ಬ್ರೇಕಪ್ ಬಳಿಕ ಮಾಡಬಾರದ 9 ಕೆಲಸಗಳು

By Web Desk  |  First Published May 1, 2019, 11:51 AM IST

ಅಯ್ಯೋ, ಬ್ರೇಕ್ ಅಪ್ ಆಯಿತು ಎಂದ ಕೂಡಲೇ ಆಕಾಶವೇ ತಲೆ ಮೇಲೆ ಬಿತ್ತು ಎಂದು ಚಿಂತಿಸುವ ಬದಲು ಹೊಸ ಜೀವನವನ್ನು ಕಟ್ಟಿಕೊಳ್ಳಲು ಯತ್ನಿಸಿ. ಕೀಳಿರಿಮೆ ಬಿಟ್ಹಾಕಿ. ಗಟ್ಟಿತನವನ್ನು ಬೆಳೆಯಿಸಿಕೊಂಡು, ಛೇ ಇಂಥ ಹುಡಿಗಿಯನ್ನು ಬಿಟ್ಟೆ ಎಂದು ಹುಡುಗ ಯೋಚಿಸುವಂತೆ ಬದುಕಿ ತೋರಿಸಿ...


ಅವನು ಕೈಕೊಟ್ಟಾಯಿತು. ಅತ್ತು ಕರೆದು, ಗೋಗರೆದು, ಬೆದರಿಸಿ, ಅವನು ಕೊಟ್ಟ ಗಿಫ್ಟ್‌ಗಳನ್ನೆಲ್ಲ ಎಸೆದು, ದುಃಖದಲ್ಲಿ ಮನಸೋ ಇಚ್ಚೆ ತಿಂದು, ಮತ್ತೊಂದಷ್ಟು ದಿನ ಉಪವಾಸ ಬಿದ್ದು ಎಲ್ಲ ರೀತಿಯ ಹುಚ್ಚುತನಗಳನ್ನು ಮೆರೆಯುತ್ತೇವೆ.  ಆದರೆ, ನಿಜಕ್ಕೂ ಮಾಡಬೇಕಿರುವುದು ಇದಾವುದೂ ಅಲ್ಲ. ಹುಡುಗ ಉರಿದುಕೊಂಡು ಎಂಥ ಹುಡುಗಿಯನ್ನು ಕಳೆದುಕೊಂಡೆನಲ್ಲಪ್ಪಾ ಅಂಥ ಗೋಳಾಡಬೇಕು. ಹಾಗೆ ನಮ್ಮ ವ್ಯಕ್ತಿತ್ವ ಗಟ್ಟಿಗೊಳಿಸಕೊಳ್ಳಬೇಕು. ಬ್ರೇಕಪ್ ಆದಾಗ ಮಾಡಬಾರದ ಮತ್ತೊಂದಷ್ಟು ಹುಚ್ಚು ಕೆಲಸಗಳಿವೆ. ಅವು ಯಾವುದೆಂದು ಹೇಳುತ್ತೇನೆ ಕೇಳಿ.

