
ಜಾಗದ ಕೊರತೆಯಿಂದ ತೋಟ ಮಾಡೋಕೆ ಆಗ್ತಿಲ್ಲವಾ? ಅದರ ಚಿಂತೆ ಬೇಡ. ಖಾಲಿ ಇರುವ ಬಾಲ್ಕನಿಯಲ್ಲೇ ತರಕಾರಿ ಬೆಳೆಸಬಹುದು. ಅದು ಹೇಗೆ ಸಾಧ್ಯ ಅಂತೀರಾ? ಹೌದು ಸಾಧ್ಯವಿದೆ. ಹೇಗೆ ಬೆಳೆಯಬಹುದು ಎಂಬುದನ್ನು ಇಲ್ಲಿ ತಿಳಿಯೋಣ.
ಟೊಮ್ಯಾಟೋ:
ಸುಲಭವಾಗಿ ಬೆಳೆಯುವ ತರಕಾರಿ ಟೊಮ್ಯಾಟೋ. ಚಿಕ್ಕ ಮಡಕೆಯಲ್ಲೇ ನೆಡಬಹುದು. ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಟೊಮ್ಯಾಟೋ(Tomato) ಗಿಡ ಇಡಬೇಕು.
ಪಾಲಕ್ ಸೊಪ್ಪು
ಪಾಲಕ್ ಬೇಗ ಬೆಳೆಯುತ್ತದೆ. ಜಾಸ್ತಿ ಜಾಗ ಬೇಕಾಗಿಲ್ಲ. ಮಣ್ಣು ಯಾವಾಗಲೂ ತೇವವಾಗಿರಬೇಕು. ಬೆಳೆದ ಎಲೆಗಳನ್ನು ಕತ್ತರಿಸಿ ತೆಗೆಯಬೇಕು. ಹೊಸ ಎಲೆಗಳು ಬರಲು ಇದು ಸಹಾಯ ಮಾಡುತ್ತದೆ.
ಕ್ಯಾರೆಟ್
ಮಡಕೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿ ಕ್ಯಾರೆಟ್. ಹಲವು ವಿಧದ ಕ್ಯಾರೆಟ್‌ಗಳು ಸಿಗುತ್ತವೆ. ಇವೆಲ್ಲವನ್ನೂ ಚಿಕ್ಕ ಮಡಕೆಯಲ್ಲಿ ಬೆಳೆಸಬಹುದು.
ಹಸಿಮೆಣಸಿನಕಾಯಿ
ಬಿಸಿಲಿನಲ್ಲಿ ಹಸಿಮೆಣಸಿನಕಾಯಿ ಚೆನ್ನಾಗಿ ಬೆಳೆಯುತ್ತದೆ. ಸೂರ್ಯನ ಬೆಳಕು ಬೀಳುವಂತೆ ಬಾಲ್ಕನಿಯಲ್ಲಿ ಹಸಿಮೆಣಸಿನಕಾಯಿ ಗಿಡ ನೆಡಬಹುದು. ನೀರು ಹಾಕುವುದನ್ನು ಮರೆಯಬಾರದು. ಆದರೆ, ಒಮ್ಮೆಲೆ ಹೆಚ್ಚು ನೀರು ಹಾಕಬಾರದು. ಗಿಡ ಹಾಳಾಗಬಹುದು.
ಕುಂಬಳಕಾಯಿ
ಮಡಕೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿ ಕುಂಬಳಕಾಯಿ. ಬಿಸಿಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.