ಸೊಯಾ ಪ್ರೋಟಿನ್ ಎಂಬ ಫಿಟ್ನೆಸ್ ತಂತ್ರ

By Web DeskFirst Published Oct 19, 2018, 3:29 PM IST
Highlights

ಸಸ್ಯಾಹಾರಿಗಳಿಗೆ ಅತೀವ ಪ್ರೊಟೀನ್ ಒದಗಿಸೋ ಪದಾರ್ಥವೆಂದರೆ ಸೊಯಾ ಬೀನ್. ಫಿಟ್‌ನೆಸ್ ಕಾಳಜಿ ಹೆಚ್ಚಿರುವವರು ಇದನ್ನು ವಿಧವಿಧವಾಗಿ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು, ದೇಹವನ್ನೂ ಫಿಟ್ ಆಗಿಡಬಹುದು.

  • ಸಾಮಾನ್ಯವಾಗಿ ಎಲ್ಲರೂ ಬಳಸದ ಸೋಯಾಬಿನ್‌ನಲ್ಲಿ ವಿವಿಧ ಪೋಷಕಾಂಶಗಳು ಹೇರಳವಾಗಿರುತ್ತದೆ. ಇದರಿಂದ ರುಚಿಕರವಾದ ಅಡುಗೆ ಮಾಡಬಹುದು. 
  • ಗೋಧಿ ಹಿಟ್ಟಿನೊಂದಿಗೆ ಸೋಯಾವನ್ನು ಹಿಟ್ಟು ಮಾಡಿಸಿ, ಮಿಕ್ಸ್ ಮಾಡಿಕೊಂಡರೆ ಒಳಿತು. ಇದು ಚಪಾತಿಯ ರುಚಿ ಹೆಚ್ಚಿಸುವುದಲ್ಲದೇ, ಅಗತ್ಯ ಪೋಷಕಾಂಶಗಳನ್ನು ಪೂರೈಸುವುದರಲ್ಲಿ ಸಫಲವಾಗುತ್ತದೆ. 
  • ಸೊಯಾಬೀನ್ ಬಳಸಿ ಅಡುಗೆ ಮಾತ್ರವಲ್ಲದೆ, ಬಿಸ್ಕೆತ್ ಅಥವಾ ಓಟ್ಸ್ ರೀತಿಯಲ್ಲಿಯೂ ಹಾಲಿಗೆ ಬೆರೆಸಿ ಸೇವಿಸಬಹುದು. 
  • ಕೆಲವೊಂದು ಸಂಶೋಧನೆಯ ಪ್ರಕಾರ  ಹೆಚ್ಚಾಗಿ ಸೊಯಾ ಬಳಕೆಯಿಂದ ಹೆಣ್ಣುಮಕ್ಕಳಿಗೆ  ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಗಂಡಸರಲ್ಲಿ ಟೀಸ್ಟೋಸ್ಟೇರಾನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸೋಯಾವನ್ನು ಪ್ರೋಟಿನ್ ರೀತಿಯಲ್ಲಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ಅಗತ್ಯಕ್ಕಿಂತ ಹೆಚ್ಚಿಗೆ ಸೇವಿಸಬಾರದು.
  • ಈ ಪೌಡರ್ ಅನ್ನು ಬಹಳ ಕಾಲ ಇಡಬಾರದು. ಪುಡಿ ಮಾಡಿದ ತಿಂಗಳಲ್ಲಿಯೇ ಬಳಸಿದರೆ ಒಳಿತು. 
  • ಮಾಂಸದಲ್ಲಿ ಸಿಗುವಷ್ಟು ಪ್ರೋಟಿನ್ ಸೊಯಾಬೀನ್‌ನಲ್ಲಿ ಸಿಗುತ್ತದೆ.
click me!