ಪ್ರೀತಿ ಮಾಡಿ ತಪ್ಪೇನಿಲ್ಲ; ಆದರೆ ಈ 7 ಸಂಗತಿ ನಿಮಗೆ ಗೊತ್ತಿರಲಿ

By Web Desk  |  First Published Jul 10, 2019, 4:51 PM IST

ಪ್ರೀತಿ ಎಂದರೆ ಒಳಗೊಳ್ಳುವಿಕೆ. ನಾನು, ನನ್ನದು ಎನ್ನುವಷ್ಟಕ್ಕೇ ಸೀಮಿತವಾದ ಕನಸು, ಕಲ್ಪನೆಗಳನ್ನು ವಿಸ್ತರಿಸಿ ಪ್ರಿಯವೆನಿಸುವ ಇನ್ನೊಂದು ಮನಸ್ಸಿನೊಡನೆ ಬೆಸೆದುಕೊಂಡು ನಾನು ಎನ್ನುವುದು ನಾವು ಎಂದಾಗುವ ಅನುಭೂತಿ. ಅದೊಂದು ಅಪ್ಯಾಯಮಾನವಾದ ಚೆಂದದ ಬಂಧ.


ಪ್ರೀತಿ ಎಂದರೆ ಒಳಗೊಳ್ಳುವಿಕೆ. ನಾನು, ನನ್ನದು ಎನ್ನುವಷ್ಟಕ್ಕೇ ಸೀಮಿತವಾದ ಕನಸು, ಕಲ್ಪನೆಗಳನ್ನು ವಿಸ್ತರಿಸಿ ಪ್ರಿಯವೆನಿಸುವ ಇನ್ನೊಂದು ಮನಸ್ಸಿನೊಡನೆ ಬೆಸೆದುಕೊಂಡು ನಾನು ಎನ್ನುವುದು ನಾವು ಎಂದಾಗುವ ಅನುಭೂತಿ. ಅದೊಂದು ಅಪ್ಯಾಯಮಾನವಾದ ಚೆಂದದ ಬಂಧ. ಆದರೆ ಉತ್ಕಟವಾಗಿ ಪ್ರೀತಿಸುತ್ತಿದ್ದೇನೆ ಎಂದೇ ಭಾವಿಸಿಕೊಂಡು ಪ್ರೀತಿಪಾತ್ರರ ಇಷ್ಟಗಳನ್ನು ಸಂಪೂರ್ಣ ಕಡೆಗಣಿಸುತ್ತಾ ಅವರ ಬಟ್ಟೆಯ ಬಣ್ಣ, ತಿನಿಸಿನ ಆಯ್ಕೆಯಿಂದ ಹಿಡಿದು ಮಹತ್ವದ ನಿರ್ಧಾರಗಳನ್ನೆಲ್ಲ ತಾನೇ ಕೈಗೊಳ್ಳುತ್ತಾ, ತನ್ನ ನಿರ್ಣಯಗಳನ್ನೇ ಹೇರುತ್ತಾ ಉಸಿರುಗಟ್ಟುವಂತೆ ಆವರಿಸಿಕೊಂಡು ಬಿಡುವುದು ಬಂಧನವಾಗವುದೇ ಹೊರತು ಬಂಧದ ಸವಿಯಾಗಲಿ, ಗಟ್ಟಿತನವಾಗಲೀ ಅಲ್ಲಿರಲಾಗದು.

ಡೇಟಿಂಗ್ ಹೋದಾಗಲೂ ಮಾತನಾಡದಿದ್ದರೆ ಹೇಗೆ?

Latest Videos

ಮೌಲ್ಯ ಅಡಿಪಾಯವಾಗಲಿ

ಇಬ್ಬರೂ ಒಂದೇ ತೆರನಾದ ಮೌಲ್ಯಗಳನ್ನು ಅಳವಡಿಸಿಕೊಂಡು ಅದನ್ನು ಸಂಬಂಧದ ಅಡಿಪಾಯವಾಗಿಸಿಕೊಳ್ಳುವುದು ಅವಶ್ಯಕ. ಪರಸ್ಪರ ಪ್ರೀತಿ, ಗೌರವ, ಪ್ರಾಮಾಣಿಕತೆ, ಸ್ನೇಹ, ಸಲುಗೆ, ಕಾಳಜಿ ಬಂಧವನ್ನು ಬಿಗಿಯಾಗಿ, ಆಪ್ಯಾಯಮಾನವಾಗಿಸಬಲ್ಲದು. ಬಾಂಧವ್ಯದ ಆಳಕ್ಕಿಳಿಯದೇ ಬರಿಯ ತೋರಿಕೆಗೆ ಸೀಮಿತವಾದ ಸಂಬಂಧಗಳು ಬಿಗುವಿನ ವಾತಾವರಣವನ್ನು ಇಬ್ಬರ ನಡುವೆ ಸೃಷ್ಟಿಸಿ ತಾನು ಶಿಥಿಲಗೊಳ್ಳುತ್ತಾ ಸವೆಯುವುದು.

