ಸ್ಥಿರ ಅರೋಗ್ಯಕ್ಕೆ ಅರಿಶಿನ ಟೀ!

By Web Desk  |  First Published May 4, 2019, 1:51 PM IST

ಅರಿಶಿನ ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಎಲ್ಲರಿಗೂ ಗೊತ್ತು. ಆದರೆ ಅರಿಶಿನ ಟೀ ಮಾಡುವುದು ಹೇಗೆ, ಅದರ ಪ್ರಯೋಜನಗಳೇನು ಗೊತ್ತಾ?
 


ಅರಿಶಿನ ಟೀ ಮಾಡೋದು ತುಂಬಾ ಸಿಂಪಲ್. ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಅದಕ್ಕೆ ಎರಡು ಚಮಚ ಅರಿಶಿನ, ಸಣ್ಣ ಶುಂಠಿ ಚೂರನ್ನು ಸೇರಿಸಿ. 10-15 ನಿಮಿಷ ಮುಚ್ಚಿಟ್ಟು ಕುದಿಸಿ. ಇದಕ್ಕೆ ಲವಂಗ, ಕರಿಮೆಣಸು, ವೆನಿಲ್ಲ ಹಾಗೂ ಜೇನುತುಪ್ಪ ಸೇರಿಸಿ. ಇದಕ್ಕೆ ಕಾಯಿಹಾಲು ಹಾಕಿ ಎತ್ತಿ ಹೊಯ್ದರೆ ಅರಿಶಿನದ ಟೀ ರೆಡಿ. 

ಅರಿಶಿನ ಸೇವನೆ ಹೆಚ್ಚಿದರೆ ಆರೋಗ್ಯಕ್ಕೆ ಅಪಾಯ!

Tap to resize

Latest Videos

ಅರಿಶಿನ ಟೀಯನ್ನು ಪ್ರತಿದಿನ ಕುಡಿಯುವುದರಿಂದ ಹಲವಾರು ಲಾಭಗಳಿವೆ:

  • ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ರಕ್ತ ಶುದ್ದೀಕರಣ ಮಾಡುತ್ತದೆ.
  • ಕೆಮ್ಮು ಹಾಗೂ ಶೀತದ ಲಕ್ಷಣಗಳಿಗೆ ಆರಂಭದಲ್ಲೇ ಕಡಿವಾಣ ಹಾಕುತ್ತದೆ.
  • ಚರ್ಮದ ಸಮಸ್ಯೆಗಳನ್ನು ನೀಗಿಸುತ್ತದೆ.
  • ಆಂತರಿಕ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
  • ತುರಿಕೆ, ಉರಿಯಂಥ ಕಿರಿಕಿರಿಗಳಿಂದ ಮುಕ್ತಿ ನೀಡುತ್ತದೆ.
  • ಕೆಟ್ಟ ಕೊಬ್ಬನ್ನು ತಗ್ಗಿಸುತ್ತದೆ. 
  • ಬೈಲ್ ಜ್ಯೂಸ್ ಬಿಡುಗಡೆ ಹೆಚ್ಚಿಸುತ್ತದೆ.
click me!