Latest Videos

- ಮತ್ತೊಬ್ಬನ ಸ್ನೇಹ ಮಾಡಬೇಡಿ.
ನಿಮ್ಮನ್ನು ತೊರೆದ ಹುಡುಗನಿಗೆ ಉರಿಸಬೇಕೆಂದು ತಕ್ಷಣವೇ ಇನ್ಯಾರೋ ಹುಡುಗನೊಡನೆ ಸುತ್ತಬೇಡಿ. ಪ್ರೀತಿಯಿಲ್ಲದೆ ಸುಮ್ಮನೆ ತೋರಿಕೆಗೆ ಕಟ್ಟಿಕೊಳ್ಳುವ ಸಂಬಂಧದಿಂದ ಭವಿಷ್ಯ ಬಾಣಲೆಯಿಂದ ಬೆಂಕಿಗೆ ಹಾರಿದಂತಾದೀತು. ಎಚ್ಚರ.
- ಪತ್ತೇದಾರಿ ಕೆಲಸ ಬೇಡ
ಪದೇ ಪದೆ ಕೈ ಕೊಟ್ಟ ಪ್ರೇಮಿಯ ಫೇಸ್ಬುಕ್, ಇನ್ಸ್ಟಾ ಪ್ರೊಫೈಲ್ ಕೆದಕುವುದು, ಆತ ಯಾವೆಲ್ಲ ಹುಡುಗಿಯರ ಫೋಟೋಗೆ ಲೈಕ್ ಮಾಡಿದ್ದಾನೆಂದು ಹುಡುಕುವುದು, ವಾಟ್ಸಾಪ್ ಡಿಪಿ, ಸ್ಟೇಟಸ್ ಚೆಕ್ ಮಾಡುವುದು, ಆತನ ಮನೆ ಬಳಿ ಹೋಗಿ ಚಲನವಲನ ಗಮನಿಸೋದು - ಇಂಥ ಚೀಪ್ ಥ್ರಿಲ್ಸ್‌ನಿಂದ ದೂರವಿರಿ. 
- ಕುಡಿತದಿಂದ ಏನೂ ಸಾಧಿಸಿದಂತಾಗಲ್ಲ
ಭವಿಷ್ಯನೇ ಮುಗಿದು ಹೋಯ್ತು ಎಂಬಂತೆ ಕುಡಿತದ ಹಾದಿ ತುಳಿಯೋದರಿಂದ ನಿಮಗಾಗಲೀ ನಿಮ್ಮಿಂದ ದೂರ ಆದವನಿಗಾಗಲೀ ಏನೂ ಉಪಯೋಗವಿಲ್ಲ. 
- ಬ್ಲ್ಯಾಕ್‌ಮೇಲ್ ಅಥವಾ ಸೇಡು ಸರಿಯಲ್ಲ
ನಿಮಗೆ ಅವನ ಸೀಕ್ರೆಟ್ಸ್‌ಗಳೆಲ್ಲ ಗೊತ್ತು. ತಂದೆತಾಯಿಗೆ ಸುಳ್ಳು ಹೇಳಿ ನಿಮ್ಮೊಂದಿಗೆ ತಿರುಗುತ್ತಿದ್ದ. ಈಗ ಸೇಡು ಸುಡುಗಾಡು ಎಂದುಕೊಂಡು ಅವನ ಮನೆಗೆ ಹೋಗಿ ಎಲ್ಲವನ್ನೂ ಹೇಳಿ ವಿಕೃತ ಖುಷಿ ಪಡುವ ಅಗತ್ಯವಿಲ್ಲ. ಇಷ್ಟಕ್ಕೂ ನಿಮ್ಮ ಸೀಕ್ರೆಟ್ಸ್‌ಗಳೂ ಅವನಿಗೆ ಗೊತ್ತಿರುತ್ತದೆ ಎಂಬುದನ್ನು ಮರೆಯಬೇಡಿ. 
- ಅವಸರದಲ್ಲಿ ರಿವೆಂಜ್ ಟ್ಯಾಟೂ ಹಾಕಿಸಿಕೊಳ್ಳಬೇಡಿ.
ಏನೋ ಹುಚ್ಚುಚ್ಚಾಗಿ ಆಡೋದ್ರಿಂದ ತಾತ್ಕಾಲಿಕ ಖುಷಿ ಸಿಗಬಹುದು. ಆದರೆ, ರಿವೆಂಜ್ ಟ್ಯಾಟೂ ಹಾಕಿಸಿಕೊಂಡಿರಾದರೆ, ಜೀವನಪೂರ್ತಿ ಆ ಟ್ಯಾಟೂ ನಿಮಗೆ ನಿಮ್ಮ ಕೆಟ್ಟ ನಿರ್ಧಾರವೊಂದನ್ನು ಪದೆ ಪದೆ ನೆನಪಿಸುತ್ತಲೇ ಇರುತ್ತದೆ.
- ಎಲ್ಲ ಕಳೆದುಕೊಂಡವರಂತೆ ಆಡೋ ಅಗತ್ಯವಿಲ್ಲ
ನೋಡಲು, ಹೊಗಳಲು ಅವನಿಲ್ಲ ಎಂದು ಮೇಕಪ್, ಹೇರ್‌ಸ್ಟೈಲ್, ಫೇಷಿಯಲ್ ಇತ್ಯಾದಿ ಸೆಲ್ಫ್ ಕೇರ್ ಸಂಗತಿಗಳನ್ನು ಮರೆಯಬೇಡಿ. ಮುಂಚಿಗಿಂತ ಹೆಚ್ಚು ಚೆನ್ನಾಗಿ ನಿಮ್ಮ ಆರೋಗ್ಯ, ಅಂದದ ಆರೈಕೆಗೆ ಗಮನ ವಹಿಸಿ.
- ಸ್ಯಾಡ್ ಸಾಂಗ್ಸ್‌ನಿಂದ ದೂರವಿರಿ
ಬ್ರೇಕಪ್ ಬಳಿಕ ಸ್ಯಾಡ್ ಸಾಂಗ್ಸ್ ಕೇಳುತ್ತಾ, ದುರಂತ ನಾಯಕಿ ಫೀಲಿಂಗ್‌ನಲ್ಲಿ ಒದ್ದಾಡುವುದನ್ನು ಬಿಟ್ಟುಬಿಡಿ. ಆದಷ್ಟು ಜಾಲಿ ಹಾಡುಗಳನ್ನು ಕೇಳಿ ಮತ್ತು ಕನಸು ಕಾಣುವುದನ್ನು ಮುಂದುವರಿಸಿ. 
- ಟಾಂಟ್ ಕೊಟೋ ಸ್ಟೇಟಸ್ ಬೇಡ
ವಾಟ್ಸಾಪ್ ಹಾಗೂ ಫೇಸ್ಬುಕ್‌ಗಳಲ್ಲಿ ಚಿತ್ರವಿಚಿತ್ರ ಸ್ಟೇಟಸ್ ಹಾಕಿ ನಿಮ್ಮ ಸ್ಟೇಟಸ್ ಇಳಿಸಿಕೊಳ್ಳಬೇಡಿ.
- ಅವನಿಗೆ ಮೆಸೇಜ್ ಮಾಡಬೇಡಿ
ಫುಲ್ ಫೀಲಿಂಗಲ್ಲಿ ಅವನಿಗೆ ಮಿಸ್ ಯೂ ಮೆಸೇಜ್ ಹಾಕಿ ನಂತರ ರಿಪ್ಲೈ ಬರಲಿಲ್ಲ ಎಂದು ಒದ್ದಾಡಬೇಡಿ. ಬರ್ತ್‌ಡೇ ವಿಷಸ್ ಕೂಡಾ ಬೇಡ. ನಿಮ್ಮನ್ನು ಅವನಿನ್ನೂ ನೆನೆಸಿಕೊಳ್ಳುತ್ತಾನಾ ಎಂದು ತಿಳಿದುಕೊಳ್ಳುವ ಗಿಮಿಕ್‌ಗಳಿಂದ ದೂರವಿರಿ. 
 

click me!