
ಬೆಂಗಳೂರು (ಅ.10) ಸಾರಿಗೆ ವ್ಯವಸ್ಥೆಗಳಲ್ಲಿ ಭಾರತದಲ್ಲಿ ಆಟೋ ಅತೀ ಹೆಚ್ಚಿನ ಮಂದಿ ನೆಚ್ಚಿಕೊಂಡ ವಾಹನ. ಬಹುತೇಕರು ಒಂದಲ್ಲಾ ಒಂದು ಬಾರಿ ಆಟೋ ಪ್ರಯಾಣ ಮಾಡಿರುತ್ತಾರೆ. ಹಲವರು ಪ್ರತಿನಿತ್ಯ ಆಟೋ ನೆಚ್ಚಿಕೊಂಡಿರುತ್ತಾರೆ. ಹೀಗೆ ಆಟೋದಲ್ಲಿ ಪ್ರಯಾಣ ಮಾಡುವಾಗ ಆಟೋ ಚಾಲಕರು ಖಾಕಿ ಸಮವಸ್ತ್ರ ಯಾಕೆ ಧರಿಸುತ್ತಾರೆ ಅನ್ನೋ ಯೋಚನೆ ಬರದೇ ಇರದು. ಪೊಲೀಸರು, ಸೇರಿದಂತೆ ಹಲವು ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಖಾಕಿ ಸಮವಸ್ತ್ರ ಕಡ್ಡಾಯವಾಗಿದೆ. ಆಟೋ ಚಾಲಕರಿಗೂ ಖಾಕಿ ಸಮವಸ್ತ್ರವನ್ನೇ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣವಿದೆ.
ಆಟೋ ಚಾಲಕರು ಕೂಡ ಸಾರ್ವಜನಿಕ ಸಾರಿಗೆಯ ಭಾಗವಾಗಿದ್ದಾರೆ. ಹೀಗಾಗಿ ಆಟೋ ಚಾಲಕರ ಮೇಲೂ ಪ್ರಯಾಣಿಕರ ಸುರಕ್ಷತೆಯ ಅತ್ಯಂತ ಮಹತ್ವದ ಜವಾಬ್ದಾರಿ ಇದೆ. ಪ್ರಯಾಣಿಕರ ಭದ್ರತೆ, ಚಾಲಕರ ಗುರುತಿಸುವಿಕೆಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಆಟೋ ಚಾಲಕರನ್ನು ಪ್ರಯಾಣಿಕರಿಂದ ಪ್ರತ್ಯೇಕಿಸಿ, ಸುಲಭವಾಗಿ ಗುರುತಿಸಿವಂತೆ ಮಾಡಲು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಆಟೋ ಚಾಲಕರಿಗೆ ಖಾಕಿ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ ಮೋಟಾರು ನಿಯಮ 1989ರ 14(A)(B) ಪ್ರಕಾರ ಸಾರಿಗೆ ವಾಹನ ಚಾಲಕರು ಕರ್ತವ್ಯ ಸಮಯದಲ್ಲಿ ಕಡ್ಡಾಯವಾಗಿ ಖಾಕಿ ಸಮವಸ್ತ್ರ ಧರಿಸಬೇಕು. ಈ ಖಾಕಿ ಸಮವಸ್ತ್ರ ಹೇಗಿರಬೇಕು ಅನ್ನೋದನ್ನು ನಿಯಮ ಹೇಳುತ್ತದೆ. ಖಾಕಿ ಅರ್ಧತೋಳಿನ ಶರ್ಟ್ ಹಾಗೂ ಖಾಕಿ ಪ್ಯಾಂಟ್ ಕಡ್ಡಾಯವಾಗಿದೆ. ಇನ್ನು 13(ಡಿ) ನಿಯಮದಡಿಯಲ್ಲಿ ಆಟೋ ಚಾಲಕರು ಧರಿಸುವ ಸಮವಸ್ತ್ರ ಶುಚಿಯಾಗಿ ಶುಭ್ರವಾಗಿರಬೇಕು. ಆಟೋ ಚಾಲಕರ ವೇಷಭೂಷಣ ಉತ್ತಮವಾಗಿರಬೇಕು ಎಂದಿದೆ. ಖಾಕಿ ಶರ್ಟ್ ಧರಿಸಿ, ಪ್ಯಾಂಟ್ ಬೇರೆ ಬಣ್ಣ ಧರಿಸುವಂತಿಲ್ಲ. ನಿಯಮ ಉಲ್ಲಂಘಿಸಿದೆರ 500 ಕನಿಷ್ಟ 500 ರೂಪಾಯಿ ದಂಡ ವಿಧಿಸಲಾಗುತ್ತದೆ.
ಖಾಕಿ ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗಳು ಬಳಸವು ಬಣ್ಣ. ಖಾಕಿ ಸಾರ್ವಜನಿಕ ಸೇವೆಯ ಸಂಕೇತವಾಗಿ ಹೊರಹೊಮ್ಮಿದೆ. ಆಟೋ ಚಾಲಕರು ಸಾರಿಗೆ ಮೂಲಕ ಸಾರ್ವಜನಿಕರಿಗೆ ನೆರವಾಗುತ್ತಾರೆ. ಕರ್ನಾಟಕದಲ್ಲಿ ಆಟೋ ಚಾಲಕರಿಗೆ ಖಾಕಿ ಶರ್ಟ್ ಹಾಗೂ ಪ್ಯಾಂಟ್ ಕಡ್ಡಾಯ. ಇತರ ರಾಜ್ಯಗಳಲ್ಲಿ ಬಣ್ಣದಲ್ಲಿ ವ್ಯತ್ಯಾಸವಾಗಲಿದೆ. ಆದರೆ ನಿರ್ದಿಷ್ಟ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ದೆಹಲಿಯಲ್ಲಿ ಆಟೋ ಚಾಲಕರು ಸಮವಸ್ತ್ರ ಜೊತೆ ತಮ್ಮ ಹೆಸರಿನ ನೇಮ್ ಪ್ಲೇಟ್ ಧರಿಸಿರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.