ಪರಸ್ಪರ ಗೌರವ

ತನ್ನವರನ್ನು ಗೌರವಿಸುವುದೆಂದರೆ ಬರಿಯ ಗೌರವಯುತ ಸಂಭೋದನೆಗಳನ್ನು ಮಾಡುವುದಲ್ಲ. ಪ್ರೀತಿಪಾತ್ರರ ಆಯ್ಕೆಗಳನ್ನು ಮಾನ್ಯ ಮಾಡುತ್ತಾ, ಸಮ್ಮತವಲ್ಲದ್ದನ್ನು ನಯವಾಗಿ ಸಂವಹಿಸುತ್ತಾ, ಒಪ್ಪಿಗೆಯೆನಿಸಿದ ನಿರ್ಧಾರಗಳಿಗೆ ಮೆಚ್ಚುಗೆ ಸೂಚಿಸುತ್ತಾ ಮಾತು- ಮೌನಗಳ ಮೂಲಕ ತನ್ನ ಜೀವನದಲ್ಲಿ ಆ ವ್ಯಕ್ತಿಗಿರುವ ಮಹತ್ವವನ್ನು ವ್ಯಕ್ತಪಡಿಸುತ್ತಾ ಒಬ್ಬರು ಇನ್ನೊಬ್ಬರ ಆನಂದಕ್ಕೆ
ಕಾರಣರಾಗುವುದು.

ಮಗು ಹುಟ್ಟಿದ್ರೆ ಫ್ರೆಂಡ್ಸ್ ದೂರವಾಗ್ತಾರಾ?

ಉಸಿರುಗಟ್ಟಿಸುವ ಬಂಧ

ಪ್ರೀತಿ ಎಂಬ ಪರಿಶುದ್ಧ ಭಾವದಿಂದ ಒಬ್ಬರನ್ನೊಬ್ಬರು ಆವರಿಸಿಕೊಳ್ಳುವುದಕ್ಕೂ ಪ್ರೀತಿಯನ್ನೇ ನೆಪವಾಗಿಸಿ ಕೊಂಡು ಸ್ವಾರ್ಥ ಭಾವದಿಂದ ಆವರಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಪ್ರೀತಿಯ ಶುದ್ಧತೆಯಿಂದ ಆವರಿಸಿಕೊಂಡಾಗ ನಮ್ಮ ನಡುವಲ್ಲಿರುವ ವ್ಯತ್ಯಯಗಳು ಬಾಧಿಸದು. ಅಲ್ಲಿ ಪ್ರೀತಿ ಮುಖ್ಯವಾಗಿಯೂ, ನಾನು ಎಂಬುದು ಗೌಣವಾಗಿರುತ್ತದೆ. ಅದೇ ಪ್ರೀತಿಯೇ ನೆಪವಾಗಿ ಆವರಿಸಿಕೊಂಡಾಗ ನಾನು, ನನ್ನದು, ಹೇಳಿದ್ದು ಕೇಳಬೇಕು ಎಂಬ ಸ್ವಾರ್ಥ ತುಂಬಿ ಉಸಿರುಗಟ್ಟಿಸುತ್ತದೆ. ಹೀಗೆ ಆವರಿಸಿಕೊಂಡಿದ್ದು ಪ್ರೀತಿಯಲ್ಲ. ಪ್ರೀತಿಯ ಹೆಸರಿನ ಬಂಧನ.

ತನಗಷ್ಟೇ ಗೊತ್ತು

ಎಲ್ಲಾ ವಿಚಾರಗಳಲ್ಲಿ ಎಲ್ಲರಿಗೂ ಪರಿಣತಿ ಇರದು. ಎಷ್ಟೋ ವಿಷಯಗಳಲ್ಲಿ ತನ್ನ ಸಂಗಾತಿಗಿಂತ ತನ್ನ ಆಯ್ಕೆಗಳು ಉತ್ತಮವಾಗಿವೆ ಎನಿಸುವುದು ಸಹಜ. ಹಾಗೆಯೇ ಸಾಕಷ್ಟು ಅಂಶಗಳಲ್ಲಿ ಅವರಿಗಿರುವ ನೈಪುಣ್ಯ ನಮ್ಮಲ್ಲಿರಲಾರದು ಎನ್ನುವುದನ್ನೂ ಮರೆಯುವಂತಿಲ್ಲ! ತಾನಷ್ಟೇ ಶ್ರೇಷ್ಠ ಎಂಬ ಭಾವದಲ್ಲಿ ನಿನಗೇನು ಗೊತ್ತಿಲ್ಲವೆಂದು ಅವಮಾನಿಸುವುದಾಗಲೀ, ತಾನು ಒಪ್ಪಿದ್ದನ್ನೇ ಮರುಮಾತಿಲ್ಲದೇ ಸಮ್ಮತಿಸಬೇಕು ಎನ್ನುವುದಾಗಲೀ ಸಂಬಂಧವನ್ನು ಸಡಿಲಗೊಳಿಸುವುದಷ್ಟೇ!

