ಹೊಟ್ಟೆಗೆ ಹಿಟ್ಟು ತಿನ್ನೋದು ಬಿಟ್ಟು, ಜಾನ್ಸನ್ಸ್ ಬೇಬಿ ಪೌಡರ್ ತಿನ್ನೋದಕ್ಕೆ 8 ಲಕ್ಷ ಖರ್ಚು ಮಾಡೋ ಮಹಿಳೆಯರು!

By Sathish Kumar KH  |  First Published Dec 21, 2023, 8:17 PM IST

ಹೊಟ್ಟೆಗೆ ಹಿಟ್ಟು ತಿಂದು ಆರೋಗ್ಯವಾಗಿ ಬದುಕುವುದೇ ಕಷ್ಟವಾಗಿರುವಾಗ ಅಮೇರಿಕಾ ಮತ್ತು ಯುಕೆಯ ಮಹಿಳೆಯರು ಮಕ್ಕಳ ಮೈಗೆ ಹಚ್ಚುವ ಜಾನ್ಸನ್‌ ಬೇಬಿ ಪೌಡರ್ ತಿನ್ನುತ್ತಲೇ ಜೀವನ ಮಾಡುತ್ತಿದ್ದಾರೆ.


ನವದೆಹಲಿ (ಡಿ.21): ಕೆಲವೊಮ್ಮೆ ಮಹಿಳೆಯರಿಗೆ ಬೈಯುವಾಗ ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂ ಕೇಳ್ತಾಳೆ ಎನ್ನೋ ಗಾದೆಯನ್ನು ಕೆಲವೊಮ್ಮೆ ಬಳಕೆ ಮಾಡಲಾಗುತ್ತದೆ. ಆದರೆ, ಅಮೇರಿಕಾ ಮತ್ತು ಇಂಗ್ಲೆಂಡ್‌ನ ಮಹಿಳೆಯರು ತಾವು ಹೊಟ್ಟೆಗೆ ಅನ್ನ ಅಥವಾ ಇತರೆ ಆಹಾರವನ್ನು ಕೊಡದಿದ್ದರೂ ಪರವಾಗಿಲ್ಲ, ಜಾನ್ಸನ್ ಬೇಬಿ ಪೌಡರ್ ಅನ್ನು ಮಾತ್ರ ತಿನ್ನಲು ಕೊಟ್ಟುಬಿಡಿ ಎಂದು ಕೇಳುತ್ತಿದ್ದಾರೆ. ಇವರು ಸುಮಾರು 20 ವರ್ಷಗಳಿಂದ ಈ ಪೌಡರ್ ತಿಂದುಕೊಂಡೇ ಬದುಕುತ್ತಿದ್ದಾರೆ. ಒಬ್ಬಳ ಆರೋಗ್ಯ ಹದಗೆಟ್ಟಿದ್ದರೆ, ಇನ್ನೊಬ್ಬ ಮಹಿಳೆ ಆರೋಗ್ಯವಾಗಿದ್ದಾಳೆ.

ಜಗತ್ತಿನಲ್ಲಿ ಅನೇಕ ವಿಸ್ಮಯದ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ಕೆಲರವು ಆಹಾರ ಸೇವಿಸದೇ, ನೀರು ಹಾಗೂ ಗಾಳಿಯನ್ನು ಕುಡಿದು ಬದುಕುತ್ತಿದ್ದಾರೆ. ಇತ್ತೀಚೆಗೆ ಯಾದಗಿರಿಯ ಬಾಲಕಿಯೊಬ್ಬಳು ಕೇವಲ ಬೆಲ್ಲವನ್ನು ಸೇವಿಸಿಕೊಂಡೇ 15 ವರ್ಷ ಬೆಳೆದಿದ್ದಾಳೆ. ಇನ್ನು ಕೆಲವರು ಹವ್ಯಾಸಕ್ಕಾಗಿ ಮಣ್ಣು, ಚಾಕ್ ಪೀಸ್, ಬಳಪ, ಕೂದಲು ಹಾಗೂ ಗಾಜು ತಿನ್ನುವವರನ್ನೂ ನೋಡಿದ್ದೇವೆ. ಆದರೆ, ಅಮೇರಿಕಾದ ಈ ಮಹಿಳೆಯರು ಮಕ್ಕಳ ಮೈಗೆ ಹಚ್ಚುವ ಜಾನ್ಸನ್ಸ್ ಬೇಬಿ ಪೌಡರ್ ತಿಂದು ಬದುಕುತ್ತಿದ್ದಾರೆ. ಅದು ಕೂಡ ಅಲ್ಪಸ್ವಲ್ಪ ಪೌಡರ್ ತಿನ್ನದೇ, ಬರೋಬ್ಬರಿ ಒಂದು ಪೌಡರ್ ಡಬ್ಬವನ್ನೇ ಆಕೆ ಖಾಲಿ ಮಾಡುತ್ತಾರೆ.

