
ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲಿಯೂ ಹಲವು ಸಮಸ್ಯೆಗಳು ಕಾಡೋದು ಕಾಮನ್. ಗಂಭೀರವಾದ ಕಾಯಿಲೆಗಳು ಇವಲ್ಲದೇ ಹೋದರೂ, ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು ರೋಗಗಳಿವು. ಅದಕ್ಕೆ ಸಮಸ್ಯೆಗಳು ತೀವ್ರತೆ ಹೆಚ್ಚು. ಇದಕ್ಕೆ ಹೇಗೆ ಜಾಗರೂಕರರಾಗಿಬೇಕು?
ಚಿಕನ್ ಫಾಕ್ಸ್ : ಸೋಂಕು ರೋಗವಾದ ಇದು ಮಕ್ಕಳನ್ನು ಕಾಡೋದು ಹೆಚ್ಚು. ಆಮೇಲೆ ದೊಡ್ಡವರನ್ನೂ ಬಿಡೋದಿಲ್ಲ. ವಾರಿಸೆಲ್ಲಾ ಜೋಸ್ಟರ್ ಎಂಬ ವೈರಸ್‌ನಿಂದ ಹರಡೋ ಈ ಸೋಂಕಿನಿಂದ ಮೊದಲೆಡು ದಿನ ಚಿಕ್ಕ ಚಿಕ್ಕ ಗುಳ್ಳೆ ಕಾಣಿಸಿಕೊಳ್ಳುತ್ತವೆ. ನಂತರ ದೊಡ್ಡದಾಗುತ್ತಾ, ಉರಿ, ಉರಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ಒಳಗಾದ ವ್ಯಕ್ತಿ ಕೆಮ್ಮಿದಾಗ ಗಾಳಿಯಲ್ಲಿ ವೈರಸ್ ಹರಿದಾಡಿ ಅದನ್ನು ಮತ್ತೊಬ್ಬರು ಉಸಿರಾಡಿದಾಗ ಆ ಸೋಂಕು ಮತ್ತೊಬ್ಬರಿಗೂ ಹರಡುತ್ತದೆ. ಈ ಗುಳ್ಳೆ ಒಡೆದು ದ್ರವ ಹೊರ ಬಂದರೂ ಮತ್ತೊಬ್ಬರಿಗೆ ಹರಡುತ್ತದೆ. ಈ ಸಮಯದಲ್ಲಿ ಸ್ವಚ್ಛತೆ ಮುಖ್ಯ.
ಕಾಮಾಲೆ ರೋಗ: ಇದು ನೀರಿನ ಮೂಲಕ ಹರಡುವ ರೋಗ. ಬ್ಯಾಕ್ಟೀರಿಯಾಯುತ ಆಹಾರಗಳನ್ನು ಸರಿಯಾಗಿ ತೊಳೆಯದೇ ಅಥವಾ ಸರಿಯಾಗಿ ಬೇಯಿಸದೆ ಸೇವಿಸಿದರೆ ಈ ಸೋಂಕು ಆವರಿಸುತ್ತದೆ. ಹೆಪಟೈಟಿಸ್ ಎ ವೈರಸ್‌ನಿಂದ ಈ ರೋಗ ಬರುತ್ತದೆ. ಇದು ರಕ್ತದ ಮೂಲಕ ದೇಹದ ಎಲ್ಲ ಭಾಗಗಳಿಗೂ ಹರಡಿ ಚರ್ಮ ಮತ್ತು ಕಣ್ಣಿನ ಬಣ್ಣಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮೂತ್ರವೂ ಹಳದಿ ಬಣ್ಣದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಪಥ್ಯೆ ಅಗತ್ಯ.
ಕೆಪ್ಪಟರಾಯ: ಇದೂ ಮಕ್ಕಳಿಗೆ ಸಾಮಾನ್ಯವಾಗಿ ಕಾಡೋ ರೋಗ. ಇದು ಮಂಪ್ಸ್ ವೈರಸ್‌ನಿಂದ ಬರುತ್ತದೆ. ಕೆಮ್ಮಿನಿಂದ ಹಾಗೂ ವೈರಸ್ ಗಾಳಿಯಲ್ಲಿ ತೇಲುತ್ತ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದರಿಂದ ಲಾಲಾರಸ ಉತ್ಪಾದಿಸುವ ಗ್ರಂಥಿ ಊದಿಕೊಳ್ಳುವುದು ಹಾಗೂ ಗಂಟಲ ಕೆಳ ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ವಿಪರೀತವಾದರೆ ಜ್ವರ, ನೋವೂ ಕಾಮನ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.