ಬೇಡದ ಸಂಬಂಧ

ಉಸಿರುಗಟ್ಟಿಸುವ ಪ್ರೇಮ ಸಂಬಂಧ ಏನಿದ್ದರೂ ಭಾವನಾತ್ಮಕವಾಗಿ ನಮ್ಮನ್ನು ಬರಿದಾಗಿಸುತ್ತ ದೆಯೇ ವಿನಃ ಪೋಷಿಸುವುದಿಲ್ಲ. ನಿಜವಾಗಿಯೂ ನಾವು ಪೊರೆಯುವ ಸಂಬಂಧವೊಂದನ್ನು ಸಲಹು ತ್ತಿದ್ದೇವೆಯೋ ಇಲ್ಲವೇ ಹಿಂಸಿಸುವ ಬೇಡದ ಸಂಬಂಧವೊಂದರಲ್ಲಿ ಸಿಲುಕಿದ್ದೇವೆಯೋ ಪರಿಶೀಲಿಸುವುದು ಮುಖ್ಯ. ಜೊತೆಗೇ ನಾವೇ ಏನಾದರೂ ನಮ್ಮವರನ್ನು ಕಾಡುತ್ತಾ ಅವರಿಗೆ ಬಂಧನದ ಭಾವ ಮೂಡಲು ಕಾರಣರಾಗಿದ್ದೇವೆಯೋ ಎಂಬ ಸ್ವವಿಮರ್ಶೆ ಮಾಡಿಕೊಳ್ಳದೇ ಇರಲಾರದು!

ಭಿನ್ನತೆಯ ಸಂತೋಷ

ಹಾಗೆ ನೋಡಿದರೆ ಪರಸ್ಪರ ಆಯ್ಕೆ, ಅಭಿರುಚಿಗಳು ಒಂದೇ ಇರಬೇಕೆಂದೇನು ನಿಯಮವಿಲ್ಲ. ಒಂದೇ ತೆರನಾದ ಸಂಗೀತ, ಆಟೋಟಗಳಲ್ಲಿ ಆಸಕ್ತಿ ಹೊಂದಿ ಒಂದೇ ಬಣ್ಣದ ಧಿರಿಸಿನಲ್ಲಿ ಓಡಾಡಿದ ಮಾತ್ರಕ್ಕೆ ಬಂಧ ಚೆಂದವಿದೆ ಎಂದರ್ಥವಲ್ಲ. ಮುಖ್ಯವಾಗಿ ಸಂಬಂಧಗಳನ್ನು ಪೊರೆಯುವ ಕಾಳಜಿ, ಹೊಸದಕ್ಕೆ ತೆರೆದುಕೊಂಡ ಮನೋಭಾವವಿದ್ದಲ್ಲಿ ಪರಸ್ಪರ ಭಿನ್ನತೆಯನ್ನು ಆನಂದಿಸುತ್ತಾ ಆಸಕ್ತಿ- ಅಭಿರುಚಿಯನ್ನು ಉತ್ತೇಜಿಸುತ್ತಾ, ತನ್ನವರ ಆಸ್ಥೆ-ಅಭಿಲಾಷೆಗಳ ಜಗತ್ತಿನೊಳಗೆ ತಾನೂ ಅಡ್ಡಾಡಿ ಬರಲೂಬಹುದು!

ತನ್ನವರ ಹಿತ

ಪ್ರೀತಿಯಲ್ಲಿ ಎಂದಿಗೂ ತನ್ನವರ ಹಿತದ ಬಗ್ಗೆ ಯೋಚನೆಯಿರುವುದೇ ಹೊರತು ತನ್ನ ಇಷ್ಟಾನಿಷ್ಟ, ನಿರ್ಣಯಗಳನ್ನು ಒಪ್ಪಿಕೊಳ್ಳಬೇಕೆಂಬ ಪ್ರತಿಷ್ಠೆಯಿರದು. ಅಲ್ಲದೇ ಅವರ ಹಿತಕ್ಕಾಗಿಯೇ ತಾನೇ ನಿರ್ಧಾರ ತಳೆಯುತ್ತಿದ್ದೇನೆ ಎಂಬ ಧೋರಣೆಯೂ ಸಲ್ಲ. ಒಂದು ಮಗುವಿಗೂ ತನ್ನದೇ ಆಯ್ಕೆಯ ಹಕ್ಕು, ಅಧಿಕಾರಗಳಿರುತ್ತವೆ. ಅಂತಹುದರಲ್ಲಿ ಪ್ರೀತಿ ಇಬ್ಬರು ಸಮಾನರ ನಡುವಿನ ಉತ್ಕೃಷ್ಟ ಭಾವಾನುಭೂತಿಯಾಗ ಬೇಕೇ ವಿನಃ ಒಬ್ಬರು ಇನ್ನೊಬ್ಬರ ಮೇಲೆ ಚಲಾಯಿಸುವ ಹಿಡಿತ, ಅಧಿಕಾರವಲ್ಲ.

click me!