Tap to resize

Latest Videos

undefined

ಕೋವಿಡ್ ಮಾರ್ಗಸೂಚಿ: ಹೊಸ ವರ್ಷ, ಕ್ರಿಸ್‌ಮಸ್‌ಗೆ ನಿರ್ಬಂಧವಿಲ್ಲ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

27 ವರ್ಷದಿಂದ ಪೌಡರ್ ತಿನ್ನುತ್ತಿರುವ ಮಾರ್ಟಿನ್:
ಜಾನ್ಸನ್ (Johnson) ಬೇಬಿ ಪೌಡರ್ ತಿನ್ನುವ ಮಹಿಳೆಯ ಹೆಸರು ಡ್ರೆಕಾ ಮಾರ್ಟಿನ್. ಅಮೇರಿಕಾದ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿ ಈಕೆ ವಾಸವಾಗಿದ್ದಾಳೆ. ಚಿಕ್ಕ ಮಕ್ಕಳಿಗೆ ಸ್ನಾನ ಆದ್ಮೇಲೆ ಜಾನ್ಸನ್  ಬೇಬಿ ಪೌಡರ್ ಹಾಕೋದನ್ನು ನೀವು ನೋಡಿರಬಹುದು. ಅದರ ಪರಿಮಳ ಸಾಮಾನ್ಯವಾಗಿ ಎಲ್ಲರನ್ನು ಸೆಳೆಯುತ್ತದೆ. ಆದ್ರೆ ಈ ಮಹಿಳೆ ತನ್ನ ಮಕ್ಕಳಿಗೆ ಜಾನ್ಸನ್ ಬೇಬಿ ಪೌಡರ್ (powder) ಹಾಕುವ ವೇಳೆ ಸ್ವಲ್ಪ ಪೌಡರನ್ನು ನೆಕ್ಕಿ ರುಚಿ ನೋಡ್ತಿದ್ದಳು. ನಂತ್ರ ಅದೇ ಆಕೆಗೆ ಚಟವಾಯ್ತು. ಈಗ ಪ್ರತಿ ದಿನ ಜಾನ್ಸನ್ ಬೇಬಿ ಪೌಡರ್ ತಿನ್ನುತ್ತಾಳೆ. ಈಕೆ ಪ್ರತಿದಿನ 623 ಗ್ರಾಂ. ಬಾಟಲ್ ಜಾನ್ಸನ್ ಅಲೋ ಮತ್ತು ಜಾನ್ಸನ್ ವಿಟಮಿನ್ ಇ (vitamin e ) ಪುಡಿಯನ್ನು ಸೇವಿಸುತ್ತಾಳೆ. ಕೇವಲ ಪೌಡರ್‌ ತಿಂದುಕೊಂಡೇ ಬೇರೆ ಆಹಾರವಿಲ್ಲದೆ ದಿನವನ್ನು ಕಳೆಯುತ್ತಾಳೆ. ಕೇವಲ ಜಾನ್ಸನ್ ಬೇಬಿ ಪೌಡರ್ ತಿನ್ನಲು ವರ್ಷಕ್ಕೆ 4,000 ಡಾಲರ್ (3.33 ಲಕ್ಷ ರೂ) ಖರ್ಚು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ವೈದ್ಯರ ಸಲಹೆಯ ಪ್ರಕಾರ ಕೆಲವು ರಾಸಾಯನಿಕ ಮಿಶ್ರಿತ ಪೌಡರ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಮಾರ್ಟಿನ್‌ಗೆ ತಿಳಿದಿದೆ. ಆದರೆ, ಅದೃಷ್ಟವಶಾತ್ ಆಕೆಗೆ ಈವರೆಗೆ ಜಾನ್ಸನ್ಸ್ ಬೇಬಿ ಪೌಡರ್‌ ತಿನ್ನುವುದರಿಂದ ಯಾವುದೇ ಆರೋಗ್ಯದ ಹಾನಿಯೂ ಉಂಟಾಗಿಲ್ಲ. ಆದ್ದರಿಂದಲೇ ಈಕೆಗೆ ಈ ಚಟದಿಂದ ಹೊರಬರಲು ಸಾಧ್ಯವಾಗಿಲ್ಲವಂತೆ. ಪೌಡರ್ ವಾಸನೆ ಹಾಗೂ ಅದರ ರುಚಿ ನೆನಪಾಗ್ತಿದ್ದಂತೆ ಬಾಯಲ್ಲಿ ನೀರು ಬರುತ್ತದಂತೆ. ಈ ಮಹಿಳೆಗೆ ಮದುವೆಯಾಗಿ ಮಕ್ಕಳೂ ಆಗಿದ್ದು, ತನ್ನ ಮಕ್ಕಳಿಗೆ ಹಚ್ಚಲು ತರಿಸುವ ಪೌಡರ್‌ ಅನ್ನು ಕೂಡ ತಿನ್ನುತ್ತಿದ್ದಾಳೆ. ಆದರೆ, ಈಗ ತಾನು ಪೌಡರ್ ತಿನ್ನುವ ಚಟವನ್ನು ಮಕ್ಕಳು ಕೂಡ ಎಲ್ಲಿ ಅನುಕರಣೆ ಮಾಡಿಬಿಡುತ್ತಾರೋ ಎನ್ನುವ ಭಯದಿಂದ ಪೌಡರ್ ತಿನ್ನುವುದನ್ನು ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಇಂಗ್ಲೆಂಡಿನ ಲಿಸಾ ಆಂಡರ್ಸನ್ 20 ವರ್ಷದಿಂದ ಪೌಡರ್ ಸೇವನೆ: ಇನ್ನು ಇಂಗ್ಲೆಂಡ್‌ನ ಮಹಿಳೆ ಲಿಸಾ ಆಂಡರ್ಸನ್ ಎನ್ನುವ 44 ವರ್ಷದ ಐದು ಮಕ್ಕಳ ತಾಯಿಯು ಕೂಡ ಜಾನ್ಸನ್ ಬೇಬಿ ಪೌಡರ್ ತಿನ್ನುತ್ತಾ 19 ವರ್ಷ ಜೀವನ ಮಾಡಿದ್ದಾಳೆ. ಈಕೆ 2004ರಲ್ಲಿ ತನ್ನ ಮಗನಿಗೆ ಸ್ನಾನದ ನಂತರ ಹಚ್ಚುತ್ತಿದ್ದ ಜಾನ್ಸನ್‌ನ ಬೇಬಿ ಪೌಡರ್‌ ಅನ್ನು ತಿಂದು ರುಚಿ ನೋಡಿದಳು. ಮೊದಲು ಪೌಡರ್ ಬಾಟಲಿಯಿಂದ ಹೊರಬಂದ ಸ್ವಲ್ಪ ಧೂಳಿನ ರುಚಿ ಸೇವನೆ ಮಾಡುತ್ತಾ ಪೌಡರ್‌ಗೆ ಬಾಯಿ ಹಾಕಿ ತಿನ್ನಲು ಆರಂಭಿಸಿದ್ದಾಳೆ.  ನಂತರ ಇದನ್ನು ಒಂದು ಚಟವನ್ನಾಗಿ ಬೆಳೆಸಿಕೊಂಡು ಬಾಟಲಿಗಟ್ಟಲೆ ಪೌಡರ್ ತಿಂದು ಮುಗಿಸುತ್ತಾಳೆ. ಈಗ ಆಕೆ ತನ್ನ ಕೈಗೆ ಹಾಕಿಕೊಂಡು ಪೌಡರ್‌ ಅನ್ನು ನೆಕ್ಕುತ್ತಿದ್ದಾಳೆ. ಇನ್ನು ಈಕೆ ಬೇಬಿ ಪೌಡರ್ ತಿನ್ನುವುದಕ್ಕಾಗಿಯೇ ವಾರ್ಷಿಕ ಸುಮಾರು $10,500 (8.74 ಲಕ್ಷ ರೂ.)  ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಿದ್ದಾರೆ.

