ಮೂಲವ್ಯಾಧಿಗೆ ಮದ್ದಾಗುವ ಮೂಲಂಗಿ ಮತ್ಯಾವುದಕ್ಕೆ ಮದ್ದು?

By Web Desk  |  First Published Sep 6, 2018, 11:27 AM IST

ದೈನಂದಿಗ ಅಡುಗೆಗೆ ಬಳಸುವ ಹಲವು ತರಕಾರಿಗಳು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಯಾವುದು ಅನಾರೋಗ್ಯಕ್ಕೆ ಮದ್ದಾಗಬಲ್ಲದೋ, ಅವನ್ನು ಹೆಚ್ಚಿಗೆ ಬಳಸಬೇಕು. ಮೂಲಂಗಿ ಹೇಗೆ ಮನೆ ಮದ್ದಾಗಬಲ್ಲದು, ಓದಿ...


ಮೂಲಂಗಿ ಸೇವನೆಯಿಂದ ಕೆಮ್ಮು, ಶೀತದಿಂದ ಹಿಡಿದು ಕ್ಯಾನ್ಸರ್, ಕಾಮಾಲೆ ರೋಗವೂ ನಿವಾರಣೆಯಾಗುತ್ತದೆ. ಇದಲ್ಲದೆ ಇಂಥ ಇನ್ನೂ ಹತ್ತು ಹಲವು ರೋಗಗಳನ್ನು ನಿವಾರಿಸುವಲ್ಲಿ ಈ ತರಕಾರಿ ಸಹಕರಿಸುತ್ತದೆ. ಪ್ರತಿ ದಿನ ಮೂಲಂಗಿಯನ್ನು ಉಪಯೋಗಿಸುತ್ತಿದ್ದರೆ ಅದರ ಪ್ರಯೋಜನ ಅರಿವಿಗೆ ಬರುತ್ತದೆ. 

- ಮೂಲಂಗಿ ಬೀಜವನ್ನು ನೀರಿನಲ್ಲಿ ನೆನೆಸಿ, ಅರೆದು ದಿನಕ್ಕೆ ಮೂರು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ಧಿಸುತ್ತದೆ. 
- ಇದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
- ಹಸಿ ಮೂಲಂಗಿಗೆ ಸ್ವಲ್ಪ ಉಪ್ಪು , ಕಾಳು ಮೆಣಸು ಮತ್ತು ನಿಂಬೆರಸ ಸೇರಿಸಿ,  ಊಟವಾದ ನಂತರ ಸೇವಿಸಿದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. 
- ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸುವುದು ಉತ್ತಮ. 
- ಮೂಲಂಗಿಯನ್ನು ಯಥೇಚ್ಛವಾಗಿ ಸೇವಿಸಿದರೆ ಕ್ಯಾನ್ಸರ್, ಕಾಮಾಲೆ ರೋಗವನ್ನೂ ತಡೆಯಬಹುದು. 
- ಒಂದು ಚಮಚ ಜೇನು ತುಪ್ಪಕ್ಕೆ, ಒಂದು ಚಮಚ ಮೂಲಂಗಿ ರಸ ಸೇರಿಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. 
- ಮೂಲಂಗಿ ಮತ್ತು ಉಪ್ಪು ಅರೆದು ಚೇಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಮಾಯವಾಗುತ್ತದೆ. 
- ಕೆಂಪು ಮೂಲಂಗಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. 
- ಮೂಲಂಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನರವ್ಯೂಹ ಬಲಗೊಳ್ಳಲು ಸಹಕರಿಸುತ್ತದೆ. 

ಮನೆ ಮದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

click me!