
ಬೀಜಿಂಗ್(ಮಾ.21): ಬಹುಶಃ ಜಗತ್ತಿನಲ್ಲಿ ಟಿಷ್ಯೂ ಪೇಪರ್, ಟಾಯ್ಲೆಟ್ ಪೇಪರ್ ಕದ್ದುಕೊಂಡು ಹೋಗುವ ಪ್ರಕರಣಗಳು ಸಾಮಾನ್ಯ, ಯಾವ ದೇಶವೂ ಇದರಿಂದ ಹೊರತಾಗಿಲ್ಲ. ಸದ್ಯ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚೀನಾ ಟಾಯ್ಲೆಟ್'ನಲ್ಲೇ ರಹಸ್ಯ ಕ್ಯಾಮರಾಗಳನ್ನು ಅಳವಿಡಿಸಿದೆ. ಒಂದು ವೇಳೆ ವ್ಯಕ್ತಿಯೊಬ್ಬನಿಗೆ ಟಾಯ್ಲೆಟ್ ಬೇಕಾದಲ್ಲಿ ಆತ ಕ್ಯಾಮರಾ ಎದುರಿನಿಂದಲೇ ತೆರಳಬೇಕಾಗುತ್ತದೆ. ಇಂತಹ ವ್ಯವಸ್ಥೆಯನ್ನು ಅಲ್ಲಿನ ಟಾಯ್ಲೆಟ್'ಗಳಲ್ಲಿ ಮಾಡಲಾಗಿದೆ.
ಕ್ಯಾಮರಾಗೆ ಅಳವಡಿಸಲಾಗಿರುವ ಮಷೀನ್ ವ್ಯಕ್ತಿಯ ಮುಖವನ್ನು ಗುರುತಿಸಿ ಬಳಿಕ ಪೇಪರ್ ಮಷೀನ್'ಗೆ ಪೇಪರ್ ರಿಲೀಸ್ ಮಾಡಲು ಕಮಾಂಡ್ ನೀಡುತ್ತದೆ. ಇನ್ನು ಆ ವ್ಯಕ್ತಿ ಮತ್ತೊಮ್ಮೆ ಪೇಪರ್ ಪಡೆಯಲು ಪ್ರಯತ್ನಿಸಿದರೆ ಪೇಪರ್ ಸಿಗುವುದಿಲ್ಲ. ಇನ್ನು ಮುಖವನ್ನು ಗುರುತಿಸಿಕೊಳ್ಳಲು ಮಷೀನ್ ಕೇವಲ ಮೂರು ನಿಮಿಷ ತೆಗೆದುಕೊಳ್ಳುತ್ತದಂತೆ.
ಇತ್ತೀಚೆಗಷ್ಟೇ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ಬಳಸಲು ಸಾರ್ವಜನಿಕ ಶೌಚಾಲಯಗಳಿಂದ ಟಾಯ್ಲೆಟ್ ಪೇಪರ್ ರೋಲ್'ಗಳನ್ನು ಕದ್ದೊಯ್ಯುತ್ತಿದ್ದರಂತೆ. ಈ ಕುರಿತಾಗಿ ಪರಿಶೀಲನೆ ನಡೆಸಿದಾಗ ಹಿರಿಯ ನಾಗರಿಕರೇ ಇಂತಹ ಕೆಲಸ ಮಾಡುತ್ತಿದ್ದರಂತೆ. ಇದರಿಂದ ಮ್ಯಾನೇಜರ್'ಗಳಿಗೆ ಕಷ್ಟವಾಗುತ್ತಿದ್ದು, ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದೀಗ ರಹಸ್ಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕೃಪೆ: NDTv
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.