ದೇವೇಗೌಡ್ರ ಫ್ಯಾಮಿಲಿ ಮೋದಿ ಭೇಟಿಯಾಗ್ತಿದ್ದಂತೆ ಜೆಡಿಎಸ್‌ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಎಂ ಇಬ್ರಾಹಿಂ!

ಆದರೆ, ಈ ಚಟದಿಂದ ಹೊರಗೆ ಬರಲು ಸಾಧ್ಯವಾಗದ ಆಕೆ ಮನೆಗೆ ಮಿಂಟ್ ವಸ್ತುಗಳು ಹಾಗೂ ಪುದೀನಾ ಸೊಪ್ಪು ಸೇರಿ ಇತ್ಯಾದಿ ವಸ್ತುಗಳನ್ನು ತಿನ್ನುತ್ತಿದ್ದಾಳೆ. ನ್ಯಾಷನಲ್ ಈಟಿಂಗ್ ಡಿಸಾರ್ಡರ್ ಅಸೋಸಿಯೇಷನ್ ವೈದ್ಯರನ್ನು ಸಂಪರ್ಕ ಮಾಡಿದಾಗ 'ಪ್ರಕಾರ ಕೂದಲು, ಕೊಳಕು ಅಥವಾ ಪೇಂಟ್ ಚಿಪ್ಸ್‌ನಂತಹ ಪೋಷಕಾಂಶಗಳಿಲ್ಲದ ವಸ್ತುಗಳನ್ನು ತಿನ್ನುವ ಮೂಲಕ ಗುಣಲಕ್ಷಣಗಳನ್ನು ಹೊಂದಿರುವುದನ್ನು 'ಪಿಕಾ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ. ಇದೇ ರೀತಿಯ ಕಾಯಿಲೆಯನ್ನು ಲಿಸಾ ಆಂಡರ್ಸನ್ ಕೂಡ ಹೊಂದಿದ್ದಾರೆ ಎಂದು ವೈದ್ಯರು ಹೇಳಿದರು. ಈಗ ಆಂಡರ್ಸನ್ ಸಹ ಒಸಿಡಿ ಮತ್ತು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ. ಇನ್ನು ಟಾಲ್ಕಮ್ ಪೌಡರ್ ಸೇವನೆಯಿಂದ ಅದರಲ್ಲಿರುವ ಮೆಗ್ನೀಸಿಯಮ್ ಮತ್ತು ಸಿಲಿಕಾನ್‌ನಂತಹ ವಸ್ತುಗಳು ದೇಹವನ್ನು ಸೇರಿ ವಿಷ, ಅತಿಸಾರ ಮತ್ತು ಶ್ವಾಸಕೋಶದ ವೈಫಲ್ಯ ಮತ್ತು ಸೆಳೆತಕ್ಕೆ ಕಾರಣವಾಗಬಹುದು ಎಂದು US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಮಾಡಿದೆ.

click me!