
ಮೂಗಿನೊಳಗೆ ಸಣ್ಣಗೆ ಇರಿಟೇಶನ್, ನಂತರ ಅಕ್ಷಿ.. ಹಾಗೆ ಸೀನುವಾಗ ಕಣ್ಣೊಳಗೆ ಇದ್ದಕ್ಕಿದ್ದ ಹಾಗೆ ಮಿಂಚಿನಂತೆ ಬೆಳಕು ಬಂದಂಥ ಅನುಭವವಾಗಿದೆಯಾ? ಹೀಗಾಗಿದ್ದರೂ ಹೆಚ್ಚು ಟೆನ್ಶನ್ ಪಡೋದೇನು ಬೇಡ. ಸೀನಿದಾಗ ತಲೆಯೊಳಗೆ ಒತ್ತಡ ಸೃಷ್ಟಿಯಾಗುತ್ತೆ. ಇದರಿಂದ ಕಣ್ಣಿನೊಳಗಿನ ಸೂಕ್ಷ್ಮ ಪದರ ರೆಟಿನಾದ ಮೇಲೆ ಪ್ರೆಷರ್ ಬೀಳುತ್ತೆ.
ಹೀಗೆ ಆದಾಗ ಮಿದುಳು ರೆಟಿನಾಗೆ ನೀಡುವ ಸಂಜ್ಞೆಯ ನಡುವೆ ಬೆಳಕು ಮಿನುಗಿದಂತಾಗುತ್ತದೆ. ಈ ಥರದ ಅನುಭವ ಸಡನ್ನಾಗಿ ಮಲಗಿದಾಗಲೂ ಕೆಲವರಿಗೆ ಆಗುತ್ತೆ. ಇದರಿಂದ ರಕ್ತದೊತ್ತಡದಲ್ಲೂ ಇಳಿಕೆಯಾಗಬಹುದು. ಮೆದುಳಿಗೆ ಆಮ್ಲಜನಕದ ಸಪ್ಲೈ ನಿಧಾನವಾಗಬಹುದು. ಹೀಗಾದರೆ ವೈದ್ಯರನ್ನು ಕಾಣುವುದೊಳಿತು, ಹೀಗಾದಾಗ ಮೈಗ್ರೇನ್ ಬರುವ ಸಾಧ್ಯತೆ ಹೆಚ್ಚಿರುತ್ತೆ. ರೆಟಿನಾದಲ್ಲೂ ಸಮಸ್ಯೆ ಕಾಣಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.