
ಬೆಂಗಳೂರು (ಜ. 09): ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಆಯಾ ಕಾಲಕ್ಕೆ ಮದುವೆಯಾದರೆ ಚೆನ್ನ. ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಮದುವೆ ವಿಳಂಬವಾಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಓದು, ಉದ್ಯೋಗ, ಆಸಕ್ತಿ, ಗ್ರಹಗತಿಗಳು ಕಾರಣ ಇರಬಹುದು. ಮದುವೆ ತಡವಾಗುವುದಕ್ಕೆ ಗ್ರಹಗತಿಗಳು ಕಾರಣವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ವಯಸ್ಸಿಗನುಗುಣವಾಗಿ ಮದುವೆಯಾಗಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
18-24 ವರ್ಷ
ಸಾಮಾನ್ಯವಾಗಿ ಇದು ಮದುವೆಗೆ ಸೂಕ್ತ ಸಮಯ. ಆದರೆ ಅವರದ್ದೇ ಕಾರಣಗಳಿಂದ ಮದುವೆಯನ್ನು ಮುಂದೂಡುತ್ತಾರೆ. ಕೆಲವೊಮ್ಮೆ ಕಾಲವೇ ಕೂಡಿ ಬರುವುದಿಲ್ಲ. ನೀವು ಪ್ರತಿ ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಓಂ ಗೌರಿ ಶಂಕರಾಯೇ ನಮಃ ಎನ್ನುವ ಶಿವ-ಪಾರ್ವತಿ ಮಂತ್ರವನ್ನು ಪಠಿಸಿ.
25-30 ವರ್ಷ
ಈ ವಯಸ್ಸಿನವರಿಗೆ ಇನ್ನೂ ಮದುವೆಯಾಗದಿದ್ದರೆ ಪ್ರತಿ ಗುರುವಾರ ಹಳದಿ ಬಟ್ಟೆಯನ್ನು ಧರಿಸಿ. ಪ್ರತಿ ಸೋಮವಾರ ಬೆಳಿಗ್ಗೆ ಶಿವಲಿಂಗಕ್ಕೆ ಕ್ಷೀರಾಭಿಶೇಕ ಮಾಡಿ. ಮಾಡುವಾಗ ಓಂ ಪಾರ್ವತಿಪತೆಯೇ ನಮಃ ಎಂದು 108 ಬಾರಿ ಪಠಿಸಿ. ಹೀಗೆ ಕನಿಷ್ಠ 9 ಗುರುವಾರ ಮಾಡಿದರೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರುವುದು.
31-35 ವರ್ಷ
ಈ ವಯಸ್ಸಿನವರಿಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬರದಿದ್ದರೆ ಮನೆಯ ಹೊರಭಾಗದಲ್ಲಿ ಬಾಳೆ ಸಸಿಗಳನ್ನು ನೆಡಿ. ಪ್ರತಿ ಗುರುವಾರ ಉಪ್ಪಿನ ಸೇವನೆಯನ್ನು ಅವಾಯ್ಡ್ ಮಾಡಿ. 3 ಹೊತ್ತು ವಿಷ್ಣುವಿನ ವಿಗ್ರಹದ ಎದುರು ಓಂ ಬ್ರೂಮ್ ಬೃಹಸ್ಪತಿಯೇ ನಮಃ ಎಂದು ಪಠಿಸಿ.
36-40 ವರ್ಷ
ಶಿವಲಿಂಗಕ್ಕೆ 108 ಬಿಲ್ಪತ್ರೆ ಎಲೆಗಳನ್ನು ಅರ್ಪಿಸಿ. ಅರ್ಪಿಸುವಾಗ ಓಂ ನಮಃ ಶಿವಾಯ ಎಂದು ಪಠಿಸಿ. ಗಂಧದಲ್ಲಿ ರಾಮನ ಹೆಸರನ್ನು ಬರೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.