‘ಸಖತ್ತಾಗಿ ಬಿರಿಯಾನಿ ಮಾಡ್ತೀನಿ. ಅದು ತಣ್ಣಗಾಗಿದ್ರೂ ಫ್ರೆಂಡ್ಸ್ ಎಲ್ಲ ಕಿತ್ತಾಡ್ಕೊಂಡು ತಿನ್ತಾರೆ’ ಅನ್ನೋ ಹುಮಾ ಖುರೇಶಿ ಕಾಫಿ ಪ್ರಿಯೆ. ಇತ್ತೀಚೆಗೆ ಫೆಮಿನಾಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಡಯೆಟ್ ಹಾಗೂ ಫಿಟ್‌ನೆಸ್ ಬಗ್ಗೆ ಹೇಳ್ಕೊಂಡಿದ್ದಾರೆ.
ಒಳ್ಳೆ ಆಹಾರ ಇದ್ದಾಗ ಸಣ್ಣಗಾಗೋದರ ಬಗ್ಗೆ ಚಿಂತೆ ಬೇಡ!
‘ಬದುಕೋಕೆ ಬೇಕಾದಷ್ಟು ಅಡುಗೆ ಗೊತ್ತಿದೆ. ನಾನು ಮಾಡೋ ಬಿರಿಯಾನಿ ಎಲ್ಲರ ಫೇವರೆಟ್’ ಅನ್ನುವ ಹ್ಯೂಮಾ ಖುರೇಷಿ ಊಟ, ತಿಂಡಿ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಏನಲ್ಲ. ಅದಕ್ಕೆ ತುಸು ಗುಂಡಗಿದ್ದಾರೆ. ತೆಳ್ಳಗಿರೋದಕ್ಕಿಂತ ಆರೋಗ್ಯವಾಗಿರೋದೆ ಮುಖ್ಯ ಅನ್ನೋದು ಇವರ ಬಲವಾದ ನಂಬಿಕೆ. ಬೆಳಗ್ಗೆ ಎಗ್ ವೈಟ್ ಹಾಗೂ ಹಣ್ಣು, ಮಧ್ಯಾಹ್ನ ರಾತ್ರಿ ಚಿಕನ್ ಹಾಗೂ ಫಿಶ್
ತಿನ್ನೋ ಖಯಾಲಿ. ಸಮ್ಮರ್‌ನಲ್ಲಿ ದಿನವಿಡೀ ತರಕಾರಿ, ಹಣ್ಣಿನ ಜ್ಯೂಸ್ ಕುಡಿಯೋದು ಅಭ್ಯಾಸ.
Tap to resizeLatest Videos
ಸಕ್ಕರೆ, ಸಂಸ್ಕರಿಸಿದ ಆಹಾರದಿಂದ ದೂರವಿರಿ. ಫಿಟ್‌ನೆಸ್‌ಗೆ ಸಕ್ಕರೆಯಷ್ಟು ದೊಡ್ಡ ಶತ್ರು ಇನ್ನೊಂದಿಲ್ಲ. ಮಕ್ಕಳಿಗೂ ಸಕ್ಕರೆ ಅಭ್ಯಾಸ ಮಾಡಿಸಬೇಡಿ. ನೀವೂ ತಿನ್ನಬೇಡಿ.
ವರ್ಕೌಟ್ ಹೇಗಿರುತ್ತೆ?
ಸ್ವಲ್ಪ ದಪ್ಪಗಾಗಿರೋ ಕಾರಣ ಈಗ ಫಿಟ್‌ನೆಸ್ ಟ್ರೈನರ್ ರಾಕೇಶ್ ಜೊತೆಗೆ ವೈಟ್ ಟ್ರೈನಿಂಗ್ ಪಡೀತಿದ್ದಾರೆ. ಇದರ ಜೊತೆಗೆ ಕಾರ್ಡಿಯೋ ಎಕ್ಸರ್‌ಸೈಸ್ ಮಾಡ್ತಾರೆ. ‘ಹೆಚ್ಚಿನ ಹುಡುಗೀರು ತೋಳು ದಪ್ಪಗಾಗುತ್ತೆ ಅನ್ನೋ ಕಾರಣಕ್ಕೆ ವೈಟ್ ಎಕ್ಸರ್‌ಸೈಸ್ ಮಾಡಲ್ಲ. ಆದರೆ ಇಂಥ ನಂಬಿಕೆಗಳಿಗೆಲ್ಲ ಅರ್ಥ ಇಲ್ಲ. ನಾನಂತೂ ನಿತ್ಯ ವೈಟ್ ಎತ್ತಿ ಇಳಿಸ್ತೀನಿ’ ಅಂತಾರೆ.