ಮಗುವಿನ ಕೋಮಲ ತ್ವಚೆಗಾಗಿ ಹೇಗೆ ಕೇರ್ ತೆಗೆದುಕೊಳ್ಳಬೇಕು?

Published : Aug 01, 2018, 04:30 PM IST
ಮಗುವಿನ ಕೋಮಲ ತ್ವಚೆಗಾಗಿ ಹೇಗೆ ಕೇರ್ ತೆಗೆದುಕೊಳ್ಳಬೇಕು?

ಸಾರಾಂಶ

ಹೆಣ್ಣಿಗೆ ತಾಯ್ತನ ಪ್ರಕೃತಿ ಸಹಜ ಕೊಡುಗೆ. ಹೆರುವುದು, ಹೊರುವುದು ಬಳಿಕ  ಮಗುವಿನ ಲಾಲನೆ, ಪಾಲನೆ, ಆರೈಕೆ ಎಲ್ಲವೂ ತಾಯಿಗೆ ಸಂತೋಷದ ವಿಷಯವೇ. ಮಗುವಿನ  ತ್ವಚೆ ಉತ್ತಮವಾಗಿರಲು ಇಲ್ಲಿವೆ ಕಲವು ಟಿಪ್ಸ್’ಗಳು  

ತಾಯ್ತನ ಎಂಬುದು ಮಹಿಳೆಗೆ ಮ್ಯಾಜಿಕಲ್ ಅನುಭವ ನೀಡುತ್ತದೆ. ತಾಯಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಮಗುವಿನ ಅರೋಗ್ಯ,  ರಕ್ಷಣೆಯ ಬಗ್ಗೆ ತಾಯಿ ಹೆಚ್ಚು ಗಮನ ಹರಿಸುತ್ತಾಳೆ. ಮಗುವಿನ ತ್ವಚೆಯ ಬಗ್ಗೆಯೂ ತಾಯಿ ಕೇರ್ ತೆಗೆದುಕೊಳ್ಳುತ್ತಾಳೆ.  ಮಗುವಿನ ಸ್ಕಿನ್  ಉತ್ತಮವಾಗಿರಬಬೇಕೆಂದರೆ ಕೆಲವೊಂದು ಟಿಪ್ಸ್ ಗಳನ್ನೂ ಪಾಲಿಸಬೇಕು. 

ಬಿಸಿ ಎಣ್ಣೆ ಮಸಾಜ್ : ಮಕ್ಕಳಿಗೆ ಎಣ್ಣೆಯ ಮಸಾಜ್ ಮಾಡಿದರೆ ತ್ವಚೆ ಉತ್ತಮವಾಗಿರುತ್ತದೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಗುವಿನ ದೇಹಕ್ಕೆ  ಪೂರ್ತಿಯಾಗಿ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಮಗುವಿಗೆ ಬಿಸಿ ನೀರಿನ ಸ್ನಾನ ಮಾಡಿಸಿ. ಇದರಿಂದ ಚರ್ಮಕ್ಕೆ ಮಾಯಿಶ್ಚರೈಸರ್  ದೊರೆಯುತ್ತದೆ, ಜೊತೆಗೆ ತ್ವಚೆ ಹೊಳೆಯುತ್ತದೆ. 

ಬಳಕೆ ಮಾಡುವ ನೀರು: ಮಗುವಿಗೆ ಸ್ನಾನ ಮಾಡಿಸುವಾಗ ಹೆಚ್ಚು ಬಿಸಿ ಅಥವಾ ಹೆಚ್ಚು ತಣ್ಣಗೆ ನೀರನ್ನು ಬಳಕೆ ಮಾಡಬೇಡಿ. ಇದರಿಂದ ಡ್ರೈ  ಆಗುವ ಸಾಧ್ಯತೆ ಇದೆ. ಆದುದರಿಂದ ಉಗುರುಬಿಸಿ ನೀರನ್ನು ತೆಗೆದುಕೊಂಡು ಮಕ್ಕಳಿಗೆ ಸ್ನಾನ ಮಾಡಿಸಿ. 

ಬಾಡಿ ಪ್ಯಾಕ್ : ಮಗುವಿನ ತ್ವಚೆ ತುಂಬಾ ಕೋಮಲವಾಗಿರುತ್ತದೆ. ಆದುದರಿಂದ ಏನೇ ಮಾಡಿದರು ತುಂಬಾ ಕೇರ್ ಫುಲ್ ಆಗಿ ಮಾಡಬೇಕು. ಮಗುವಿನ ತ್ವಚೆ ಉತ್ತಮವಾಗಲು ಅರಿಶಿನ, ಹಾಲು ಮತ್ತು ಗಂಧದ ಪುಡಿ ಬೆರೆಸಿ ಪ್ಯಾಕ್ ಮಾಡಿ ಮಗುವಿಗೆ ಹಚ್ಚಿ ಸ್ನಾನ ಮಾಡಿಸಿ. 

ಮಾಯಿಶ್ಚರೈಸರ್ : ಮಗುವಿನ ಸ್ಕಿನ್ ಯಾವತ್ತೂ ಡ್ರೈ ಆಗಲು ಬಿಡಬೇಡಿ. ಅದಕ್ಕಾಗಿ ಮಾಯಿಶ್ಚರೈಸರ್ ಹಚ್ಚಿ. ಆದರೆ ಮಾಯಿಶ್ಚರೈಸರ್ ಆಯ್ಕೆ  ಮಾಡುವಾಗ ಅದರಿಂದ ಮಗುವಿಗೆ ಏನು ಸಮಸ್ಯೆ ಬರಬಾರದು ಅಂತಹ ಮಾಯಿಶ್ಚರೈಸರ್ ಬಳಕೆ ಮಾಡಿ. 

ಸೋಪ್ ಬಳಕೆ ಮಾಡಬೇಡಿ : ಹೌದು ಮಕ್ಕಳ ಸ್ನಾನಕ್ಕೆ ಸೋಪ್ ಬಳಕೆ ಮಾಡಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಅದರ ಬದಲಾಗಿ  ಹಾಲು ಮತ್ತು ರೋಸ್ ವಾಟರ್ ಬಳಕೆ ಮಾಡಿ.       

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..