುದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ ಎಂದು ಪರಿಗಣಿಸಲಾಗುತ್ತದೆ.

ಶುಕ್ರವಾರ

ವಾರವೂ ಶುಕ್ರನಿಗೆ ಸಂಬಂಧಿಸಿದ ವಾರವಾಗಿದ್ದು, ಶುಕ್ರ ಸೌಂದರ್ಯದ ಪ್ರತೀಕವಾಗಿದ್ದಾನೆ. ಇಂದು ಉಗುರು ಹಾಗೂ ಕೂದಲು ಕತ್ತರಿಸುವುದು ಮಂಗಳಕರ ಎನ್ನಲಾಗುತ್ತದೆ.

ಶನಿವಾರ

ಶನಿವಾರ ಶನಿಯ ವಾರ ಎಂದು ನಂಬಲಾಗುತ್ತದೆ. ಇಂದು ಉಗುರು ಕೂದಲು ಕತ್ತರಿಸುವುದು ಅಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಾವಿನ ಸಂಭವ ಹೆಚ್ಚು ಎನ್ನಲಾಗುತ್ತದೆ.

ಭಾನುವಾರ

ಭಾನುವಾರ ಸೂರ್ಯನ  ಅಧಿಪತ್ಯದ ವಾರವಾಗಿದ್ದು, ಇಂದೂ ಕೂಡ ಕೂದಲು ಹಾಗೂ ಉಗುರು ಕತ್ತರಿಸುವುದು ಅಮಂಗಳಕರ ಎನ್ನಲಾಗುತ್ತದೆ. ಇಂದು ಈ ಕೆಲಸ ಮಾಡುವುದು ವಿನಾಶಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ.

click me!